

ಆರ್ ಆರ್ ನಗರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಆಸ್ತಿ ಎಷ್ಟು?
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಐಎಎಸ್ ಅಧಿಕಾರಿ ದಿ. ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಸಾಲಗಾರ್ತಿಯಾಗಿದ್ದು, ಬೈರಮ್ಮ ಎಂಬುವರಿಂದ 20,48,000 ರೂ. ಸಾಲ ಪಡೆದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಐಎಎಸ್ ಅಧಿಕಾರಿ ದಿ. ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಅವರು ಸಾಲಗಾರ್ತಿಯಾಗಿದ್ದು, ಬೈರಮ್ಮ ಎಂಬುವರಿಂದ 20,48,000 ರೂ. ಸಾಲ ಪಡೆದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಪ್ರಮಾಣಪತ್ರದಲ್ಲಿ ಪತಿಯ ಹೆಸರಾಗಲೀ ಕುಟುಂಬಸ್ಥರ ವಿವರವಾಗಲೀ ಉಲ್ಲೇಖಿಸಿಲ್ಲ.
ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ 1,41,050 ರೂ. ನಗದು, ಕೆನರಾ ಬ್ಯಾಂಕಿನಲ್ಲಿ 1,76,670.85 ರೂ, ಬ್ಯಾಂಕ್ ಆಫ್ ಬರೋಡಾದಲ್ಲಿ 1,000 ರೂ, ಎಸ್ ಬಿಐ ನಾಗರಭಾವಿ ಬ್ಯಾಂಕ್ – 41,620. 24 ರೂ. ಹೊಂದಿದ್ದು, ವಿವಿಧ ಬಾಂಡ್, ಶೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ.
2,05,000 ರೂ ವೈಯಕ್ತಿಕ ಸಾಲ, 56,58,316 ರೂ. ಎಬಿಎಚ್ ಇನ್ಫ್ರಾಸ್ಟ್ರಕ್ಚರ್ಸ್ ಹೆಸರಿನಲ್ಲಿ ಸಾಲ ಹೊಂದಿದ್ದಾರೆ. 1,100 ಗ್ರಾಂ ಒಡವೆ, 45,00,000 ರೂ. ಮೌಲ್ಯದ ಉಡುಗೊರೆ ಕುಸುಮಾ ಬಳಿಯಿದೆ.
ಕುಸುಮಾ ಬಳಿ ಯಾವುದೇ ಸ್ವಂತ ವಾಹನವಿಲ್ಲ. ಒಟ್ಟು 1,13,02,197. 38 ರೂ ಮೌಲ್ಯದ ಚರಾಸ್ತಿ ಹೊಂದಿರುವ ಕುಸುಮಾಗೆ ಯಾವುದೇ ಕೃಷಿ ಭೂಮಿಯಿಲ್ಲ.
ಬಿಬಿಎಂಪಿ ವಾರ್ಡ್ 40ರಲ್ಲಿ 17, 84, 575 ರೂ. ಮೌಲ್ಯದ 1500 ಚದರ ಅಡಿ ಹಾಗೂ 2380 ಚದರಡಿ ವಿಸ್ತೀರ್ಣದ ಎರಡು ನಿವೇಶನನ ಹೊಂದಿದ್ದು, ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದು, ವೇತನವೇ ಆರ್ಥಿಕ ಮೂಲ ಎಂದಿದ್ದಾರೆ.
ಕುಸುಮಾ ಅವರು ಮೂಲತಃ ಶ್ರೀಮಂತ ಕುಟುಂಬದಿಂದ ಬಂದಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ಡಿಕೆ ರವಿಯನ್ನು ವಿವಾಹವಾಗಿದ್ದ ಕುಸುಮಾ ವಿದೇಶದಲ್ಲಿ ಶಿಕ್ಷಣ ಪೂರೈಸಿದ್ದಾರೆ. ಚುನಾವಣಾ ಅಖಾಡಕ್ಕೆ ಇಳಿಯುವುದಕ್ಕಿಂತ ಮೊದಲು ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. (kpc)
ಸಮಾಜವಾದಿ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ನಾಗರಾಜ ನಾಯ್ಕ ನೇಮಕ.
ಸಿದ್ದಾಪುರದ ಮುಗದೂರಿನಲ್ಲಿ ಅನಾಥಾಶ್ರಮ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ನಾಗರಾಜ ನಾಯ್ಕರವರನ್ನು ಸಮಾಜವಾದಿ ಪಕ್ಷದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾದ ರಾಬಿನ್ ಮ್ಯಾಥ್ಯೂಸ್ ರವರು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನೇಮಕಾತಿ ಪತ್ರ ನೀಡಿದ್ದಾರೆ.
ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ದರಾಗಿ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಲು ಹಾಗೂ ಒಂದು ತಿಂಗಳ ಒಳಗೆ ಪಕ್ಷದ ಉತ್ತರ ಕನ್ನಡ ಜಿಲ್ಲಾ ಘಟಕವನ್ನು ರಚಿಸಲು ಸೂಚಿಸಿದ್ದಾರೆ.
ಈಗಾಗಲೇ ಹಲವಾರು ರಾಜಕೀಯ ಪಕ್ಷಗಳಲ್ಲಿ ಕಾರ್ಯನಿರ್ವಹಿಸಿ ರಾಜಕೀಯ ಅನುಭವ ಹೊಂದಿರುವ ನಾಗರಾಜ ನಾಯ್ಕರು ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವ ಗೊಂಡಿದ್ದರು.
ಕಾರ್ಯಕಾರಿಣಿ ಸಭೆ-
ಸಿದ್ದಾಪುರ,
ಭಾರತೀಯ ಜನತಾ ಪಾರ್ಟಿಯ ಮಂಡಲ ಕಾರ್ಯಕಾರಿಣಿ ಸಭೆ ಪಟ್ಟಣದ ಭಾ.ಜ.ಪ ಕಛೇರಿಯಲ್ಲಿ ನಡೆಯಿತು. ಮುಂಬರುವ ವಿಧಾನ ಪರಿಷತ್ತು ಚುನಾವಣೆ ಹಾಗೂ ಗ್ರಾ.ಪಂ ಚುನಾವಣೆಯ ತಯಾರಿ ಬಗ್ಗೆ ಕೆ.ಜಿ ನಾಯ್ಕ ಹಣಜಿಬೈಲ್, ಮಂಡಲ ಪ್ರಭಾರಿ ಎಂ.ಜಿ ಭಟ್ಟ ಕುಮಟಾ, ನಾಗರಾಜ ನಾಯ್ಕ ಮಾತನಾಡಿದರು. ಸಭೆಯಲ್ಲಿ ಪಕ್ಷದ ಪಧಾಧಿಕಾರಿಗಳಾದ ಪ್ರಸನ್ನ ಹೆಗಡೆ, ಎಸ್.ಕೆ ಮೇಸ್ತಾ, ಹರೀಶ ಗೌಡರ್, ಸುಮನಾ ಕಾಮತ್, ಕೃಷ್ಣಮೂರ್ತಿ ಕಡಕೇರಿ ಹಾಗೂ ಮೋರ್ಚಾಗಳ ಅಧ್ಯಕ್ಷರು ಹಾಜರಿದ್ದರು.
ರೈತರ ದಿನಾಚರಣೆ- ಸಿದ್ದಾಪುರ: ತಾಲೂಕಿನ ಕಾನ್ಸೂರ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಬರೋಡಾ ರೈತರ ಪಾಕ್ಷಿಕ ಆಚರಣೆಯ ಸಂದರ್ಭದಲ್ಲಿ ಬರೋಡಾ ರೈತರ ದಿನಾಚರಣೆ ಆಚರಿಸಲಾಯಿತು.
ಶಾಖೆಯ ವ್ಯವಸ್ಥಾಪಕರಾದ ಸಂಬಾಜಿ ಎಸ್. ಎಸ್, ಮಾತನಾಡಿ ಬ್ಯಾಂಕ್ ನಿಂದ ರೈತರಿಗೆ ಸಾಗುವ ಸಾಲಸೌಲಭ್ಯ ಗಳು, ವಿಮಾ ಸೌಲಭ್ಯ ಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಸಹಾಯಕ ವ್ಯವಸ್ಥಾಪಕ ರಾಜೇಶ ಭೋವಿ, ಕ್ಲರ್ಕ್ ಆಶಾ ಹೆಗಡೆ, ರೈತರು ಉಪಸ್ಥಿತರಿದ್ದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಸಿದ್ದಾಪುರ ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರ ದ ಸಮಾಲೋಚಕ ಶಿವಶಂಕರ ಎನ್ .ಕೆ. ಬ್ಯಾಂಕ್ ಗಳಲ್ಲಿ ಸಿಗುವ ಸೌಲಭ್ಯ ಗಳ ಪಾಂಪ್ಲೇಟ್ ವಿತರಿಸಿ ಆರ್ಥಿಕ ಸಾಕ್ಷರತೆ ಬಗ್ಗೆ ತಿಳಿಸಿ
ಕಡಿಮೆ ಹಣದಲ್ಲಿ ಸಿಗುವ ವಿಮೆಗಳು, ಇತರ ಸೌಲಭ್ಯ ಗಳ ಬಗ್ಗೆ ಮಾಹಿತಿ ನೀಡಿದರು.



