

ಆಶಾಕಿರಣ ಟ್ರಸ್ಟ ಮತ್ತು ಲಯನ್ಸ್ ಶತಮಾನೋತ್ಸವ ಸ್ಮರಣೆಯ ವೃತ್ತಿಪರ ತರಬೇತಿ ಕೇಂದ್ರ ಹಾಳದಕಟ್ಟಾ ಸಿದ್ದಾಪುರ (ಉ.ಕ) ದಿಂದ ಮಹಿಳೆಯರಿಗಾಗಿ ಅಕ್ಟೋಬರ 15 ರಿಂದ ಮೂರು ತಿಂಗಳ ಅವಧಿಯ ಉಚಿತ ಹೊಲಿಗೆ ತರಬೇತಿ ಶಿಬಿರ ಏರ್ಪಡಿಸಲಾಗಿದೆ. 18 ರಿಂದ 35 ವಯೋಮಿತಿಯ ಮಹಿಳೆಯರಿಗೆ ಮಾತ್ರ ತರಬೇತಿ ಪಡೆಯಲು ಅವಕಾಶವಿದೆ. ಕೇವಲ 20 ಜನ ಅಭ್ಯರ್ಥಿಗಳಿಗೆ ಅವಕಾಶವಿದ್ದು ಆಸಕ್ತರು ನೋಂದಣೆ ಫಾರ್ಮ ತುಂಬಿ ಅಗತ್ಯ ದಾಖಲೆಗಳೊಂದಿಗೆ ದಿನಾಂಕ: 12-10-2020 ರಂದು ಜಗದ್ಗುರು ಮುರುಘ ರಾಜೇಂದ್ರ ಅಂಧ ಮಕ್ಕಳ ಶಾಲೆಯಲ್ಲಿ ಮುಂಜಾನೆ 10-30 ಘಂಟೆಗೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸ ಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಶಿಬಿರದ ಮಾಹಿತಿಗಳನ್ನು ತಿಳಿಸಲಾಗುವದು. ನೋಂದಣಿ ಫಾರ್ಮಗಳನ್ನು ಜಗದ್ಗುರು ಮುರುಘ ರಾಜೇಂದ್ರ ಅಂಧ ಮಕ್ಕಳ ಶಾಲೆಯಲ್ಲಿ ಮುಂಜಾನೆ 11 ಘಂಟೆಯಿಂದ ಅಪರಾಹ್ನ 1 ಘಂಟೆಯ ಒಳಗೆ (ಭಾನುವಾರ ಹೊರತು ಪಡಿಸಿ) ಪಡೆದುಕೊಳ್ಳಬಹುದು.
ಆಸಕ್ತರು ಮಾಹಿತಿಗಾಗಿ ಮತ್ತು ನೋಂದಣಿ ಫಾರ್ಮ ಪಡೆಯಲು ಸಂಪರ್ಕಿಸ ಬೇಕಾದ ವಿಳಾಸ:
ನಾಗರತ್ನ (ಶಿಕ್ಷಕರು, ಜಮುರಾ ಅಂಧ ಮಕ್ಕಳ ಶಾಲೆ)
ಸ್ಥಳ: ಜಗದ್ಗುರು ಮುರುಘ ರಾಜೇಂದ್ರ ಅಂಧ ಮಕ್ಕಳ ಶಾಲೆ, ಹಾಳದಕಟ್ಟಾ, ಸಿದ್ದಾಪುರ
ವಿಶ್ವನಾಥ ಶೇಟ್ ರಿಗೆ ಶೃದ್ಧಾಂಜಲಿ
ಸಿದ್ದಾಪುರ -5 ಕನ್ನಡ ಹಾಗೂ ಕೊಂಕಣಿ ಭಾಷಾ ಸಾಹಿತಿ ವಿಶ್ವನಾಥ ಶೇಟ್ ಹಾರ್ಸಿಕಟ್ಟಾ ರ ನಿಧನದಿಂದ ಸಾಹಿತ್ಯ ಲೊಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಆಕಾಶವಾಣಿ ಮೂಲಕ ಅನೇಕ ಚಿಂತನ, ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ನೀಡಿದ್ದರು. ಕೊಂಕಣಿ ಭಾಷೆಯಲ್ಲಿ ರಾಮಚರಿತ ಎಂಬ ಮಹಾಕಾವ್ಯ ರಚಿಸಿದ್ದರು. ಯಕ್ಷಗಾನ ಪ್ರಸಾದನ ಕಲೆ, ಹಾಗೂ ವೇಷ ಭೂಷಣ ತಯಾರಕರಾಗಿದ್ದು ಕಲೆಯನ್ನು ಬೆಳೆಸುವಲ್ಲಿ ಶ್ರಮಿಸಿದ್ದರು. ರಾಜ್ಯ ಯಕ್ಷಗಾನ ಹಾಗೂ ಜಾನಪದ ಅಕಾಡೆಮಿ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಇನ್ನೂ ಕೆಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ಸರಳ ಸಜ್ಜನಿಕೆಯ ಬರಹಕಾರರು ಕಲಾವಿದರಾಗಿದ್ದ ಅವರ ನಿಧನ ಪ್ರಯುಕ್ತ ತಾಲೂಕಾ ಕನ್ನಡಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬರೆಹಗಾರ ಜಿ.ಜಿ. ಹೆಗಡೆ ಬಾಳಗೋಡ ಶ್ರದ್ಧಾಂಜಲಿ ಕೋರಿದ್ದಾರೆ.
ಶ್ರದ್ಧಾಂಜಲಿ
ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ(ರಿ) ದೊಡ್ಮನೆ ಮತ್ತು ಅಭಿಮಾನಿಗಳೊಂದಿಗೆ ಇತ್ತೀಚೆಗೆ ನಿಧನರಾದ ಶ್ರೀ ವಿಶ್ವನಾಥ ಶೆಟ್ ಹಾರ್ಸಿಕಟ್ಟಾ (ಮೆಣಸಿನ ಮನೆ) ರಿಗೆ ದಿನಾಂಕ: 04-10-2020ರ ಭಾನುವಾರ ಸಂಜೆ 5-00 ಘಂಟೆಗೆ ದೊಡ್ಮನೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಯಿತು. ಒಂದು ನಿಮಿಷದ ಮೌನಾಚರಣೆಯೊಂದಿಗೆ ಪುಷ್ಮಾನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಂಕರನಾರಾಯಣ ಹೆಗಡೆ ಮಾತನಾಡಿ ವಿಶ್ವನಾಥ ಶೇಟ್ ಮತ್ತು ನಮ್ಮ ಸಂಘದ ಸಂಪರ್ಕ ತೀರಾ ಹತ್ತಿರದಿಂದ ಕೂಡಿದ್ದು ಬಣ್ಣಗಾರಿಕೆಯಲ್ಲಿ ವಿಶೇಷ ಪರಿಣಿತಿಯನ್ನು ಪಡೆದು ಸೇವೆ ಸಲ್ಲಿಸಿದ್ದರೆಂದು ಹೇಳಿದರು.
ಸದಸ್ಯರಾದ ತಿಮ್ಮಪ್ಪ ಭಟ್ಟ ಮಾತನಾಡಿ ಅವರ ಬಣ್ಣಗಾರಿಕಾಕಲೆ ಅಧ್ಯಯನ ಪೂರ್ವಕವಾಗಿ ಶಾಸ್ತ್ರೀಯವಾಗಿ ಅರ್ಥಪೂರ್ಣವಾಗಿ ಕೂಡಿರುತ್ತಿತ್ತೆಂದು ಪ್ರಶಂಸೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ಕೇಶವ ಹೆಗಡೆ ಮಾತನಾಡಿ ವಿಶ್ವನಾಥ ಶೇಟ್ ರು ಉತ್ತಮ ವಾಗ್ಮಿಗಳು ಮತ್ತು ಕವಿಗಳು ಆಗಿದ್ದರು ಎಂದು ಹೇಳಿದರು ಮತ್ತು ಇತ್ತೀಚೆಗೆ ನಿಧನರಾದ ಶ್ರೀ ಬಾಬುರಾವ್ ಹಣಜಿಬೈಲ್ ಶ್ರೀ ಜಿ. ಜಿ. ಹೆಗಡೆ ತಲೆಕೆರೆ ಇವರು ಕೂಡಾ ಯಕ್ಷಗಾನಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದನ್ನು ಸ್ಮರಿಸಿಕೊಂಡು ಅವರಿಗೂ ಶೃದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಸಂತ ಹೆಗಡೆ ಹಳ್ಳಿಬೈಲ್, ಕುಮಾರಿ ವರ್ಷಿಣಿ ಹಳ್ಳಿಬೈಲ್, ಗಣಪತಿ ಶಾಸ್ತ್ರಿ ಬೆಳವಂತೆ, ಕೃಷ್ಣಮೂರ್ತಿ ಭಟ್ಟ ಹಾಜರಿದ್ದರು.
