

ಸಿದ್ಧಾಪುರ ತಾಲೂಕಿನ ಮನ್ಮನೆ ಸಮೀಪದ ಕೊರ್ಲಕೈ ಪಂಚಾಯತ್ ಮಳಲವಳ್ಳಿ ನೈಸರ್ಗಿಕ ಕಲ್ಲಿನ ಸೇತುವೆ ಸಂರಕ್ಷಣೆ ಅಭಿವೃದ್ಧಿಗೆ ರಾಜ್ಯ ಸರ್ಕಾರ 25 ಲಕ್ಷ ಅನುದಾನ ಬಿಡುಗಡೆ ಮಾಡಿ ಕಾರ್ಯಾರಂಭ ಕ್ಕೆ ಆದೇಶ ಮಾಡಿದೆ. ಸೈಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಈ ನೈಸರ್ಗಿಕ ಸೇತುವೆ ರಕ್ಷಣೆ, ಪೋಷಣೆ ಮಾಡಲು ಅವಶ್ಯ ಕೆಲಸಗಳನ್ನು ಮಾಡಲು ಆದೇಶದಲ್ಲಿ ಸೂಚಿಸಲಾಗಿದೆ. ಈ ನೈಸರ್ಗಿಕ ಸ್ಮಾರಕ ಅಭಿವೃದ್ಧಿ, ಸಂರಕ್ಷಣೆ ಹಿನ್ನೆಲೆಯಲ್ಲಿ ಅವಶ್ಯ ಕೆಲಸಕ್ಕೆ ಒತ್ತಾಯಿಸಿ ಸಮಾಜಮುಖಿ ಪತ್ರಿಕೆ, samajamukhi.net ನ್ಯೂಸ್ ಪೊರ್ಟಲ್ ಹಾಗೂ samaajamukhi ಯು ಟ್ಯೂಬ್ ಚಾನೆಲ್ ಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಅನೇಕ ವರದಿ, ಸ್ಥಳಿಯರ ಬೇಡಿಕೆಗಳ ಹಕ್ಕೊತ್ತಾಯದ ಅಭಿಪ್ರಾಯ ಪ್ರಕಟಣೆಗಳನ್ನು ಮಾಡಲಾಗಿತ್ತು. ಈ ಮಹತ್ವದ ಪ್ರವಾಸಿ ಮತ್ತು ಪಾರಂಪರಿಕ ತಾಣದ ಬಗ್ಗೆ ಕಾಳಜಿಯ ವರದಿ, ವಿಶೇಷ ಸ್ಟೋರಿಗಳನ್ನು ಮಾಡಿದ ಸಮಾಜಮುಖಿ ಸಮೂಹಕ್ಕೆ ಈ ಬಗ್ಗೆ ಸ್ಥಳಿಯರೂ ಅಭಿನಂದಿಸಿದ್ದಾರೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
