

ಸಿದ್ದಾಪುರ: ಇಲ್ಲಿಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಬಿಜೆಪಿಯ ಎರಡನೇ ವಾರ್ಡ್ ನ ಸದಸ್ಯೆ ಚಂದ್ರಕಲಾ ಸುರೇಶ್ ನಾಯ್ಕ 6ನೇ ವಾರ್ಡ್ ನ ಸದಸ್ಯ ರವಿಕುಮಾರ್ ನಾಯ್ಕ ಕ್ರಮವಾಗಿ ಅಧ್ಯಕ್ಷ ಉಪಾಧ್ಯಕ್ಷರಾಗಿ ರಾಗಿ ಆಯ್ಕೆಯಾಗಿದ್ದಾರೆ.


ಪ.ಪಂ. ಗೆ ಚುನಾವಣೆ ಯಾಗಿ ಒಂದು ವರ್ಷದ ನಂತರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕಾರ್ಯ ನಡೆಯಿತು. 14 ಸದಸ್ಯರನ್ನು ಹೊಂದಿರುವ ಬಿಜೆಪಿ ಅಧ್ಯಕ್ಷ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿತು. ಚುನಾವಣೆಯ ಪೂರ್ವದಲ್ಲಿ ಸಾಮಾನ್ಯ ವರ್ಗದ ಪುರುಷ ಮೀಸಲಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮಹಿಳೆ ಮೀಸಲಾತಿ ಬಂದಿತ್ತು ಆದರೆ ಬದಲಾದ ಸನ್ನಿವೇಶದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಪುರುಷ ಮೀಸಲಾತಿ ಪ್ರಕಟವಾಗಿತ್ತು. ಮೀಸಲಾತಿಯ ಬದಲಾವಣೆಯಿಂದಾಗಿ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು ನಂತರ. ಯಥಾಪ್ರಕಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ಪುರುಷ ಮೀಸಲಾತಿ ಪ್ರಕಟವಾಯಿತು. ನವೆಂಬರ್ 10ರ ಒಳಗೆ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಚಂದ್ರಕಲಾ ನಾಯ್ಕ ಯಶೋದ ಮಡಿವಾಳ್ ಮಂಜುಳಾ ನಾಯ್ಕ ಅಧ್ಯಕ್ಷ ಪದವಿಯ ಆಕಾಂಕ್ಷಿಯಾಗಿದ್ದರು, ಮಾಜಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾರುತಿ ನಾಯಕ್ ರವಿ ನಾಯಕ್, ವಿನಯ್ ಹೊನ್ನೆಗುಂಡಿ, ಉಪಾಧ್ಯಕ್ಷ ಪದವಿಯ ಆಕಾಂಕ್ಷಿಯಾಗಿದ್ದರು. ಇದೇ ನವೆಂಬರ್ ಏಳರಂದು ಜಿಲ್ಲಾ ಕೋರ್ ಕಮಿಟಿ ಸಭೆ ಬಾಲಭವನದಲ್ಲಿ ನಡೆದು ಪಟ್ಟಣ ಪಂಚಾಯತ್ ಸದಸ್ಯರು ಮುಖಂಡರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲಾಗಿತ್ತು ಆದರೆ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ ಜಿ ನಾಯ್ಕ ತೀರ್ಮಾನವೇ ಅಂತಿಮ ಎಂದು ಎಲ್ಲಾ ಸದಸ್ಯರು ಅಭಿಪ್ರಾಯಪಟ್ಟಿದ್ದರು ಎನ್ನಲಾಗಿದೆ.
ಅದರಂತೆ ಇಂದು ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ಎರಡನೇ ವಾರ್ಡ್ ಸದಸ್ಯ ಚಂದ್ರಕಲಾ ಸುರೇಶ್ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ 6ನೇ ವಾರ್ಡ್ನ ಸದಸ್ಯ ರವಿ ಕುಮಾರ್ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷೆಯಾಗಿ ಆಯ್ಕೆಯಾದ ಚಂದ್ರಕಲಾ ನಾಯ್ಕ ಮಾತನಾಡಿ ಆಯ್ಕೆ ಮಾಡಿದ್ದಕ್ಕೆ ಎಲ್ಲಾ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು ಉಪಾಧ್ಯಕ್ಷರಾಗಿ ಆಯ್ಕೆಯಾದ ರವಿ ನಾಯ್ಕ ರವರು ಮಾತನಾಡಿ ಹಿರಿಯ ಸದಸ್ಯರು ಸಹಾಯ ಹಾಗೂ ಮಾರ್ಗದರ್ಶನದೊಂದಿಗೆ ಆಡಳಿತವನ್ನು ನಡೆಸುತ್ತೇವೆ ಎಂದರು. ತಹಶಿಲ್ದಾರರ ಮಂಜುಳಾ ಭಜಂತ್ರಿ ಚುನಾವಣಾ ಪ್ರಕ್ರಿಯೆ ನಡೆಸಿದರು.
sdp spl-https://www.youtube.com/watch?v=VIM4Lqp_4pY
