ಇಂದು ಫಲಿತಾಂಶ ಪ್ರಕಟವಾದ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳನ್ನೂ ಬಿ.ಜೆ.ಪಿ. ಗೆದ್ದುಕೊಂಡಿದೆ. ಆರ್.ಆರ್. ನಗರ ದಲ್ಲಿ ಮುನಿರತ್ನ ಅದ್ಭುತ ಗೆಲುವು ದಾಖಲಿಸಿದ್ದಾರೆ. ಶಿರಾದಲ್ಲಿ ಡಾ. ರಾಜೇಗೌಡ ವಿಜಯಪತಾಕೆ ಹಾರಿಸಿದ್ದಾರೆ. ಬೆಂಗಳೂರು ಪದವೀಧರ ಕ್ಷೇತ್ರದಿಂದ ಪುಟ್ಟಟ್ಟಯ್ಯ ಸತತ ನಾಲ್ಕನೇ ಬಾರಿ ಗೆದ್ದಿದ್ದು ಮೊದಲ ಬಾರಿ ಬಿ.ಜೆ.ಪಿ.ಯಿಂದ ಗೆಲುವುಸಾಧಿಸಿದ್ದಾರೆ.
ರಾಜ್ಯ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಸಂಕನೂರು ಮುನ್ನಡೆ ಸಾಧಿಸಿದ್ದು ಸಂಕನೂರರ ಮತಗಳಿಕೆ 13 ಸಾವಿರ ದಾಟಿದೆ. ಕಾಂಗ್ರೆಸ್ ನ ಕುಬೇರಪ್ಪ 6 ಸಾವಿರ ಮತಗಳಿಗಿಂತ ಹೆಚ್ಚು ಪಡೆದಿದ್ದು ಜೆ.ಡಿ.ಎಸ್. ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗುರಿಕಾರ 3ಸಾವಿರ ಮತಗಳನ್ನು ಗಳಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.