

ಕಾರವಾರದ ಲಂಡನ್ ಬ್ರಿಜ್ ಬಳಿ ನಡೆದ ಕಾರ್ ಅಪಘಾತದಲ್ಲಿ ಚಿಕ್ಕಮಂಗಳೂರಿನ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದಾರೆ. ಈ ಅಪಘಾತ ಇಂದು ಮುಂಜಾನೆ ನಡೆದಿದ್ದು ಚಿಕ್ಕಮಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ಇಬ್ಬರು ಪ್ರಯಾಣಿಕರಿದ್ದ ಕಾರು ಕಾರವಾರ ಪ್ರವೇಶ ಪ್ರದೇಶದ ಲಂಡನ್ ಬ್ರಿಜ್ನಿಂದ ಕೆಳಗೆ ಬಿದ್ದಿದೆ. ವೇಗ ಅಥವಾ ಅಚಾತುರ್ಯದಿಂದ ಆದ ಈ ಅಪಘಾತದಲ್ಲಿ ಇಬ್ಬರು ಮೃತರಾಗಿದ್ದಾರೆ.
