

ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ನೌಕಾ ಹೆಲಿಕಾಪ್ಟರ್ ಒಂದು ಉತ್ತರ ಕನ್ನಡ ಜಿಲ್ಲೆಯ ದಾಸನಕೊಪ್ಪ ಗ್ರಾಮದಲ್ಲಿ ಶುಕ್ರವಾರ ತುರ್ತು ಭೂಸ್ಪರ್ಶ ಮಾಡಿದೆ.

ಕಾರವಾರ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ನೌಕಾ ಹೆಲಿಕಾಪ್ಟರ್ ಒಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ದಾಸನಕೊಪ್ಪ ಗ್ರಾಮದಲ್ಲಿ ಶುಕ್ರವಾರ ತುರ್ತು ಭೂಸ್ಪರ್ಶ ಮಾಡಿದೆ.
ಮೂಲಗಳ ಪ್ರಕಾರ, ಹೆಲಿಕಾಪ್ಟರ್ ಅನ್ನು ನೌಕಾಪಡೆಯ ಎಎನ್-741 ಹೆಲಿಕಾಪ್ಟರ್ ಎಂದು ಗುರುತಿಸಲಾಗಿದೆ. ಆಗಸದಲ್ಲಿ ಕೆಲ ನಿಮಿಷಗಳ ಕಾಲ ಹಾರಾಡಿದ ಹೆಲಿಕಾಪ್ಟರ್ ನಂತರ ಗ್ರಾಮದಲ್ಲಿ ಭೂಸ್ಪರ್ಶ ಮಾಡಿದೆ.
ಹೆಲಿಕಾಪ್ಟರ್‌ನಲ್ಲಿ ಮೂರ ಪೈಲೆಟ್‌ಗಳು ಸೇರಿ 8 ಜನರಿದ್ದು, ಗೋವಾದಿಂದ ಬೆಂಗಳೂರಿಗೆ ಹಾರಾಟ ನಡೆಸಿತ್ತು.
ಹೆಲಿಕಾಪ್ಟರ್ ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದು, ಏಕಾಏಕಿ ಕಾಪ್ಟರ್ ಇಳಿದಿದ್ದು ಕಂಡು ಗ್ರಾಮಸ್ಥರು ದಿಗ್ಭ್ರಮೆಗೊಳಗಾದರು. ಪೈಲಟ್ ಗಳು ಹೊರಬರುತ್ತಿದ್ದಂತೆ ಹೆಲಿಕಾಪ್ಟರ್ ನೋಡಲು ನೂರಾರು ಜನ ಜಮಾಯಿಸಿದ್ದರು.
ತಾಂತ್ರಿಕ ದೋಷದ ಕಾರಣಕ್ಕೆ ಹೆಲಿಕಾಪ್ಟರ್ ಇಳಿದಿದೆ. ಅದರಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಹೆಲಿಕಾಪ್ಟರ್ ಸರಿಪಡಿಸಲು ಗೋವಾದಿಂದ ತಜ್ಞರ ತಂಡ ಬರಲಿದೆ ಎಂದು ಬನವಾಸಿ ಠಾಣೆ ಎಸ್ಐ ಮಹಾಂತೇಶ ನಾಯಕ ಹೇಳಿದ್ದಾರೆ. (kpc)https://m.youtube.com/watch?v=RPOyo5WE16k
