

ಉತ್ತರ ಕನ್ನಡ ಜಿಲ್ಲೆಯ ಯೋಜನಾ ಕಾರ್ಮಿಕರು, ಶ್ರಮಿಕರು, ಮಹಿಳೆಯರನ್ನು ಅವಮಾನಿಸಿದ ಯಲ್ಲಾಪುರದ ತಹಸಿಲ್ಧಾರರ ವಿರುದ್ಧ ಶುಕ್ರವಾರ ಸಿ.ಆಯ್.ಟಿ.ಯು. ಸಮಾನ ಮನಸ್ಕ ಸಂಘಟನೆಗಳೊಂದಿಗೆ ಪ್ರತಿಭಟನೆ ಸಂಘಟಿಸಿದೆ.

ಯಲ್ಲಾಪುರ ತಹಸಿಲ್ಧಾರರು ಕಾರ್ಮಿಕ ಸಂಘಟನೆ, ಯೋಜನಾ ಕಾರ್ಯಕರ್ತರನ್ನು ಅವಮಾನಿಸಿ ಪ್ರಭುತ್ವದ ದರ್ಪ ತೋರಿದ್ದಾರೆ. ಇವರ ಮೇಲೆ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಲು ಶುಕ್ರವಾರ ಪ್ರತಿಭಟನೆ ಆಯೋಜಿಸಿದ್ದೇವೆ ಎಂದು ಕಾರ್ಮಿಕ ಮುಖಂಡೆ ಯಮುನಾ ಗಾಂವ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಲ್ಲಾಪುರ ತಹಸಿಲ್ಧಾರರು ಕೆಲವು ಸಂಘಟನೆಗಳ ಮುಖಂಡರಿಗೆ ಅಸಂಬದ್ಧ ಮತ್ತು ಅವಮಾನಕರವಾಗಿ ನಿಂದಿಸಿದ್ದಕ್ಕೆ ಬಹಿರಂಗವಾಗಿ ಬೇಶರತ್ ಕ್ಷಮೆ ಕೇಳಲು ಸಂಘಟನೆಗಳು ಆಗ್ರಹಿಸಿವೆ.
