viral news of india today…..! ಹುಡುಗರ ನಿದ್ದೆಗೆಡಿಸಿದ ಯುವತಿಯ ”ರೇಟ್ ಕಾರ್ಡ್”!

‘Rented Girlfriend’: ಬಾಡಿಗೆ ”ಗರ್ಲ್ ಫ್ರೆಂಡ್” ಬೇಕಾ?.. ಹುಡುಗರ ನಿದ್ದೆಗೆಡಿಸಿದ ಯುವತಿಯ ”ರೇಟ್ ಕಾರ್ಡ್”!

ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಬಾಡಿಗೆ ”ಗರ್ಲ್ ಫ್ರೆಂಡ್” ಅಥವಾ ಬಾಡಿಗೆ ಬಾಯ್ ಫ್ರೆಂಡ್ ಸಂಸ್ಕೃತಿ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಹಣ ಕೊಟ್ಟರೆ ಡೇಟಿಂಗ್ ಗೆ ಬರುತ್ತೇನೆ ಎಂಬ ಯುವತಿಯೊಬ್ಬಳ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಬಾಡಿಗೆ ಗರ್ಲ್ ಫ್ರೆಂಡ್ (ಸಾಂದರ್ಭಿಕ ಚಿತ್ರ)

ಬಾಡಿಗೆ ಗರ್ಲ್ ಫ್ರೆಂಡ್ (ಸಾಂದರ್ಭಿಕ ಚಿತ್ರ)

ನವದೆಹಲಿ: ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಬಾಡಿಗೆ ”ಗರ್ಲ್ ಫ್ರೆಂಡ್” ಅಥವಾ ಬಾಡಿಗೆ ಬಾಯ್ ಫ್ರೆಂಡ್ ಸಂಸ್ಕೃತಿ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಹಣ ಕೊಟ್ಟರೆ ಡೇಟಿಂಗ್ ಗೆ ಬರುತ್ತೇನೆ ಎಂಬ ಯುವತಿಯೊಬ್ಬಳ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಹೌದು.. ಹಣ ಕೊಟ್ಟರೆ ಗೆಳತಿ ಮತ್ತು ಗೆಳೆಯನನ್ನು ಬಾಡಿಗೆಗೆ ತೆಗೆದುಕೊಳ್ಳುವ ವಿಧಾನ ಭಾರತಕ್ಕೂ ಕಾಲಿಟ್ಟಿದ್ದು, ಹಣ ಕೊಟ್ಟರೆ ಡೇಟಿಂಗ್ ಗೆ ಬರುತ್ತೇನೆ ಯುವತಿಯೊಬ್ಬಳು ಯುವಕರನ್ನು ಆಹ್ವಾನಿಸಿದ್ದಾಳೆ. ಮಾತ್ರವಲ್ಲದೇ ದಿನಕ್ಕೆ ಇಷ್ಟು ಹಣ ಕೊಟ್ಟರೆ, ನಿಮ್ಮೊಂದಿಗೆ. ಡೇಟ್‌ ಮಾಡಲು ಬರುತ್ತೇನೆ ಎಂದು ಯುವತಿ ರೇಟ್ ಕಾರ್ಡ್ ಕೂಡ ಪೋಸ್ಟ್ ಮಾಡಿದ್ದಾಳೆ. ಯುವತಿಯ ಈ ಇದೀಗ ಎಲ್ಲೆಡೆ ವೈರಲ್‌ ಆಗಿದ್ದು, ಭಾರಿ ಚರ್ಚೆಯಾಗುತ್ತಿದೆ.

ಬಾಡಿಗೆ ಗರ್ಲ್ ಫ್ರೆಂಡ್ (ಸಾಂದರ್ಭಿಕ ಚಿತ್ರ)

ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್‌ ಮಾಡಿರುವ ಯುವತಿ, ‘ನೀವು ಸಿಂಗಲ್‌ ಆಗಿ ಬೇಜಾರಾಗಿದ್ದೀರಾ? ನಾನು ನಿಮ್ಮೊಂದಿಗೆ ಡೇಟ್‌ ಮಾಡಲು ರೆಡಿ. ಆದರೆ, ದಿನಕ್ಕೆ 5 ಸಾವಿರ ರೂಪಾಯಿ ಕೊಡಬೇಕು ಎಂದು ಬರೆದುಕೊಂಡಿದ್ದಾಳೆ. ಅಷ್ಟು ಮಾತ್ರವಲ್ಲದೇ ಡೇಟಿಂಗ್ ವೇಳೆ ನೀಡುವ ಪ್ರತೀ ”ಸೇವೆ” (Service)ಗೂ ಇಂತಿಷ್ಟು ಹಣ ಎಂದು ರೇಟ್ ಕಾರ್ಡ್ ಅನ್ನು ಕೂಡ ನೀಡಿದ್ದಾಳೆ.

ಕಾಫಿ ಡೇಟ್‌ಗೆ 1500ರೂ, ಮಾಮೂಲಿ ಡೇಟ್‌ಗೆ 2000 ರೂ., ಸಿನಿಮಾಗೆ ಹೋಗುವುದಕ್ಕೆ 2000, ಡಿನ್ನರ್‌ಗೆ 2000, ಫ್ಯಾಮಿಲಿ ಮೀಟಿಂಗ್‌ಗೆ 3000, ಯಾವುದಾದರೂ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು 3500 ರೂ. ಮತ್ತು ಬೈಕ್‌ ಡೇಟ್‌ಗೆ 4 ಸಾವಿರ ರೂ. ಕೊಡಬೇಕಂತೆ.

ಇದಿಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಡೇಟಿಂಗ್‌ ಫೋಟೋ ಪೋಸ್ಟ್‌ ಮಾಡಲು 6 ಸಾವಿರ ರೂಪಾಯಿ ಕೊಡಬೇಕು. ಇಡೀ ದಿನ ಒಟ್ಟಿಗೆ ಇರಬೇಕಾದರೆ 5 ಸಾವಿರ ರೂ., ಮನೆಯಲ್ಲಿ ಒಟ್ಟಿಗೆ ಅಡುಗೆ ಮಾಡಿ ತಿನ್ನಲು 3500 ರೂ. ಅವಳೊಂದಿಗೆ ಶಾಪಿಂಗ್‌ ಮಾಡಲು 4500 ರೂ. ಹಾಗೂ ಎರಡು ದಿನಗಳ ಕಾಲ ಒಟ್ಟಿಗೆ ಪ್ರವಾಸಕ್ಕೆ ಹೋಗಬೇಕಾದರೆ 10 ಸಾವಿರ ರೂ. ಪಾವತಿಸಬೇಕು ಎಂದು ರೇಟ್ ಕಾರ್ಡ್ ನಲ್ಲಿ ನಮೂದಿಸಿದ್ದಾಳೆ.

ಬಾಡಿಗೆ 'ಗರ್ಲ್ ಫ್ರೆಂಡ್''

ಬಾಡಿಗೆ ‘ಗರ್ಲ್ ಫ್ರೆಂಡ್”

ಯುವತಿಯ ಪೋಸ್ಟ್ ನೋಡಿದ ನೆಟ್ಟಿಗರು ಒಂದು ಕ್ಷಣ ಶಾಕ್‌ ಆಗಿದ್ದು, ಯುವತಿಯ ಈ ಪೋಸ್ಟ್ ಗೆ 16 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.

ಇಷ್ಟಕ್ಕೂ ಯಾರು ಈ ಯುವತಿ

ಈ ಯುವತಿ ದಕ್ಷಿಣ ದೆಹಲಿ ಮೂಲದವಳು ಎಂದು ಹೇಳಿಕೊಂಡಿದ್ದು, ತಾನು ಕಟ್ಟುನಿಟ್ಟಾದ ಸಸ್ಯಾಹಾರಿ ಎಂದು ಬರೆದುಕೊಂಡಿದ್ದಾಳೆ. ಇನ್ಸ್‌ಸ್ಟಾಗ್ರಾಂನಲ್ಲಿ ಆಕೆಯ ಖಾತೆಯನ್ನು divya_giri__ ಎಂದು ಗುರುತಿಸಲಾಗಿದೆ. ಈ ಯುವತಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ 12 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾಳೆ. ಈ ಪೋಸ್ಟ್ ಗೂ ಮುನ್ನ ಈ ಯುವತಿಯ ಫಾಲೋವರ್ಸ್‌ ಗಳ ಸಂಖ್ಯೆ 11 ಸಾವಿರವಿತ್ತು. ಆದರೆ ಈ ಪೋಸ್ಟ್ ಬಳಿಕ ಹೆಚ್ಚುವರಿ ಬರೊಬ್ಬರಿ 1 ಸಾವಿರ ಮಂದಿ ಆಕೆಯನ್ನು ಫಾಲೋ ಮಾಡತೊಡಗಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *