
ಸಿದ್ಧಾಪುರ ಎಂ.ಜಿ.ಸಿ. ಕಾಲೇಜ್ ಸಾಧನೆ- ಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ 2020-21 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗದಿರುವ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯು ಯು ಟೂಬ್‌ನಲ್ಲಿ ಫ್ರಿ ರೆಕಾರ್ಡಿಂಗ್ ವಿಡೀಯೋ ತರಗತಿಗಳನ್ನು ಪ್ರಾರಂಭಿಸಿದೆ.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡವು 2020 ರ ಸೆಪ್ಟಂಬರ್ ತಿಂಗಳಿನಲ್ಲಿ ಜರುಗಿಸಿದ ಬಿ.ಎ, ಬಿ.ಕಾಂ ಹಾಗೂ ಬಿ.ಎಸ್ಸಿ ಆರನೆಯ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಸಿದ್ಧಾಪುರ ಎಂ.ಜಿ.ಸಿ. ಮಹಾವಿದ್ಯಾಲಯದ ಫಲಿತಾಂಶ ಈ ಕೆಳಗಿನಂತಿದೆ.
ವಿಜ್ಞಾನ ವಿಭಾಗದಲ್ಲಿ ಶೇ. 100%, ಕಲಾ ವಿಭಾಗದಲ್ಲಿ ಶೇ. 100% ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ. 90.7% ಫಲಿತಾಂಶ ದಾಖಲಿಸಿ ಸಾಧನೆ ಮಾಡಿದೆ. ಅದರ ವಿವರ ಈ ಕೆಳಗಿನಂತಿದೆ.
ವಿಜ್ಞಾನ ವಿಭಾಗ:
ವಿಭಾ ಭಟ್ ಪ್ರಥಮ 90.5%
ದರ್ಶನ್ ಬತ್ತಿಕೊಪ್ಪ ದ್ವಿತೀಯ 88.6%
ಮೇಘಾ ಎಂ. ಮಡಿವಾಳ ತೃತೀಯ 84.5%
ಕಲಾ ವಿಭಾಗ:
ಪ್ರೀತಿ ಕೆ. ನಾಯ್ಕ ಪ್ರಥಮ 82.42%
ಹರ್ಷಿತಾ ಎಸ್. ನಾಯ್ಕ ದ್ವಿತೀಯ 79.85%
ಪ್ರಸನ್ನ. ಜಿ. ಮಡಿವಾಳ ತೃತೀಯ 79%
ವಾಣಿಜ್ಯ ವಿಭಾಗ:
ಅಕ್ಷತಾ ವಾಮನ್ ಪೈ ಪ್ರಥಮ 95.4%
ಸುನೀತಾ ಬೀರಾ ಗೌಡ ದ್ವಿತೀಯ 94.5%
ಪವಿತ್ರಾ ಸೀತಾರಾಮ್ ಶೆಟ್ ತೃತೀಯ 94%
ಕೋವಿಡ್- 19 ದೇಶದಾದ್ಯಂತ ವ್ಯಾಪಿಸಿರುವ ಸಂಕಷ್ಟದ ಸಂದರ್ಭದಲ್ಲೂ ಇಂತಹ ಸಾಧನೆ ಮಾಡಿರುವುದಕ್ಕೆ ಆಡಳಿತ ಮಂಡಳಿ ಅಭಿನಂದಿಸಿದೆ.

ಬೆಂಗಳೂರು: ಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ 2020-21 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗದಿರುವ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯು ಯು ಟೂಬ್‌ನಲ್ಲಿ ಫ್ರಿ ರೆಕಾರ್ಡಿಂಗ್ ವಿಡೀಯೋ ತರಗತಿಗಳನ್ನು ಪ್ರಾರಂಭಿಸಿದೆ.
ರಾಜ್ಯ ಸರ್ಕಾರ ಸಹ ಕೇಂದ್ರ ಸರ್ಕಾರದಂತೆ 1 ರಿಂದ 12 ನೇ ತರಗತಿವರೆಗೆ ಶೇ. 30 ರಷ್ಟು ಪಠ್ಯ ವಸ್ತುವನ್ನು ಕಡಿತ ಮಾಡಿದೆ. ಅದರಂತೆ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ಶೇ. 30 ರಷ್ಟು ಪಠ್ಯ ಕಡಿತ ಮಾಡಿದೆ.
ಕರ್ನಾಟಕ ಸಂಗೀತ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ಯಾವುದೇ ವಿದ್ಯಾರ್ಥಿ ದಾಖಲಾಗದಿರುವ ಹಿನ್ನೆಲೆಯಲ್ಲಿ ಅದನ್ನು ಈ ಪ್ರಕ್ರಿಯೆಯಿಂದ ಈ ವಿಷಯವನ್ನು ಕೈಬಿಡಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.(kpc)
