

ತಮ್ಮ ಅಭಿನಯದ ಮೂಲಕ ಒಂದು ಕಾಲದಲ್ಲಿ ಬಾಲಿವುಡ್, ಟಾಲಿವುಡ್ ಪ್ರೇಕ್ಷಕರ ಹೃದಯ ಗೆದ್ದಿದ್ದರು ಅಂದದ ನಟಿ ಟಬು. ಆದರೆ ಟಬು ಈವರೆಗೂ ಮದುವೆ ಮಾಡಿಕೊಳ್ಳದಿರುವ ಬಗ್ಗೆ ಹಲವು ವದಂತಿಗಳು ಹರಡುತ್ತಲೇ ಇವೆ.

ಮುಂಬೈ: ತಮ್ಮ ಅಭಿನಯದ ಮೂಲಕ ಒಂದು ಕಾಲದಲ್ಲಿ ಬಾಲಿವುಡ್, ಟಾಲಿವುಡ್ ಪ್ರೇಕ್ಷಕರ ಹೃದಯ ಗೆದ್ದಿದ್ದರು ಅಂದದ ನಟಿ ಟಬು. ಆದರೆ ಟಬು ಈವರೆಗೂ ಮದುವೆ ಮಾಡಿಕೊಳ್ಳದಿರುವ ಬಗ್ಗೆ ಹಲವು ವದಂತಿಗಳು ಹರಡುತ್ತಲೇ ಇವೆ.

ಆದರೆ, ತಾವು ಒಂಟಿಯಾಗಿಯೇ ಉಳಿಯಲು ಬಾಲಿವುಡ್ ನಾಯಕ ಅಜಯ್ ದೇವ್ ಗನ್ ಕಾರಣ ಎಂದು ಟಬು ಹೇಳಿಕೊಂಡಿದ್ದಾರೆ. ಬುಧವಾರ ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಟಬು ಸಂದರ್ಶನವೊಂದರಲ್ಲಿ ವಿವಾಹ ಮಾಡಿಕೊಳ್ಳದೆ ತಾವು ಏಕಾಂಗಿಯಾಗಿರುವ ಬಗ್ಗೆ ಕೆಲ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಅಜಯ್ ದೇವಗನ್ ಬಗ್ಗೆ ಪ್ರಸ್ತಾಪಿಸಿರುವ ಆಕೆ ಅಜಯ್, ತಮಗೆ 13, 14 ವರ್ಷ ವಯಸ್ಸಿನಿಂದಲೂ ಗೊತ್ತು, ಆತ ತನ್ನ ಸಹೋದರ ಸಮೀರ್ ಬಾಲ್ಯದ ಸ್ನೇಹಿತ ಎಂದು ಟಬು ಹೇಳಿಕೊಂಡಿದ್ದಾರೆ. ಆ ಕಾಲದಲ್ಲಿ ಮುಂಬೈ ಜುಹೂ ಪ್ರದೇಶದಲ್ಲಿ ನಾವು ಒಟ್ಟಿಗೆ ಬೆಳೆದವರು. ಅಜಯ್ ಸಮೀರ್ ಬೀದಿ ಬೀದಿಗಲ್ಲಿ ಗ್ಯಾಂಗ್ ಕಟ್ಟಿಕೊಂಡು ಸುತ್ತಾಡುತ್ತಿದ್ದರು. ತನ್ನ ಸ್ನೇಹಿತೆಯರೊಂದಿಗೆ ಕೀಟಲೆ ಮಾಡಲು ನಮ್ಮನ್ನು ಹಿಂಬಾಲಿಸುತ್ತಿದ್ದರು ಎಂದು ಅವರು ನೆನಪಿಸಿಕೊಂಡರು.


ಆ ಸಮಯದಲ್ಲಿ ಅಜಯ್, ಸಮೀರ್ ತನ್ನ ಮೇಲೆ ದೃಷ್ಟಿ ಹರಿಸಿ, ಯಾರಾದರೂ ಹುಡುಗರು ತನ್ನೊಂದಿಗೆ ಮಾತನಾಡಲು ಪ್ರಯತ್ನಿಸಿದರೆ, ಅವರಿಗೆ ಹೊಡೆಯುತ್ತಿದ್ದರು ಎಂದು ಟಬು ಹೇಳಿದ್ದಾರೆ. ಈಗ ಅಜಯ್, ಸಮೀರ್ ತಮ್ಮ ತಮ್ಮ ಕುಟುಂಬಗಳೊಂದಿಗೆ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ. ಆದರೆ ನಾನು ಹೀಗೆ ಒಬ್ಬಂಟಿಯಾಗಿದ್ದೇನೆ. ಅದಕ್ಕೆ ಕಾರಣ ಅಜಯ್ ಆಗ ಆತ ಮಾಡಿದ್ದು ಈಗ ಅವನಿಗೆ ಅರ್ಥವಾಗಿರಬಹುದು ಎಂದು ಟಬು ನಗುವಿನೊಂದಿಗೆ ನುಡಿದಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






