ಅಣ್ಣಾವ್ರ ಕುಟುಂಬದಿಂದ ಮತ್ತೊಂದು ಕುಡಿ ಸ್ಯಾಂಡಲ್ವುಡ್ಗೆ ಭರ್ಜರಿ ಎಂಟ್ರಿ ಕೊಡಲು ಸಜ್ಜಾಗಿದೆ. ಇದಕ್ಕೆ ಬೇಕಾದ ಸಕಲ ತಯಾರಿಯೊಂದಿಗೆ ಶೂಟಿಂಗ್ ಕೂಡ ಆರಂಭಿಸಿದೆ.
ಅಣ್ಣಾವ್ರ ಕುಟುಂಬದಿಂದ ಮತ್ತೊಂದು ಕುಡಿ ಸ್ಯಾಂಡಲ್ವುಡ್ಗೆ ಭರ್ಜರಿ ಎಂಟ್ರಿ ಕೊಡಲು ಸಜ್ಜಾಗಿದೆ. ಇದಕ್ಕೆ ಬೇಕಾದ ಸಕಲ ತಯಾರಿಯೊಂದಿಗೆ ಶೂಟಿಂಗ್ ಕೂಡ ಆರಂಭಿಸಿದೆ.
ಈಗಾಗಾಲೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ನಿರೀಕ್ಷೆ ಹುಟ್ಟು ಹಾಕಿದ್ದ ಯುವ-01 ಚಿತ್ರತಂಡ ಇದೀಗ ರಾಜ್ಯೋತ್ಸವದ ಪ್ರಯುಕ್ತ ಚಿತ್ರ ಟೈಟಲ್ ಅನ್ನು ಬಿಡುಗಡೆ ಮಾಡಿದೆ.
ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ ಯುವರಾಜ್ ಕುಮಾರ್ ಮೊದಲ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ಅಣ್ಣಾವ್ರ ಮೊಮ್ಮಗನ ಚೊಚ್ಚಲ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು, ಕನ್ನಡ ಪ್ರೇಕ್ಷಕರು ಬಹುಪರಾಕ್ ಹಾಕಿದ್ದಾರೆ.
ಯುವ ಅವರ ಮೊದಲ ಸಿನಿಮಾಗೆ ಪುನೀತ್ ರುದ್ರನಾಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರವಿ ಬಸ್ರೂರ್ ಸಂಗೀತ ಟೀಸರ್‌ನಲ್ಲೇ ಸದ್ದು ಮಾಡಿದೆ. ಸಂಕೇಶ್ ಛಾಯಾಗ್ರಹಣ, ಚೇತನ್ ಡಿಸೋಜಾ ಸಾಹಸ ನಿರ್ದೇಶನವಿದೆ.
ಅದು ಕೂಡ ಯುವ ರಾಜ್ ಕುಮಾರ್ ಅವರ ಖಡಕ್ ಡೈಲಾಗ್ಗಳನ್ನೊಳಗೊಂಡ ಭರ್ಜರಿ ಟೀಸರ್ ಮೂಲಕ ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗ ಯುವ ರಾಜ್ಕುಮಾರ್ ಅಭಿನಯದ ಮೊದಲ ಚಿತ್ರ ಈ ಹಿಂದೆಯೇ ಸೆಟ್ಟೇರಿತ್ತು. ಆದರೆ ಚಿತ್ರದ ಟೈಟಲ್ ಮತ್ತು ಪಾತ್ರದ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ನೀಡಿರಲಿಲ್ಲ. ಇದೀಗ 5 ನಿಮಿಷಗಳ ಟೀಸರ್ ಮೂಲಕ ‘ಯುವ ರಣಧೀರ ಕಂಠೀರವ’ನ ಎಂಟ್ರಿ ಝಲಕ್ ತೋರಿಸಿದ್ದಾರೆ.
ಭರ್ಜರಿ ಡೈಲಾಗ್ ಮತ್ತು ಜಬರ್‌ದಸ್ತ್ ಫೈಟ್ನ್ನು ಟೀಸರ್ನಲ್ಲಿ ತೋರಿಸಲಾಗಿದ್ದು, ಇದರೊಂದಿಗೆ ‘ಯುವ ರಣಧೀರ ಕಂಠೀರವ’ ಚಿತ್ರವು ಐತಿಹಾಸಿಕ ಕಥಾ ಹಂದರ ಹೊಂದಿರಲಿದೆ ಎಂಬುದು ಬಹಿರಂಗವಾಗಿದೆ. ಯುವ ರಾಜ್ಕುಮಾರ್ ಅವರ ಚೊಚ್ಚಲ ಚಿತ್ರದ ಟೀಸರ್ ಬಿಡುಗಡೆಯನ್ನು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ಕುಮಾರ್ ಸೇರಿದಂತೆ ಕುಟುಂಬ ವರ್ಗ ಭಾಗಿಯಾಗಿ ಹರಸಿದರು.
ಚಿತ್ರಕಥೆ ಮತ್ತು ಸಂಭಾಷಣೆ ಬರೆಯಲು ಆರು ತಿಂಗಳ ಸಮಯಾವಕಾಶ ಬೇಕಾಗಿದೆ ಎಂದು ನಿರ್ದೇಶಕ ಪುನೀತ್ ತಿಳಿಸಿದ್ದಾರೆ, 2021 ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಶೂಟಿಂಗ್ ಆರಂಭಿಸುವುದಾಗಿ ಚಿತ್ರತಂಡ ತಿಳಿಸಿದೆ. (kpc)