

ತಮಿಳುನಾಡಿನ 35 ವರ್ಷದ ಶಾಸಕರೊಬ್ಬರು 19ರ ಹರೆಯದ ಯುವತಿಯೊಂದಿಗೆ ರಹಸ್ಯ ವಿವಾಹಹವಾಗಿರುವುದು ಇದೀಗ ವಿವಾದಕ್ಕೆ ಎಡೆ ಮಾಡಿದೆ.


ವಿಲ್ಲುಪುರಂ: ತಮಿಳುನಾಡಿನ 35 ವರ್ಷದ ಶಾಸಕರೊಬ್ಬರು 19ರ ಹರೆಯದ ಯುವತಿಯೊಂದಿಗೆ ರಹಸ್ಯ ವಿವಾಹಹವಾಗಿರುವುದು ಇದೀಗ ವಿವಾದಕ್ಕೆ ಎಡೆ ಮಾಡಿದೆ.
ತಮಿಳುನಾಡಿನ ಕಲ್ಲಕುರಿಚಿ ಕ್ಷೇತ್ರದ ಎಐಎಡಿಎಂಕೆಯ ಶಾಸಕ ಎ ಪ್ರಭು ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ 19 ವರ್ಷದ ಯುವತಿಯೊಂದಿಗೆ ವಿವಾಹವಾಗಿದ್ದಾರೆ. ಈ ವಿವಾಹ ಇದೇ ಸೋಮವಾರ (ಅಕ್ಟೋಬರ್ 5) ನಡೆದಿದೆ. ಆದರೆ ಇದೊಂದು ಗುಟ್ಟಿನಲ್ಲಿ ನಡೆದ ಮದುವೆ ಎಂದು ಆರೋಪಿಸಿರುವ ಯುವತಿಯ ಕುಟುಂಬ ವಿವಾಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಯುವತಿಯ ತಂದೆ ಸ್ವಾಮಿನಾಥನ್ ತನ್ನ ಮಗಳನ್ನು ಅಪಹರಿಸಿ ಬಲವಂತವಾಗಿ ವಿವಾಹ ಮಾಡಿಕೊಳ್ಳಲಾಗಿದೆಎಂದು ಆರೋಪಿಸಿ ಶಾಸಕರ ಮದುವೆ ಮಂಟಪದ ಎದುರೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಈ ಸಂಬಂಧ ಸಂತ್ರಸ್ಥೆಯ ಪೋಷಕರು ತ್ಯಾಗದುರುಗಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನ್ನ ದೂರಿನಲ್ಲಿ ಸ್ವಾಮಿನಾಥನ್ ಶಾಸಕ ಪ್ರಭುವಿನಿಂದ ತಮಗೆ ಕೊಲೆ ಬೆದರಿಕೆ ಇದೆ. ಅಲ್ಲದೆ ಅವರು ಆಡಳಿತ ಪಕ್ಷದ ದೊಡ್ಡ ನಾಯಕರಾಗಿರುವುದರಿಂದ ಯಾರೂ ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಹಿಂದೆ ಅದೇ ಶಾಸಕ ಇದೀಗ ವಿವಾಹವಾಗಿರುವ ನನ್ನ ಪುತ್ರಿಯನ್ನೂ ಕೊಲ್ಲುವ ಬೆದರಿಕೆ ಹಾಕಿದ್ದನೆಂದೂ ದೂರಿನಲ್ಲಿ ವಿವರಿಸಲಾಗಿದೆ.
ಇನ್ನು ಇದೊಂದು ಅಂತರ್ಜಾತಿಯ ವಿವಾಹವಾಗಿದೆ. ಆದರೆ ಸಂತ್ರಸ್ಥೆಯ ತಂದೆ “ತಮಗೆ ಜಾತಿಯ ಸಮಸ್ಯೆ ಇಲ್ಲ, ವಯಸ್ಸಿನ ಅಂತರವೇ ಸಮಸ್ಯೆಯಾಗಿದೆ” ಎಂದು ಹೇಳಿದ್ದಾರೆ.
ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮದುವೆಯನ್ನು ಸರಳವಾಗಿ ನೆರವೇರಿಸಲಾಗಿದೆ. ಹಾಗಾಗಿ ವಿವಾಹಕ್ಕೆ ಹೆಚ್ಚಿನ ಸಂಖ್ಯೆಯ ಜನರಿಗೆ ಆಹ್ವಾನವಿರಲಿಲ್ಲ ಎಂದು ಶಾಸಕ ಪ್ರಭು ಹೇಳಿದ್ದಾರೆ.
ಮೂಲಗಳ ಪ್ರಕಾರ, ಪ್ರಭು ಮದುವೆಯಾದ ಹುಡುಗಿಯನ್ನು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ತಿಳಿದವರಾಗಿದ್ದರು.ಮತ್ತು ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯ ತಂದೆ ಮಾತ್ರ “ಇದೊಂದು ಷಡ್ಯಂತ್ರ” ಎಂದು ಆರೋಪಿಸಿದ್ದಾರೆ. ಇದೀಗ ಈ ವಿವಾಹ ತಮಿಳು ನಾಡಿನಾದಂತ ದೊಡ್ದ ಚರ್ಚೆಗೆ ಆಸ್ಪದ ನೀಡಿದೆ. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
