

ಜಗತ್ತಿನ ವಿಶಿಷ್ಟ ಕಾಡಿರುವ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟ ಶ್ರೀಮಂತ ಜೀವ ವೈ ವಿಧ್ಯತೆಯ ತಾಣ. ಆದರೆ ಈ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಮಾವಿನಗುಂಡಿ ಭಾಗದ ಕತ್ತಲೆಕಾನು ಪ್ರದೇಶ ಮಳೆ ನೀರನ್ನು ಹಿಡಿದಿಡುವ ವಿಶಿಷ್ಟ ಜೌಗು ಪ್ರದೇಶ ಹೊಂದಿರುವುದು ಬೆಳಕಿಗೆ ಬಂದಿದೆ. ಗುಜರಾತ್ ಗೋವಾ ದಿಂದ ಪ್ರಾರಂಭವಾಗಿ ವೈನಾಡು, ಕೊಡುಗುವರೆಗಿನ ಪಶ್ಚಿಮಘಟ್ಟದಲ್ಲಿ ಜೌಗು ಪ್ರದೇಶಗಳಿವೆ. ಈ ಜೌಗು ಅಥವಾ ಸ್ವ್ಯಾಂಪ್ ಗಳ ವಿಶಿಷ್ಟ ಮತ್ತು ಅದ್ಭುತ ಲೋಕ ಕತ್ತಲೆಕಾನಿನಲ್ಲಿರುವುದು ಈಗ ಬೆಳಕಿಗೆ ಬಂದಂತಾಗಿದೆ. ವಿಪರೀತ ಮಳೆ ಬೀಳುವ ಪ್ರದೇಶವಾಗಿರುವ ಶಿರಸಿ, ಹುನ್ನಾವರ ಅರಣ್ಯ ವಿಭಾಗಗಳಲ್ಲಿ ನೀರು ಹಿಡಿದಿಡುವ ಸ್ಪಂಜಿನಂಥ ಜೌಗು (ಸ್ವಾಂಪ್) ವೈಶಿಷ್ಟ್ಯತೆಯಿದ್ದು ಈ ಮೈರಿಸ್ಟಿಕಾ ಸ್ವ್ಯಾಂಪ್ ಮಳೆಗಾಲದ ಶುದ್ಧ ನೀರನ್ನು ಹಿಡಿದಿಟ್ಟು ಬೇಸಿಗೆಯಲ್ಲಿ ಭೂಮಿಗೆ ಬಿಡುತ್ತವೆ!. ಇಂಥ ಶುದ್ಧನೀರು ಸಂಗ್ರಹಿಸುವ ಸ್ವ್ಯಾಂಪ್ ಬೇರುಗಳು ಭೂಮಿಯ ತಂಪು, ಹವಾಮಾನದ ಉಷ್ಣತೆ ವೃದ್ಧಿಯನ್ನು ನಿಯಂತ್ರಿಸುತ್ತವೆ.



ಈ ಬಗ್ಗೆ ಮಾಹಿತಿ ನೀಡಿದ ಶಿರಸಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ ಜಗತ್ತಿನ ಬಹುವಿಶಿಷ್ಟ ಅರಣ್ಯ, ಜೌಗು ಪ್ರದೇಶ ಸಿದ್ಧಾಪುರ ತಾಲೂಕಿನಲ್ಲಿದೆ. ಈ ಸ್ವ್ಯಾಂಪ್ ಗಳು, ಮನೆಮನೆ, ಗೇರುಸೊಪ್ಪಾ ನಡುವಿನ ಕತ್ತಲೆಕಾನು ಜಗತ್ತಿನ ವಿಶಿಷ್ಟ ಜೀವವೈವಿಧ್ಯತೆಗಳು ಇವುಗಳ ರಕ್ಷಣೆ, ಸಂರಕ್ಷಣೆ, ಪೋಷಣೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶ ಅದರಲ್ಲೂ ಸಿದ್ಧಾಪುರದ ಕತ್ತಲೆಕಾನು ಜಗತ್ತಿನ ಪ್ರಮುಖ ಕಾನು ಮತ್ತು ಅರಣ್ಯ ಪ್ರದೇಶ. ಈ ವೈಶಿಷ್ಟ್ಯತೆ ರಕ್ಷಣೆ ಸ್ಥಳೀಯರು, ಅರಣ್ಯ ಇಲಾಖೆ, ಸರ್ಕಾರದ ಜವಾಬ್ಧಾರಿ ಕೂಡಾ ಎಂದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
