

ಹೋರಾಟಗಾರ,ರಾಜಕಾರಣಿ, ಮುಖಂಡ,ಜನಪ್ರತಿನಿಧಿ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಅಭಿರುಚಿಯವನಾದರೆ ಅದರಿಂದ ಅನುಕೂಲ. ಜನಪ್ರತಿನಿಧಿತ್ವ, ಮುಖಂಡತ್ವಕ್ಕೆ ಶಿಕ್ಷಣ, ಸಾಹಿತ್ಯ, ಭಾಷೆ, ಚಿಂತನೆ, ಸಿದ್ಧಾಂತಗಳೆಲ್ಲಾ ಹೆಚ್ಚು ಪೂರಕ. ಇಂಥ ಬಹುಮುಖಿ ವ್ಯಕ್ತಿತ್ವದ ಯಮುನಾ ಗಾಂವ್ಕರ್ ಸಾಹಿತ್ಯ, ಪುಸ್ತಕ ಪ್ರೀತಿಯಿಂದ ಬರವಣೆಗೆ, ಪುಸ್ತಕ ಪ್ರಕಟಣೆ ಮಾಡಿ ಹೋರಾಟಕ್ಕೆ ಹೆಚ್ಚು ಮೆರಗು ತಂದಿದ್ದಾರೆ. ಅವರ ಸಾಹಿತ್ಯ ಕೃಷಿಯ ಅನುಭವ ಈ ಮೂಖಾಮುಖಿಯ ಪ್ರಮುಖ ಅಂಶ.





