

ಸಿದ್ಧಾಪುರ ತಹಸಿಲ್ಧಾರ ಕಛೇರಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ಸೊರಬ ಹೆಚ್ಚೆ ಗ್ರಾಮದ ಉಷಾ ಸಾಗರ ಆಲಳ್ಳಿ ಬಳಿ ನಡೆದ ಸ್ಕೂಟರ್,ಕಾರ್ ಮುಖಾಮುಖಿ ಡಿಕ್ಕಿಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸಿದ್ಧಾಪುರದಲ್ಲಿ ಕಾರ್ಯನಿರ್ವಹಿಸುತಿದ್ದ ಇವರು ಸಾಗರದಲ್ಲಿ ವಾಸವಾಗಿದ್ದು ಸಿದ್ಧಾಪುರಕ್ಕೆ ಕಾರ್ಯನಿಮಿತ್ತ ಪ್ರವಾಸ ಮಾಡುತಿದ್ದರು. ಇಂದು ಸಾಗರದಿಂದ ಸಿದ್ಧಾಪುರಕ್ಕೆ ಬರುತಿದ್ದಾಗ ಆಲಳ್ಳಿ ಬಳಿ ಸಂಭವಿಸಿದ ಮಾರುತಿ ಡಿಸಾಯರ್ ಕಾರ್ ಮತ್ತು ಸ್ಕೂಟರ್ ಗಳ ಮುಖಾಮುಖಿ ಡಿಕ್ಕಿ ಉಷಾ ಪ್ರಾಣಕ್ಕೆ ಕಂಟಕವಾಗಿದೆ.




