ಸೆಂಟ್ ಮಿಲಾಗ್ರೀಸ್ ಬ್ಯಾಂಕಿನ ಶಿರಸಿ ಶಾಖೆಯ ಸಿಬ್ಬಂದಿ ಎ.ಎನ್. ಅಭಿಷೇಕ್ ಕೊಲೆಯಾದರೆ? ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ.
ಕಳೆದ ಎರಡು ತಿಂಗಳ ಹಿಂದೆ ಶಿರಸಿ ಸೇಂಟ್ ಮಿಲಾಗ್ರೀಸ್ ಶಾಖೆ ಸೇರಿದ್ದ ಅಭಿಷೇಕ್ ಈ ತಿಂಗಳ 2ನೇ ತಾರೀಖಿನ ಗಾಂಧಿಜಯಂತಿ ರಜೆ ಹಿನ್ನೆಲೆಯಲ್ಲಿ ತನ್ನ ಸ್ನೇಹಿತರು, ಸಹನೌಕರರೊಂದಿಗೆ ದಬ್ಬೆಫಾಲ್ಸ್ ಪ್ರವಾಸಕ್ಕೆ ಹೋಗಿದ್ದವ ರು ಹೆಣವಾಗಿ ಮರಳಿದ್ದಾರೆ.
ಶಿರಸಿಯ ಪ್ರತಿಷ್ಠಿತ ಭಾಶಿ ಬಿ.ಟಿ.ನಾಯ್ಕರ ಕುಟುಂಬದ ಕುಡಿಯಾಗಿದ್ದ ಅಭಿಷೇಕ್ ಹೆಸ್ಕಾಂ ಉದ್ಯೋಗಿ ಅಶೋಕ ನಾಯ್ಕರ ದ್ವಿತಿಯ ಪುತ್ರ. ಸ್ನೇಹಿತರು, ಸಂಗಡಿಗರೊಂದಿಗೆ ಶಿರಸಿ ದಬ್ಬೆ ಫಾಲ್ಸ್ ಗೆ ಪಿಕನಿಕ್ ಗೆ ಹೋಗಿದ್ದ ಅಭಿಷೇಕ್ ಸಾವಿನ ಸುದ್ದಿ ತಿಳಿಯುತ್ತಲೇ ಗಾಬರಿಯಾದ ಕುಟುಂಬ ತಾಂತ್ರಿಕ ಪೊಲೀಸ್ ದೂರೊಂದನ್ನು ನೀಡಿ ಅಂತಿಮ ವಿಧಿ ಪೂರೈಸಿದೆ.
ವಿಚಿತ್ರವೆಂದರೆ… ಈ ಶವ ದಬ್ಬೆ ಫಾಲ್ಸ್ ನ ನೀರಿನಲ್ಲಿ ಬಿದ್ದು ಅಥವಾ ನೀರಿನಿಂದ ಮೃತರಾದ ಪ್ರಕರಣವಾಗಿದ್ದರೆ ಹೊಟ್ಟೆಯಲ್ಲಿ ನೀರು ತುಂಬಿರಬೇಕಿತ್ತು. ಆದರೆ ಅವರ ಕುಟುಂಬ ವರ್ಗ, ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಈ ದೇಹದಲ್ಲಿ ನೀರು ತುಂಬಿರಲಿಲ್ಲ! ವ್ಯಕ್ತಿ ನೀರುಕುಡಿಯುವ ಮೊದಲೇ ಸಾವನ್ನಪ್ಪಿರುವ ಸಂಶಯ,ಅನುಮಾನಗಳನ್ನು ಗೃಹಿಸದ ಕುಟುಂಬ ವರ್ಗ ಪೊಸ್ಟ್ ಮಾರಟಮ್ ಗೆ ಮುಂದಾಗದಿರುವ ತಪ್ಪು ನಡೆದಿದೆ. ಅನುಮಾನಕ್ಕೆಡೆಯಾಗುವಂತಿದ್ದ ಈ ಸಾವಿನ ಶವದ ಪೋಸ್ಟ್ ಮಾರ್ಟಮ್ ನಡೆದಿದ್ದರೆ ಇಂಥ ಸಂಶಯ, ಅನುಮಾನಗಳಿಗೆ ದಾಖಲೆ ಸಿಗಬಹುದಿತ್ತೇನೋ? ಆದರೆ ಗಡಿಬಿಡಿ, ತರಾತುರಿ ಮುಂದಾಲೋಚನೆ,ಅನುಮಾನಗಳಿಗೆ ಎಡೆ ಮಾಡದೆ ಶವ ಸಂಸ್ಕಾರ ಮಾಡಿರುವುದರಿಂದ ಈ ಸಾವಿನ ರಹಸ್ಯ ಬಯಲಾಗುವುದು ಕಷ್ಟ.
ಆದರೆ….. ಪ್ರವಾಸಕ್ಕೆ ತೆರಳಿದ್ದ ಉದ್ಯೋಗಿಗಳು ಅಭಿಷೇಕ್ ನ ಸ್ನೇಹಿತರು, ಅವರ ಸಂಪರ್ಕದ ವ್ಯಕ್ತಿಗಳ ವಿಚಾರಣೆ ಹಾಗೂ ಮೊಬೈಲ್ ಸಂಖ್ಯೆ, ಸಂಪರ್ಕ, ಮೃತರ ಸಂಬಂಧ-ಸಂಪರ್ಕ ಇತಿಹಾಸಗಳನ್ನು ಭೇದಿಸುವುದರಿಂದ ಈ ಅಸಹಜ ಸಾವಿನ ನಿಜ ಕಾರಣ ತಿಳಿಯಬಹುದೇನೋ? ಶಿರಸಿಯ ನಾರಾಯಣಗುರುನಗರದ ಯುವಕನ ಈ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗೌರವಾನ್ವಿತ ಭಾಷಿ ಬಿ.ಟಿ. ನಾಯ್ಕರ ಕುಟುಂಬ ಮಾತ್ರ ಈ ಪ್ರಕರಣದಿಂದ ದುಖ:ತಪ್ತವಾಗಿದೆ.