

ಸಿದ್ಧಾಪುರ ಲಯನ್ಸ್ ಬಾಲಭವನದಲ್ಲಿ ಇಂದು ನಡೆದ ಬಿ.ಜೆ.ಪಿ. ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹ ಯಾರ ಪರ ವಾಲಿದೆ. ಚುನಾವಣೆ ಮುನ್ನ ಬಂದಿದ್ದ ಸಾಮಾನ್ಯ ಮೀಸಲಾತಿ ಅನ್ವಯ ಕೆ.ಜಿ.ನಾಯ್ಕ ಹಣಜಿಬೈಲ್ ಅಧ್ಯಕ್ಷರಾಗುವ ಅವಕಾಶವನ್ನು ತಪ್ಪಿಸಿದ ಕಾಣದ ಕೈ ಯಾರು? ಪಕ್ಷ ಬಲಿಯುವ ಮೊದಲು, ಬಲಿತ ನಂತರ ಸನಾತನವಾದಿ ಹಿಂದುತ್ವ ಪ್ರತಿಪಾದಿಸುವ ವೈದಿಕರು ಬಿ.ಜೆ.ಪಿ. ಯಲ್ಲಿ ಆಡುತ್ತಿರುವ ಕಪಟ ನಾಟಕದಿಂದ ಆಗುತ್ತಿರುವ ತೊಂದರೆಗಳೇನು? ಎನ್ನುವ ವಿಚಾರ ಚರ್ಚೆಯಾದವೆ? ಎಂದರೆ ಅದಕ್ಕೆ ಉತ್ತರ ಸ್ಪಷ್ಟವಿಲ್ಲ.
ಆದರೆ ಬಹುಸಂಖ್ಯಾತರಿಗೆ ಅಧಿಕಾರ, ಅನುಕೂಲಗಳು ಉತ್ತರ ಕನ್ನಡ ಸಂಸತ್ ಕ್ಷೇತ್ರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾಕೆ ಸಿಗುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಲು ಉ.ಕ. ಬಿ.ಜೆ.ಪಿ. ಜಿಲ್ಲಾಧ್ಯಕ್ಷರು ತಡವರಿಸಿದ ಪ್ರಸಂಗ ಇಂದು ನಡೆಯಿತು.
ಸಿದ್ಧಾಪುರ ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆ ನವೆಂಬರ್ 9 ರಂದು ನಡೆಯಲಿದ್ದು ಆ ದಿನ ಮತ ನೀಡಲಿರುವ ಪ.ಪಂ. ಸದಸ್ಯರು ಚುನಾವಣೆ ಅಥವಾ ಆಯ್ಕೆ ಪ್ರಕ್ರೀಯೆಗೆ ಹಾಜರಾಗುತ್ತಾರೋ? ಬಹಿಷ್ಕರಿಸುತ್ತಾರೋ? ಅನುಮಾನಗಳಿವೆ.
ಮಹಿಳಾ ಮೀಸಲಾತಿ ಅನ್ವಯ ಅಧ್ಯಕ್ಷರ ಆಯ್ಕೆ ಪ್ರಕ್ರೀಯೆ ನಡೆದರೂ ಈ ತಿಂಗಳ ಕೊನೆಗೆ ಪ್ರಕಟವಾಗಲಿರುವ ನ್ಯಾಯಾಲಯದ ತೀರ್ಪು ಈ ಆಯ್ಕೆ, ಅಧ್ಯಕ್ಷತೆಯನ್ನು ಪುರಸ್ಕರಿಸುವ ಅಥವಾ ತಿಸ್ಕರಿಸುವ ಯಾವುದೇ ಸ್ಪಷ್ಟ ಸೂಚನೆ ಇಲ್ಲ. ಈ ಸ್ಥಿತಿಯಲ್ಲಿ ಪಕ್ಷದ ಜಿಲ್ಲಾ ಕಫ್ತಾನರಾಗಿರುವ ವೇಂಕಟೇಶ್ ನಾಯಕ ಅಭಿಪ್ರಾಯ ಸಂಗ್ರಹಣೆ ಮಾಡಿ ಮಾಧ್ಯಮಗೋಷ್ಠಿ ನಡೆಸಿದರು. ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರದಲ್ಲಿ ಬಹುಸಂಖ್ಯಾತರನ್ನು ನಿರ್ಲಕ್ಷಿಸಲಾಗುತ್ತಿದೆ. ಒಂದೇ ಜಿಲ್ಲೆ, ಒಂದೇ ಸಮೂದಾಯ, ಕೆಲವೇ ವ್ಯಕ್ತಿಗಳಿಗೆ ಅಧಿಕಾರ ಕೊಟ್ಟು ಅನುಕೂಲ ಮಾಡಿಕೊಡಲಾಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದರೆ…..
ಪಕ್ಷದ ತೀರ್ಮಾನ, ಪಕ್ಷದ ನಿರ್ಣಯ ಅಂತಿಮ ಎಂದರಾದರೂ ಸಿದ್ಧಾಪುರ ಪ.ಪಂ. ವಿಚಾರ, ಶಾಸಕರು, ಸಂಸದರ ಬಗೆಗಿನ ತಕರಾರು, ಪಕ್ಷದಲ್ಲಿ ಕೆಲವರು, ಕೆಲವು ಸಮೂದಾಯಗಳ ತುಷ್ಟೀಕರಣ, ಬಿ.ಜೆ.ಪಿ ಪಕ್ಷ, ಸರ್ಕಾರಗಳಲ್ಲಿ ಪ್ರಜಾಪ್ರಭುತ್ವ ವಿರೋಧಿ ನೀತಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಜಿಲ್ಲಾಧ್ಯಕ್ಷರು ತಡವರಿಸಿದ್ದು, ತಡಕಾಡಿದ್ದು ಅವರಿಗೂ ಸಮರ್ಥನೆ ಮಾಡಿಕೊಳ್ಳಲಾರದ ರಾಷ್ಟ್ರೀಯವಾದಿಗಳ ಅವಾಂತರದ ಅನಾವರಣಕ್ಕೆ ಸಾಕ್ಷಿಯಂತಿತ್ತು.
ಸಿದ್ಧಾಪುರ ಸೇರಿದಂತೆ ಜಿಲ್ಲೆಯಲ್ಲಿ ಪಕ್ಷದ ನಾಯಕರ ನಡುವೆ ಭಿನ್ನಾಭಿಪ್ರಾಯವಿಲ್ಲ, ಅಭಿಪ್ರಾಯ ಭೇದಗಳು ಭಿನ್ನಮತವಲ್ಲ,ಪಕ್ಷದ ನಿರ್ಣಯದಂತೆ ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ಸಹಕರಿಸುತ್ತಾರೆ. ಜಿಲ್ಲೆಯ ಬಹುತೇಕ ಎಲ್ಲಾ ಕಡೆ ಸ್ಥಳಿಯ ಸಂಸ್ಥೆಗಳ ಆಡಳಿತ ಹಿಡಿಯುವಲ್ಲಿ ಬಿ.ಜೆ.ಪಿ. ಯಶಸ್ವಿಯಾಗಿದೆ. ಸಿದ್ಧಾಪುರದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲಾಗಿದೆ. ಪ.ಪಂ. ಸದಸ್ಯರು ಸೋಮವಾರ ಪಕ್ಷ ನಿರ್ಣಯಿಸಿದ ವ್ಯಕ್ತಿಗಳ ಪರವಾಗಿ ಮತ ಚಲಾಯಿಸುತ್ತಾರೆ. ಪಕ್ಷ ನಿರ್ಣಯಿಸಿದವರೇ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. -ವೇಂಕಟೇಶ್ ನಾಯಕ ಉ.ಕ. ಬಿ.ಜೆ.ಪಿ. ಜಿಲ್ಲಾ ಘಟಕದ ಅಧ್ಯಕ್ಷ
ಉತ್ತರ ಕನ್ನಡ ಜಿಲ್ಲೆಯ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಈಗಾಗಲೇ ಮುಗಿದಿದೆ. ಆದರೆ ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರು ನ.7 ರ ನಂತರ ಮತ್ತೆ ಬದಲಾದರೂ ಆಶ್ಚರ್ಯವಿಲ್ಲ. ಯಾಕೆಂದರೆ….. ಈ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿ ವಿಚಾರ ಈ ತಿಂಗಳ ಕೊನೆಗೆ ಅಂತಿಮ ತೀರ್ಪಾಗಿ ಪ್ರಕಟವಾಗಲಿದೆ.!



