

ಕನ್ನಡ ಅಥವಾ ಕರ್ನಾಟಕ ರಾಜ್ಯೋತ್ಸವ ಆಚರಣೆ ಇಂದು ವಿಶ್ವದಾದ್ಯಂತ ನಡೆದಿದೆ. ಕರ್ನಾಟಕ ರಣಧೀರ ಪಡೆ ತಾಲೂಕು, ಜಿಲ್ಲೆ, ರಾಜ್ಯ.ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಇಂದು ವಿಶಿಷ್ಟವಾಗಿ ರಾಜ್ಯೋತ್ಸವ ಆಚರಿಸಿದೆ. ಕರೋನಾ ಸೇನಾನಿಗಳಿಗೆ ಗೌರವಿಸುವ ಮೂಲಕ ಕನ್ನಡದ ಕೆಲಸಗಳಿಗೆ ಕಟಿಬದ್ಧರಾಗಲು ಕಂಕಣ ತೊಡಿಸುವ ಮೂಲಕ ರಾಜ್ಯೋತ್ಸವ ಆಚರಿಸುವ ರಣಧೀರ ಪಡೆಯ ಕಾರ್ಯಕ್ರಮ ಸಿದ್ಧಾಪುರದ ಭುವನಗಿರಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕರೋನಾ ಸೇನಾನಿಗಳನ್ನು ಗೌರವಿಸಿ, ಕಂಕಣ ತೊಡಿಸಲಾಯಿತು.
ಸಿದ್ಧಾಪುರ ಮತ್ತು ಭುವನಗಿರಿಯಲ್ಲಿ ಇದೇ ದಿನ ರಾಜ್ಯೋತ್ಸವ ಕಾರ್ಯಕ್ರಮ ನಡೆದು ಪ್ರತಿಭಾವಂತರನ್ನು ಸನ್ಮಾನಿಸಿ ಗೌರಿಸಲಾಯಿತು. ಸಿದ್ಧಾಪುರ ತಾಲೂಕಾ ಆಡಳಿತ ಭುವನಗಿರಿಯಿಂದ ಕನ್ನಡ ಜ್ಯೋತಿ ತಂದು ಸಿದ್ಧಾಪುರದಲ್ಲಿ ಸರಳವಾಗಿ ರಾಜ್ಯೋತ್ಸವ ಆಚರಿಸಿತು.

