

ಬೆಂಗಳೂರಿಗೆ ಕೆಲಸ ಕ್ಕೆಂದು ತೆರಳಿ ಅಲ್ಲಿಯೇ ವಾಸವಾಗಿದ್ದ ಸಿದ್ದಾಪುರದ ಇಬ್ಬರು ಯುವಕರು ಬೈಕ್ ಲಾರಿ ಅಪಘಾತಕ್ಕೆ ಸಿಕ್ಕು ಸಾವನ್ನಪ್ಪಿದ್ದಾರೆ.
ಸಿದ್ದಾಪುರದ ಮುಂಡಿಗೆತಗ್ಗಿನ ಚಿದಂಬರ ನಾಯ್ಕ ಹಾಗೂ ಹಸವಂತೆಯ ಚಿನ್ಮಯ್ ನಾಯ್ಕ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ದುರ್ದೈವಿಗಳು. ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ಈ ಯುವಕರು ಮಂಗಳವಾರ ಬೆಳಿಗ್ಗೆ ತಮ್ಮ ಬೈಕಿನಲ್ಲಿ ಬ ರುತಿದ್ದಾಗ ಲಾರಿಗೆ ಹೊಡೆದು ಚಿನ್ಮಯ್ ಸ್ಥಳದಲ್ಲೇ ಮೃತರಾದರೆ, ಚಿದಂಬರ ನಾಯ್ಕ್ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತನಾಗಿದ್ದಾನೆ. ಈ ಇಬ್ಬರ ಶವಗಳು ಹುಟ್ಟೂರಿಗೆ ಮರಳಿದ್ದು ಬುಧವಾರ ಅಂತ್ಯಸಂಸ್ಕಾರ ನಡೆಯಲಿದೆ .


