

ಕಬಸೆ ಆರೋಪ
. ಆರ್. ಎಸ್.ಎಸ್.ನ ಇಬ್ಬಗೆಯ ನೀತಿ ಅನುಸರಿಸುತ್ತಿರುವ ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ವಿರೋಧಿ ಧೋರಣೆ ಅನುಸರಿಸುತಿದ್ದಾರೆ ಎಂದು ದೂರಿರುವ ಪ್ರಗತಿಪರ ಚಿಂತಕ ಕಬಸೆ ಅಶೋಕ ಮೂರ್ತಿ ಈಡಿಗರು ಸೇರಿದಂತೆ ಹಿಂದುಳಿದ ವರ್ಗಗಳ ವಿರುದ್ಧ ಪಿತೂರಿ ಮಾಡುತ್ತಿರುವ ಈಶ್ವರಪ್ಪ ವಿವಾದಿತ ಸ್ವಾಮಿ ಭೇಟಿ ಮಾಡುವುದ್ಯಾಕೆ? ಸರ್ಕಾರದ ಗೋಕರ್ಣ ದೇವಾಲಯವನ್ನು ಒಂದು ಜಾತಿಯ ಸ್ವಾಮಿ, ಮಠಕ್ಕೆ ನೀಡಿರುವ ಯಡಿಯೂರಪ್ಪ ಮತ್ತು ಬಿ.ಜೆ.ಪಿ. ಈಗ ಖಾಸಗಿ, ಒಂದು ಸಮೂದಾಯದ ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆಯುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ಸಾಗರದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಶೋಕ ಮೂರ್ತಿ ಹಿಂದುಳಿದ ವರ್ಗಗಳ ಜಾತಿ ಗಣತಿ ವರದಿಯನ್ನು ಕಸದ ಬುಟ್ಟಿಗೆ ಎಸೆಯುತ್ತೇನೆಂದು ದಾಷ್ಟ್ಯದ ಮಾತನಾಡಿದ್ದ ಯಡಿಯೂರಪ್ಪ ಹಿಂದುಳಿದವರ ವಿರುದ್ಧ ಕೆಲಸ ಮಾಡುವ ಮೂಲಕ ಆರೆಸ್ಸೆಸ್ ಇಬ್ಬಗೆಯ ನೀತಿ ಅನುಸರಿಸುತಿದ್ದಾರೆ. ಕಳಂಕಿತ ಸ್ವಾಮಿಯ ಪರವಾಗಿ ಕೆಲಸ ಮಾಡುತ್ತಿರುವ ಈಶ್ವರಪ್ಪ, ಯಡಿಯೂರಪ್ಪ ರಾಜ್ಯ ಬಿ.ಜೆ.ಪಿ. ಸರ್ಕಾರ ಹಿಂದುಳಿದ ವರ್ಗಗಳನ್ನು ತುಳಿಯುತಿದ್ದಾರೆ. ಇದರ ಪರಿಣಾಮ ಘೋರವಾಗಿರಲಿದೆ ಎಂದು ಎಚ್ಚರಿಸಿರುವ ಅವರು ಸಿಗಂದೂರು ವಿಚಾರದಲ್ಲಿ ಸರ್ಕಾರಿ ಯಂತ್ರದ ದುರ್ಬಳಕೆ ಮಾಡಿ ಹಿಂದುಳಿದ ವರ್ಗಗಳ ವಿರೋಧಿ ವಿವಾದಿತ ಸ್ವಾಮಿಯ ಖುಷಿಪಡಿಸುವ ಕೆಲಸಕ್ಕೆ ತಕ್ಕ ಪ್ರತಿಫಲ ಉಣ್ಣಲಿದ್ದಾರೆ ಎಂದಿದ್ದಾರೆ.
