ಕೆ. ಆರ್. ಪ್ರಕಾಶ್ ನಿಧನ

ಪತ್ರಕರ್ತ, ರಂಗಕಲಾವಿದ,ರಂಗನಿರ್ಧೇಶಕರಾಗಿ ಈಗಿನ ರಾಜ್ಯ ನಾಟಕ ಅಕಾಡೆಮಿ ಸದಸ್ಯರಾಗಿದ್ದ ಶಿರಸಿಯ ಕೆ.ಆರ್. ಪ್ರಕಾಶ್ ಅಲ್ಫಕಾಲಿಕ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.

ನಿಸರ್ಗ ರಂಗ ಮಿತ್ರ ಪ್ರಕಾಶ್ ಗೆ ನುಡಿ ನಮನ______________________ ಕೆ ಆರ್ ಪ್ರಕಾಶ್ ಅಂದ್ರೆ ಕ್ರಿಯಾಶೀಲತೆ, ಸುಮ್ಮನೆ ಕುಳಿತ ಆಸಾಮಿ ಅಲ್ಲ.ನದಿ ದಡದಲ್ಲಿ, ಪ್ರಪಾತದಲ್ಲಿ, ಕೆರೆಯ ಅಂಚಿನಲ್ಲಿ, ಮರದ ನೆರಳಲ್ಲಿ, ಸಮುದ್ರ ತೀರದಲ್ಲಿ ನಾಟಕ ಮಾಡುವ ಹುಚ್ಚು. ಈ ಕಾರಣಕ್ಕಾಗಿ ಸಂಘಟನಾತ್ಮಕ ಅನುಭವ ಪಡೆದವನು. ಬೀದಿ ನಾಟಕ ಮಾಡುತ್ತಾ ಉತ್ತರ ಕನ್ನಡದ ಕರಾವಳಿ, ವನವಾಸಿ ಕೇರಿ, ಪೇಟೆ ಹಳ್ಳಿಗಳಲ್ಲಿ ಮೂರು ದಶಕಗಳಿಂದ ದವನು. ಹಕ್ಕಿಮನೆ ಸುರೇಶ, ಬಾಳೆ ಗದ್ದೆ ಶ್ರೀನಿವಾಸ, ರಾಮಕೃಷ್ಣ ಶಾಸ್ತ್ರೀ, ನರಸಿಂಹ ದೀಕ್ಷಿತ ಕಳವೆ ನಾವೆಲ್ಲ ಸೇರಿ ಯುವಜನ ಮೇಳ, ನಾಟಕ ಎಂದು ಸುತ್ತಾಟ. ಸಂಸದರು, ಶಾಸಕರು, ಸಹಕಾರಿ ಧುರೀಣ ರು ಸೇರಿದಂತೆ ಹಲವರನ್ನು.ಬಣ್ಣ ಹಚ್ಚಿ ಸಿ ನಾಟಕಕ್ಕೆ ಕರೆದವನು. ಪ್ರಕಾಶ್ ಜೊತೆಗೆ ಜೋರು ಚರ್ಚೆ, ವಾದ, ಜಗಳ ಯಾವತ್ತೂ ಇದ್ದದ್ದೇ. ಮುಂಗೋಪಿ, ಮನಸಿಗೆ ಬಂದಿದ್ದು ಮುಲಾಜಿಲ್ಲದೆ ಮಾತಾಡು ವ ವ್ಯಕ್ತಿ .ನಿನ್ನೆ ಸಂಜೆ ಘಟ್ಟಿ ಕೈ ಗೇ ಹೋಗಿದ್ದಾಗ ಸುರೇಶ್ ಹಕ್ಕೀಮನೆ, ದೀಕ್ಷಿತ ಮತ್ತು ನಾನು ಈ ಪ್ರಕಾಶನ ಕತೆಯನ್ನು ಸಹೋದರಿ ಮಾನಸ ಎದುರು ಹೇಳಿಕೊಂಡು ನಕ್ಕಿದ್ದೇವೆ, ನೊಂದು ವಿಷಾದ ವ್ಯಕ್ತಪಡಿಸಿ ಮನೆಗೆ ಮರಳಿದೆವು.. ಅದೇ ಕೊನೆ ತೀವ್ರ ಅನಾರೋಗ್ಯದಲ್ಲಿ ಬಳಲುತ್ತಿದ್ದ ಪ್ರಕಾಶ್ ರಾತ್ರಿ ಇಹಲೋಕ ತ್ಯಜಿಸಿದ್ದರು.ರಂಗ ಚಟುವಟಿಕೆಯನ್ನು ಹಳ್ಳಿಯ ಮೂಲೆಗೆ ಒಯ್ದು ಒಂದು ಕ್ರಿಯಾಶೀಲ ಬದುಕು ನಡೆಸಿದ ಪ್ರಕಾಶ್ ಇನ್ನಿಲ್ಲ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ.ಕಾಲನ ರಂಗ ಪರದೆ ತೆರೆದಿದೆ, ಒಡನಾಡಿ ಗಳಿಗೆ ನೋವು ಉಳಿದಿದೆ.

-ಶಿವಾನಂದ ಕಳವೆ

#ಕೆಆರ್ಪ್ರಕಾಶ್ ರಿಗೆ #ರಂಗನಮನಗಳು.

ಶಿರಸಿಯ ರಂಗನಟ, ನಿರ್ದೇಶಕ ಕೆ.ಆರ್.ಪ್ರಕಾಶ ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನರಾದರು.
ಕೆ.ಆರ್.ಪ್ರಕಾಶ ಪ್ರಸ್ತುತ ಕರ್ನಾಟಕ ನಾಟಕ ಅಕಾಡಮಿ ಯ ಸದಸ್ಯರಾಗಿದ್ದರು.
ತುಂಬ ಚಿಕ್ಕ ಪ್ರಾಯದಲ್ಲೇ ರಂಗಭೂಮಿಯ ಗೀಳು ಹತ್ತಿಸಿಕೊಂಡಿದ್ದ ಪ್ರಕಾಶ ಉತ್ತಮ ನಟರಾಗಿದ್ದರು.‌ಅವರದೇ ಆದ ವಿಶಿಷ್ಡ ಶೈಲಿಯಲ್ಲಿ ನಾಟಕಗಳನ್ನ ಕಟ್ಟುತ್ತಿದ್ದರು. ಮುಖ್ಯವಾಗಿ ಹಳ್ಳಿಗಳ ತಂಡಗಳ ಜೊತೆ ನಾಟಕವಾಡುತ್ತ ಶಿರಸಿಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ರಂಗಾಸಕ್ತಿ ಬೆಳೆಯಲು ಕಾರಣರಾಗಿದ್ದರು.
‘ಪ್ರಕೃತಿ ರಂಗಭೂಮಿ’ ಯಲ್ಲಿ ಹಲವಾರು ಸಾಹಸಗಳನ್ನ ಮಾಡಿದ ಪ್ರಕಾಶ್ ನಿಸರ್ಗ ಮತ್ತು ರಂಗಭೂಮಿಗಳು ಲೀನವಾಗಬಹುದಾದ ಸಾಧ್ಯತೆಗಳ ಕುರಿತು ಯೋಚಿಸುತ್ತಿದ್ದರು. ಹಾಗೆಯೇ ಸಮುದ್ರ ದಡದಲ್ಲಿ, ಜಲಪಾತದೆದುರು, ಪ್ರಪಾತದಲ್ಲಿ ಹೀಗೆ ಹಲವಾರು ಪ್ರಯೋಗಗಳನ್ನು ಮಾಡಿದ್ದರು. ಮತ್ತಿಘಟ್ಟದ ಗೆಳೆಯರೊಡನೆ ಅವರು ಮಾಡಿದ ಪ್ರಯೋಗಗಳು ಅನೇಕ.
ಪ್ರಕಾಶ್ ಹೆಸರಲ್ಲಿ ಪ್ರಶಸ್ತಿಯೂ ಕೊಡಮಾಡಲ್ಪಡುತ್ತಿತ್ತು. ರಂಗಭೂಮಿಯ ಅನೇಕ ಹಿರಿಯರು ಪ್ರಶಸ್ತಿ ಸ್ವೀಕರಿಸಿದ್ದರು.
ಶಿರಸಿಯ ‘ರಂಗಸಂಗ’ ಕ್ಕಾಗಿಯೂ ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದರು.
ಇನ್ನೂ ಹಲವು ವರ್ಷ ರಂಗಕಾಯಕ ಮಾಡಬಹುದಾಗಿದ್ದ ಪ್ರಕಾಶ್ ಅನಾರೋಗ್ಯ ದಿಂದ ಹಠಾತ್ ನಿರ್ಗಮಿಸದ್ದಾರೆ.
ಅವರಿಗೆ ನಮನಗಳು.
‘ಚಿಂತನ ರಂಗ ಅಧ್ಯಯನ ಕೇಂದ್ರ’ ಮತ್ತು ‘ ಚಿಂತನ ಉತ್ತರ ಕನ್ನಡ’, ಕೆ. ಆರ್ ಪ್ರಕಾಶ್ ರಿಗೆ ಗೌರವಗಳನ್ನು ಸಲ್ಲಿಸುತ್ತವೆ.. ( ಕಿರಣ್ ಭಟ್ ಹೊನ್ನಾವರ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *