ಒಂದು ಹನಿ ನೀರು ಎರಡು ಬಿಂದುಗಳಾಗುವ ಪವಾಡ!

ನನ್ನೂರಿನ ಮಳೆ ಬಿಂದು.ಭೌಗೋಳಿಕವಾಗಿ ಸಹ್ಯಾದ್ರಿ ಪರ್ತದ ಶಿರಸ್ಸು ಶಿರಸಿ ನಗರವಾಗಿ ಬೆಳೆದಿದೆ ಶಿರಸಿ ನಗರದಿಂದ ಪೂರ್ವಕ್ಕೆ15 ಕಿ ಮಿ ಕ್ರಮಿಸಿದರೆ ಈಗ ನಾನು ವಾಸ್ಥವ್ಯದಲ್ಲಿರುವ ನನ್ನೂರು ಎಕ್ಕಂಬಿ-ಬಿಸಲಕೊಪ್ಪ, ಅವಳಿನಗರಗಳಂತೆ ಈ ಅವಳಿ ಹಳ್ಳಿ ಬೆಸುದುಕೊಂಡಿದೆ.ಈಗ ನನ್ನೂರು ಗ್ರಾಮೀಣಮುಸುಕು ಸರಿಸಿ ಅರೆ ಪಟ್ಟಣದ ವೇಷದರಿಸಿ ಬೆಳೆಯುತ್ತಿದೆ.. ಕರ್ನಾಟಕಲ್ಲಿಯೆ ಏಕೈಕ ಅಪರೂಪದ ನಿತ್ಯ ಪೂಜೆಗೊಳ್ಳುವ ಶ್ರೀ ಸೂರ್ಯನಾರಾಯಣ ದೇವರು ನಮ್ಮ ಗ್ರಾಮದೇವತೆ.. ಈ ದೇವಸ್ಥಾ ನದ ಹಿಂದೆಯೆ ನೂರಾರು ಎಕರೆ ಕರಡದ ಬೇಣವಿದೆ (ಜಾನುವಾರುಗಳಿಗೆ ಹುಲ್ಲು ಬೆಳೆಯುವ ಪ್ರದೇಶ) ಈ ಹುಲ್ಲುಗಾವಲಿನ ನೆತ್ತಿಯ ಮೇಲೆ ನಿಂತು ಇಲ್ಲಿ ಸುರಿಯುವ ಮಳೆಯ ರಭಸವನ್ನು ಅನುಭವಿಸಿದರೆ ಮಾತ್ರ ಅದರ ಸೊಬಗು ರೌದ್ರತೆ ಭೀಕರ ತಂಪು ಸ್ವಭಾವಗಳನ್ನು ವರ್ಣಿಸಬಹುದು.

ಈ ಹುಲ್ಲು ಗಾವಲಿನ ನೆತ್ತಿಯ ಮೇಲೆ ಬಿದ್ದ ಮಳೆಹನಿ ಸಿಡಿದು ಚೂರುಗಳಾಗಿ ಮೂರು ದಿಕ್ಕಿನ ಇಳಿಜಾರಲ್ಲಿ ಬದುಕಿನ ಪಯಣದ ಸಾರ್ಥಕತೆಗಾಗಿ ಓಡುತ್ತವೆ.. ಹೀಗೆ ಬಿದ್ದ ಮಳೆಯ ಬಿಂದು ಪೂರ್ವಾಭಿ ಮುಖವಾಗಿ ಹರಿಯುವಾಗ ಊರಿನ ಹಳ್ಳ ಸವಳುಗಳನ್ನು ಸೇರಿ ಮುಂದೆ ಧರ್ಮನದಿಯಲ್ಲಿ ಕರಗಿ ಬಳಿಕ ಮಳಗಿ ಸಮೀಪದ ಧರ್ಮಜಲಾಶಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ದಣಿವಾರಿಸಿಕೊಂಡು ದಣಿವಿನ ಬೇಗೆಯಲ್ಲಿ ದಣಿದ ಹಾನಗಲನಲ್ಲಿ ರೈತರಿಗೆ ನಗುವಿನ ವರವಾಗಿ ಮುಂದೆ ವರದಾ ನದಿ ಸೇರಿ ಬಯಲು ಸೀಮೆಯಲ್ಲಿ ಹಸಿರನ್ನು ಹೆಚ್ಚಿಸಿ ಮತ್ತೆ ತುಂಗಾಭದ್ರೆಯರಲ್ಲಿ ಮುಳುಗೇ ಳುತಾ ಮಂತ್ರಾಲಯದ ಮಠಕ್ಕೆ ಪ್ರದಕ್ಷಿಣೆ ಹಾಕಿ ಬಳಿಕ ಕೃಷ್ಣೆಯನ್ನು ಕೂಡಿ ಮಿಲನ ಸುಖದ ಸಂಭ್ರಮದೋಂದಿಗೆ ವಿಶಾಖಪಟ್ಟಣದ ಬಂಗಾಳಕೊಲ್ಲಿ ಸೇರುವಾಗ ಸುಮಾರು 840 ಕಿ ಮಿ ಪ್ರಯಾಣ. ರೋಚಕ ಕಥನದಂತೆ ಭಾಸವಾಗುತ್ತದೆ.

ಆದರೆ ಮತ್ತರ್ಧ ಬಿಂದು ಮತ್ತೆ ವಿಭಾಗವಾಗಿ ಪಶ್ಚಿಮಾಭಿಮುಖವಾಗಿ ಹರಿಯುತ್ತಾ ಒಂದು ಚಿಕ್ಕ ಹಳ್ಳದ ಮೂಲಕ ಧರ್ಮ ನದಿಯ ಬಲಭಾಗದಲ್ಲಿ ಹರಿದು ಘಟ್ಟ ಇಳಿಯುವಾಗ ಬೆಣ್ಣೆ ಹೊಳೆಯಲ್ಲಿ ಮಿಂದು ಚಂಡಿಕಾನದಿಯಲ್ಲಿ ಜಲಕ್ರೀಡೆಯಾಡಿ ಅಘನಾಶಿನಿಯ ಒಡಲೊಳಗೆ ಬೆಚ್ಚಗೆ ಅವಿತು ಉಂಚಳ್ಳಿಯಲ್ಲಿ ನೊರೆಯ ಜಲಪಾತವಾಗಿ ಧುಮುಕಿ ಕುಮಟಾದಲ್ಲಿಯ ನದಿಪಾತ್ರದ ಹಳ್ಳಿಗಳಲ್ಲಿ ನೆರೆಯಾಗಿ ಕೆಲವೊಮ್ಮೆ ಅವರ ಕಣ್ಣೀರನ್ನು ತನ್ನುದರದಲ್ಲಿ ಸೇರಿಸಿಕೊಂಡು ಅಘನಾಶಿನಿ ತದಡಿ ಬಂದರುಗಳ ಬಳಿ ಕಲಗಾ, ಬಳಚು,ಏಡಿ ಸಿಗಡಿಯಂತಹ ಜಲಚರಗಳ ಜೀವಕ್ಕೆ ಆಸರೆಯಾಗಿ, ಅಘನಾಶಿನಿ -ತದಡಿ ಗ್ರಾಮಗಳನ್ನು ವಿಭಜಿಸಿ ತದಡಿ ಸರ್ವ ಋತು ಬಂದರನ್ನು ನಿರ್ಮಿಸಿ ಅರಬಿ ಸಮುದ್ರ ಸೇರುವಾಗ 80 ಕಿ ಮಿ ದೂರ ಪ್ರಯಾಣದ ಖುಷಿ ಅನುಭವಿಸುತ್ತದೆ…

ಮತ್ತೊಂದು ನೀರ ಹನಿ ಚಿಕ್ಕ ಹಳ್ಳಗಳ ಮೂಲಕ ದಕ್ಷಿಣಕ್ಕೆ ಹರಿದು ಕೆಂಗ್ರೆ ಹೊಳೆ ಸೇರಿ ಶಿರಸಿ ನಗರದ ದಾಹ ತಣಿಸುವ ಗಂಗೆಯಾಗಿ ಮನ ತಣಿಸಿದ ಬಳಿಕ ಶಾಲ್ಮಲಾ ನದಿ ಸೇರಿ ನರ್ತಿಸುತ್ತಾ ಮುಂದೆ ಬೇಡ್ತಿನದಿಯಲ್ಲಿ ಲೀನವಾಗಿ ಬಳಿಕ ಗಂಗಾವಳಿ ನದಿಯಲ್ಲಿ ಮಿಂದು ಅಂಕೋಲಾದಲ್ಲಿ ಅರಬಿ ಸಮುದ್ರ ಸೇರುತ್ತದೆ ತಾನು ಹರಿಯುವ ಮಾರ್ಗದುದ್ದಕ್ಕೂ ದಟ್ಟ ನಿತ್ಯ ಹರಿದ್ವರ್ಣ ಕಾಡನ್ನು ಬೆಳೆಸುತ್ತಾ ತನ್ನ ಭೂಸ್ಪರ್ಷದ ಬದುಕಿನ ಧನ್ಯತೆಯನ್ನು ಪಡೆಯುತ್ತದೆ ಹೀಗೆ ನನ್ನೂರಿನಲ್ಲಿಯ ಮಳೆಯ ಬಿಂದುವೊಂದು ತನ್ನ ಗಮ್ಯತೆಯ ಪಡೆವಲ್ಲಿ ದಟ್ಟ ಕಾನನದ ಮಡಿಲಲ್ಲಿ ಬೆಳ್ಳಿ ನೊರೆಯಾಗಿ,ಹಸುರಿಗೆ ಆಸರೆಯಾಗಿ,ಅನೇಕ ಜೀವ ಸಂಕುಲಗಳ ಸೃಷ್ಟಿಗೆ ಸಹಕರಿಸಿ ತನ್ನ ಯಾತ್ರೆಯ ಧನ್ಯತೆ ಪಡೆಯುತ್ತವೆ…

-ರಾಜು ನಾಯ್ಕ, ಬಿಸಲಕೊಪ್ಪ

ನದಿ_ಮೂಲ_ಅರಸಿ_ಬೆಟ್ಟದ_ಬೆನ್ನೇರಿ ……..ಇದು ನಮ್ಮೂರಿನ ಕಾಡಿನ ನಡುವಿನ ಉಬ್ಬು. ಉಬ್ಬು ಎಂದರೆ ಕಾಡಿನ ಎತ್ತರದ ಪ್ರದೇಶ. ಕಣಿವೆಯ ದಡಗಳ ಭುಜ ಭಾಗ. ನಾನು ನಿಂತಿರುವ ಈ ಜಾಗಕ್ಕೆ ಭೌಗೋಳಿಕವಾಗಿ ಬಹಳ ಮಹತ್ವ ಇದೆ. ಕುತೂಹಲಕಾರಿ ಭೌಗೋಳಿಕ ವಿದ್ಯಮಾನದ ಕೇಂದ್ರ ಬಿಂದು ಇದು. ಒಂದು ರೀತಿಯ ನೈಸರ್ಗಿಕ ವಿಭಜಕ ರೇಖೆಯ ಮೇಲೆ ನಾನು ನಿಂತಿರುವೆ.ಮೂರೂ ಕಡೆ ಇಳಿಜಾರಿರುವ ಉಬ್ಬಿನ ನೆತ್ತಿಯ ಈ ಜಾಗದಲ್ಲಿ ಬೀಳುವ ಪ್ರತಿ ಮಳೆ ಹನಿಯೂ ಚದುರಿ ಸಿಡಿದರೆ, ಎರಡು ಕಣಿವೆಗಳ ಪಾಲಾಗುತ್ತದೆ. ಸಂಪಳ್ಳಿ ಮತ್ತು ಜಂಬೂರುಮನೆ ಎಂಬ ಎರಡು ಹಳ್ಳಿಗಳನ್ನು ಬೇರ್ಪಡಿಸುವ ಈ ಬಿಂದುವಿನಿಂದ ಉತ್ತರ ಮತ್ತು ಪೂರ್ವ ದಿಕ್ಕಿನ ಕಣಿವೆ ಪೂರ್ವಾಭಿಮುಖಿ ನೀರಿನ ಹರಿವಿಗೂ, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಕಣಿವೆ ಪಶ್ಚಿಮವಾಹಿನಿ ನೀರಿನ ಹರಿವಿಗೂ ನೆಲೆ.ಹಾಗಾಗಿ ಇಲ್ಲಿ ಬಿದ್ದ ಹನಿ ಒಡೆದರೆ ಅದರ ಒಂದು ಭಾಗ ಸಂಪಳ್ಳಿ ಸವಳು(ಕಣಿವೆ ನೀರಿನ ತೊರೆ) ಸೇರಿ, ಅಲ್ಲಿಂದ ಕಲ್ಲುಸಾರದ ಹಳ್ಳ, ಮುಂದೆ ಅಂಬ್ಲಿಗೊಳ್ಳ ಜಲಾಶಯ, ನಂತರ ಶಿಕಾರಿಪುರದ ಗೌರಿ ಹಳ್ಳ, ನಂತರ ಮದಗದ ಕೆರೆ, ಬಳಿಕ ವರದಾ ನದಿ, ಮುಂದೆ ತುಂಗಭದ್ರಾ ನದಿ, ಬಳಿಕ ಕೃಷ್ಣಾ ನದಿ, ಕೊನೆಗೆ ಬಂಗಾಳ ಕೊಲ್ಲಿಯ ಪಾಲಾಗುತ್ತದೆ. ಇದು ಸಂಪಳ್ಳಿಯ ಈ ‘ಸೀಗೆಮಟ್ಟಿ ಉಬ್ಬಿ’ನಿಂದ ಬಂಗಾಳ ಕೊಲ್ಲಿವರೆಗಿನ ಅರೆ ಹನಿಯೊಂದರ ರೋಚಕ ಪಯಣ.

ಒಡೆದ ಹನಿಯ ಮತ್ತೊಂದು ಪಾಲು, ಜಂಬೂರುಮನೆ ಸವಳು ಸೇರಿ, ಅಲ್ಲಿಂದ ಬ್ಯಾಡರಕೊಪ್ಪ ಹಳ್ಳ ಸೇರಿ, ಮುಂದೆ ನಂದಿಹೊಳೆ ಸೇರಿ, ನಂತರ ಶರಾವತಿಯ ಒಡಲು ಸೇರುತ್ತದೆ. ಲಿಂಗನಮಕ್ಕಿಯಲ್ಲಿ ನಿಂತು, ಜೋಗದ ಗುಂಡಿಯಲ್ಲಿ ಜಿಗಿದು, ಗೇರುಸೊಪ್ಪಾ, ಹೊನ್ನಾ ವರ ಮೂಲಕ ಅರಬ್ಬೀ ಕಡಲು ಸೇರುತ್ತದೆ. ಈ ನಡುವೆ ನಿಮ್ಮ ಮನೆಯ ವಿದ್ಯುತ್ ದೀಪದ ಬೆಳಕಾಗಿಯೂ ಬೆಳಗುತ್ತದೆ! ಇದು ಮತ್ತರ್ಧ ಹನಿಯ ಪಶ್ಚಿಮವಾಹಿನಿ ಪಯಣದ ಕಥೆ.

ಹೀಗೆ ಒಂದು ಹನಿ ಮಳೆ, ಒಂದು ಬೊಗಸೆ ನೀರು, ಒಂದು ಕಾಲುದಾರಿಯ ಹರಿವು ಎರಡಾಗಿ, ತೊರೆಯಾಗಿ, ತೊರೆ ಹಳ್ಳವಾಗಿ ಹಳ್ಳ ಹೊಳೆಯಾಗಿ, ಹೊಳೆ ನದಿಯಾಗಿ, ನದಿ ಕಡಲಾಗುವ ಪರಿಗೆ ಈ ಸೀಗೆಮಟ್ಡಿ ಉಬ್ಬು ಅಮಾಯಕ ಸಾಕ್ಷಿ.ಹೀಗೆ ನದಿ ಮೂಲ ಅರಸುವ ರೋಚಕ ಹವ್ಯಾಸ ಇಪ್ಪತ್ತು ವರ್ಷಗಳ ಹಿಂದೆ ಒಂದು ಕುತೂಹಲಕಾರಿ ಬರಹಕ್ಕೆ ಕಾರಣವಾಗಿತ್ತು. ಈಗ ಮೊನ್ನೆ ಕಾಡಲ್ಲಿ ಅಲೆವಾಗ ಈ ವಿಭಜಕ ಬಿಂದುವಿನಲ್ಲಿ ಕ್ಷಣ ನಿಂತಾಗ ಎಲ್ಲ ನೆನಪಾಯಿತು.. ನಿಮ್ಮೂರಲ್ಲೂ ಇಂಥ ಕುತೂಹಲಕಾರಿ ನಿಗೂಢಗಳಿರಬಹುದು.. ಅಲ್ಲವಾ?ಹಾಂ.. ಮತ್ತೊಂದು ವಿಶೇಷವೆಂದರೆ ಇದೇ ಸೀಗೆ ಮಟ್ಟಿ ಉಬ್ಬಿನಲ್ಲೇ ನನ್ನ ಬಾಲ್ಯದ ದಿನಗಳಲ್ಲಿ ಅಜ್ಜಿಯ ಮನೆಯಿಂದ ಬರುವಾಗ, ಈ ಕಗ್ಗಾಡಿನ ನಡುವಿನ ಕಾಲುದಾರಿಯಲ್ಲೇ ಹುಲಿ ದರ್ಶನವಾಗಿತ್ತು. ಅದು ನಾನು ಕಂಡ ಮೊದಲ ಜೀವಂತ ಹುಲಿ. ಹಾಗೇ ಇದೇ ದಾರಿಯಲ್ಲೇ ಕೆಸರಲ್ಲಿ ಜಾರಿ ಬಿದ್ದು ಅಂಗೈ ಸಿಗಿದು ಹೋಗಿತ್ತು. ಆ ಗುರುತು ಕೂಡ ಈಗಲೂ ಇದೆ ಮಾಸದೆ, ಹುಲಿಯ ಮೊದಲ ನೋಟದಷ್ಟೇ ನಿಚ್ಛಳವಾಗಿ.. ಹಾಗಾಗಿ ಇದು ನನ್ನ ಪ್ರಜ್ಞೆಯ ಭಾಗವೇ ಆಗಿಹೋಗಿದೆ. ಈಗಲೂ ಈ ಅಸುಪಾಸಲ್ಲಿ ಹುಲಿ ಒಡನಾಟ ಇದೆ…ಮೊನ್ನೆ ಕೂಡ ಹುಲಿ ಪಂಜ ತೀಡಿದ ಗುರುತುಗಳು ಕಾಲುದಾರಿಯುದ್ದಕ್ಕೂ ಸಿಕ್ಕವು!ಇದು ವೈಯಕ್ತಿಕವಾಗಿ ನನಗೂ ಈ ಸೀಗೆಮಟ್ಟಿ ಉಬ್ಬಿಗೂ ಇರುವ ನಂಟು..

-ಶಶಿ ಸಂಪಳ್ಳಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *