

ನಿನ್ನೆ ತುಮರಿಯ ಗೋಪಾಲ ಗೌಡ ರಂಗಮಂದಿರ ತುಂಬಿ ತುಳುಕಿತು.



ಒಂದಿಷ್ಟು ಕೌತುಕ..ಮುಂದೇನು ಎಂಬ ಕುತೂಹಲ…ಕಣ್ಣೆದುರೇ ನಡೆದದ್ದು ಸತ್ಯ ಎಂದು ಅಂದುಕೊಳ್ಳುವ ಹೊತ್ತಿಗೆ ಅದರ ವಿರುದ್ಧವಾಗಿ ನಂಬಿದ್ದು ಸುಳ್ಳು ಎಂದು ತರ್ಕಬದ್ಧವಾಗಿ ಬಿಡಿಸುವ ಕ್ರಮ….ನೆರೆದವರ ಚಪ್ಪಾಳೆ.. ಮೆಚ್ಚುಗೆ. ಸಹಮತ ವೇದಿಕೆ ತುಮರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ ಹುಲಿಕಲ್ ನಟರಾಜ್ ಪವಾಡ ಬಯಲು ಮಾಡಿ 3 ಗಂಟೆ ಕಾಲ ಜನರನ್ನು ಹಿಡಿದಿಟ್ಟಿತು.. ಪ್ರಶ್ನೆಯಾಗಿ ಕಾಡಿತು…ಉತ್ತರವಾಗಿ ಹೊಳೆಯಿತು. ಸತ್ಯ ಎಂದು ಒಪ್ಪಿಕೊಳ್ಳುವಂತೆ ವಿಜ್ಞಾನ ಬೆಳಕು ನೆರೆದವರನ್ನು ಆವರಿಸಿತು. ಹೊಸ ತಲೆಮಾರಿನ ಯುವ ಜನತೆ ಸ್ವತಃ ತಾವೇ ಪಾಲ್ಗೊಂಡು ಸತ್ಯದ ಜತೆ ಪವಾದವನ್ನು ಎದುರು ಮಾಡಿದರು.
ತಾರ್ಕಿಕವಾಗಿ ಯೋಚನೆ, ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಎದೆಗಾರಿಕೆ ಎಲ್ಲವನ್ನು ನಟರಾಜ್ ಸರ್ ತಮ್ಮ ಮೊನಚಾದ ಭಾಷೆಯಲ್ಲಿ ವಿವರಿಸಿದರು.ಇದಕ್ಕೂ ಮುನ್ನ ನಡೆದದ್ದು ಸನ್ಮಾನ. ವಯಕ್ತಿಕವಾಗಿ ನಾನು ಮತ್ತು ಪ್ರಸನ್ನ ಕೆರೆಕೈ ವಿರುದ್ಧ ಸಿದ್ದಾಂತ ಮತ್ತು ರಾಜಕೀಯ ಹಾದಿಯಲ್ಲಿ ಇರುವವರು. ತುಮರಿ ಸೇತುವೆ ಹೋರಾಟ ರೂವಾರಿ ಆಗಿ ದ್ವೀಪದ ದ್ವನಿಯಾಗಿದ್ದು ಈಗ ಇತಿಹಾಸ. ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಈಚೆ ವರ್ಷದಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ರಾಜ್ಯದ ಯೋಜನಾ ಆಯೋಗದ ಸದಸ್ಯರಾಗಿ ನಿಯುಕ್ತಿಗೊಂಡಿದ್ದಾರೆ. ಪಾಲಿಸಿ ಮೇಕಿಂಗ್ ನಲ್ಲಿ ಮಹತ್ವದ ಕೆಲಸ ನಿರ್ವಹಿಸುವ ಆಯೋಗದಲ್ಲಿ ನಮ್ಮ ನೆಲದ ಕೆರೆಕೈ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸುವ ಪ್ರಸ್ತಾಪ ಸಹಮತ ಸಭೆಯಲ್ಲಿ ಒಪ್ಪಿಗೆ ಪಡೆದಿದ್ದೆ. ನಿನ್ನೆ ನೆಲದ ನಾಗರಿಕ ಸನ್ಮಾನವನ್ನು ಪ್ರಸನ್ನ ಕೆರೆಕೈ ಗೆ ಸಲ್ಲಿಸಲಾಯಿತು. ಅವರು ಹೆಚ್ಚಿನದನ್ನು ಸಾಧಿಸಲಿ ಎಂಬ ಹಾರೈಕೆ ನಮ್ಮೆಲ್ಲರದೂ…
ನೆಲದ ವಿಚಾರ ಬಂದಾಗ ಪಕ್ಷ, ಜಾತಿ, ಸಿದ್ಧಾಂತ, ವೈಯಕ್ತಿಕ ಭಿನ್ನಾಭಿಪ್ರಾಯ ಎಲ್ಲವನ್ನು ಮೀರುವೆವು ಎಂಬುದು ಸಹಮತ ಆಶಯ ದ್ವನಿಸಿದೆ.ತುಮರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ವಿದ್ಯಾರ್ಥಿಗಳು ಮತ್ತು ಜನ ಮೆಚ್ಚಿದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತ ಇರುವ ವನಜಾಕ್ಷಿ ಯವರು ಮತ್ತು sslc ಮತ್ತು puc ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಶುಭ ಕೊರಲಾಯಿತು.
ತಾ ಪಂ ಸದಸ್ಯೆ ಸವಿತಾ ದೇವರಾಜ್ ನಮ್ಮ ಜತೆಗೆ ಇದ್ದರುಹಾರೈಸಿದ ನಿಮಗೆ. ಹುಲಿಕಲ್ ಜತೆಯಾಗಿ ಪ್ರಾಯಾಸ ಪಟ್ಟು ಲಾಂಚ್ ದಾಟಿಸಿ ಸಹಮತಕ್ಕೆ ಜತೆಯಾದ ಗೆಳೆಯ ಪರಮೇಶ್ ಕರೂರು, ವಿಟಿ ಸ್ವಾಮಿ, ಮತ್ತು ಸತ್ಯನಾರಾಯಣ ಖಂಡಿಕಾ, ಅ ನ ಚಂದ್ರಶೇಖರ್ ಗೆ ವಿಶೇಷ ಕೃತಜ್ಞತೆಗಳು. ಹಾಗೂ ಕಾರ್ಯಕ್ರಮ ಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು…ನಿಮ್ಮ ಪ್ರೀತಿ ಸಹಮತ ಮೇಲೆ ಹೀಗೆ ಇರಲಿ. ಆ ಬಲದಲ್ಲಿ ನಾವು ಜನಮುಖಿ ಆಗಿ ಹಣತೆ ಹಚ್ಚುತ್ತೇವೆ…
ಜಿ. ಟಿ ವಿಥ್ ಸಹಮತ.
