ಲಂಕೇಶ್ ಮತ್ತು ತೇಜಸ್ವಿ ನವೋದಯದ ಹರಿಕಾರರು. ಲೋಹಿಯಾವಾದದಿಂದ ಪ್ರಭಾವಿತರಾಗಿದ್ದ ಈ ಜೋಡಿ ಆರೋಗ್ಯಕರ ಸ್ಫರ್ಧೆ, ಹೊಸತನ, ಕ್ರೀಯಾಶೀಲತೆ ನವೋದಯದ ವಿಭಿನ್ನ ಮಾರ್ಗದ ಮೂಲಕ ಕನ್ನಡ ನಾಡು, ನುಡಿಗಳ ವೈಶಿಷ್ಟ್ಯ, ಕೌತುಕತೆ ಬೆಳೆಸಿದವರು.
ಪತ್ರಿಕೋದ್ಯಮದ ದಿಕ್ಕನ್ನು ಬದಲಾಯಿಸಿದ ಶ್ರೇಯಸ್ಸು ಲಂಕೇಶ್ ರಿಗೆ ದಕ್ಕಿದ್ದರೆ, ಕನ್ನಡ ಸಾಹಿತ್ಯವನ್ನು ಹೆಚ್ಚು ರಿಡೇಬಲ್ ಆಗಿಸಿದವರು ತೇಜಸ್ವಿ. ನೆಲದ ಕಂಪಿನೊಂದಿಗೆ ವಿಶ್ವದ ಬೆರಗನ್ನು ಕನ್ನಡಿಗರಿಗೆ ಪರಿಚಯಿಸಿದ ಈ ಜೋಡಿ ಕನ್ನಡ ಸಾಹಿತ್ಯದ ಜೋಡೆತ್ತುಗಳು. 1900 ರ ಕೊನೆಯ ದಶಕಗಳಲ್ಲಿ ಅಕ್ಷರದಿಂದ ಏನನ್ನೂ ಸಾಧಿಸಬಹುದು ಎಂದು ತೋರಿಸಿದ ಧೀಮಂತರಿವರು. ಇವರೊಂದಿಗಿನ ಒಡನಾಟದ ಬೆಚ್ಚಗಿನ ಅನುಭವ ತೆರೆದಿಡುವ ಸರದಿ ಸಾಹಿತಿ ಗಂಗಾಧರ ಕೊಳಗಿಯವರದ್ದು. ಕೊಳಗಿ, ಲಂಕೇಶ್, ತೇಜಸ್ವಿಯವರ ಸಾಹಿತ್ಯಯಾನ ನಿಮಗೂ ಬದುಕುವ,ಸಾಧಿಸುವ ತುಮುಲ,ತವಕ ಹೆಚ್ಚಿಸಲಿ ಎನ್ನುವ ಆಕಾಂಕ್ಷೆ ಯೊಂದಿಗೆ ಈ ಮೂವರನ್ನೂ ಇಲ್ಲಿ ಜೋಡಿಸಿದ್ದೇವೆ.