

ಹುಲಿಮನೆ ಶಾಸ್ತ್ರಿಯವರ ನಾಟಕ ಪರಂಪರೆಗೆ ಅದರದ್ದೇ ಆದ ವಿಶಿಷ್ಟ ಚರಿತ್ರೆಯಿದೆ.ಹುಲಿಮನೆ ಸೀತಾರಾಮ ಶಾಸ್ತ್ರಿ ಅಂದಿನ ನಾಟಕ ಲೋಕದ ಅಚ್ಚಳಿಯದ ಹೆಸರು. ಅವರ ಕುಟುಂಬ ರಂಗಸೌಗಂಧವೆಂಬ ಸಂಸ್ಥೆ ಸ್ಥಾಪಿಸಿ ಆ ಪರಂಪರೆಯನ್ನು ಮುಂದುವರಿಸಿದೆ. ಮೂರ್ನಾಲ್ಕು ತಲೆಮಾರಿನ ಹುಲಿಮನೆ ರಂಗಸೌಗಂಧ ಈಗ ಮಲೆನಾಡಿನ ಹವ್ಯಾಸಿ ರಂಗತಂಡವಾಗಿ ಈಗಲೂ ನಾಟಕ,ಚಲನಚಿತ್ರ, ರಂಗಸಂಘಟನೆಗಳ ಚಟುವಟಿಕೆಗಳ ಮೂಲಕ ಹೆಸರುಮಾಡುತ್ತಿದೆ. ರಂಗಸೌಗಂಧದ ಗಣಪತಿ ಹೆಗಡೆ ಹುಲಿಮನೆ ಸಮಾಜಮುಖಿಗೆ ಮೂಖಾಮುಖಿ ಆಗಿದ್ದಾರೆ.

