ಜಿಲ್ಲೆ ಮತ್ತು ತಾಲೂಕಾ ಕಾಂಗ್ರೆಸ್ ಗಳ ಸಂಘಟನೆಯ ಕಾಂಗ್ರೆಸ್ ಪ್ರತಿಭಟನೆ ಇಂದು ಸಿದ್ಧಾಪುರದಲ್ಲಿ ನಡೆಯಿತು. ಜನರಿಗೆ ಸ್ಫಂದಿಸದ ಜಿಲ್ಲೆಯ ಸಂಸದರು ಮತ್ತು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಮುಖಂಡರಾದ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ಮತ್ತು ಕಾ. ಹಿಂದುಳಿದ ವರ್ಗಗಳ ಘಟಕದ ವಿ.ಎನ್. ನಾಯ್ಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಧುರೀಣ ಎ. ರವೀಂದ್ರ ಮೋದಿ ಬೂಟಾಟಿಕೆಯನ್ನು ಖಂಡಿಸಿ,ರೈತ ವಿರೋಧಿಯಾಗಿರುವ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ತಮ್ಮ ಐಶಾರಾಮಿ ಐಭೋಗ ನಿಲ್ಲಿಸಿ ದೇಶದ ಜನರ ಪರವಾಗಿ ಕೆಲಸಮಾಡಲು ಆಗ್ರಹಿಸಿದರು.