

ಸತ್ಯಾಗ್ರಹ ಸ್ಮಾರಕ ಭವನ ಸ್ಥಳ ನಿಗದಿ, ಪಟ್ಟಣ ಪಂಚಾಯತ್ ಅಧ್ಯಕ್ಷ,ಉಪಾಧ್ಯಕ್ಷರ ಮೀಸಲಾತಿ, ಕೆ.ಜಿ.ನಾಯ್ಕ ರಿಗೆ ವಿ.ಪ.ಸದಸ್ಯತ್ವ ಅಥವಾ ನಿಗಮ,ಮಂಡಳಿ ಸ್ಥಾನಮಾನ ಈ ವಿಷಯಗಳ ಬಗ್ಗೆ ಮಾತನಾಡಿದ ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ಹೆಸರು ಹೇಳದೆ ನಯವಾಗಿ ಟಾರ್ಗೆಟ್ ಮಾಡಿದ್ದು ಅವರನ್ನೇ .ಅಂದಹಾಗೆ ಈ ಕೋಲ್ಡ್ವಾರ ಕಂತುಕಂತುಗಳಲ್ಲಿ ನಿಧಾನವಾಗಿ, ಪರೋಕ್ಷವಾಗಿ ಶಾಸಕ ವಿಶ್ವೇಶ್ವರ ಹೆಗಡೆಯವರ ವಿರುದ್ಧದ ವ್ಯೂಹ ರಚನೆಯ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.


