

ಶಿರಸಿ ಉಪ ಪೊಲೀಸ್ ವರಿಷ್ಟ ರಾಗಿ ಸೇವೆಸಲ್ಲಿಸುತಿದ್ದ ಜಿ. ಟಿ. ನಾಯಕ ರನ್ನು ರಾಜ್ಯ ಗುಪ್ತ ವಾರ್ತೆ ವಿಭಾಗಕ್ಕೆ ವರ್ಗಾಯಿಸಿರುವ ಸರ್ಕಾರ ಶಿರಸಿ ಉಪವಿಭಾಗಕ್ಕೆ ರವಿ ನಾಯ್ಕ ರನ್ನು ನೇಮಿಸಿದೆ.
ಶಿರಸಿ ಉಪವಿಭಾಗ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂತೆಯಲ್ಲಿ ಕಳ್ಳತನ ಮಾಡುವವರನ್ನು ಸೆರೆ ಹಿಡಿಯಲು ಪೊಲೀಸ್ ರು ಬಲೆ ಬೀಸಿದ್ದಾರೆ. ಬುಧವಾರದ ಸಂತೆಯಲ್ಲಿ ಮೊಬೈಲ್, ಪರ್ಸ ಕದಿ ಯುತಿದ್ದವರ ಮೇಲೆ ಕಣ್ಣಿಟ್ಟಿದ್ದ ಸಿದ್ದಾಪುರ ಪೊಲೀಸ್ ರು ಬುಧವಾರ ಇಬ್ಬರು ಕಳ್ಳ ರ ನ್ನು ಬಂಧಿಸಿದ್ದಾರೆ. ಈ ಕಳ್ಳರನ್ನು ಪತ್ತೆಮಾಡಲು ಶ್ರಮಿಸಿದ ಪೊಲೀಸ್ ಸೇವೆಯಲ್ಲಿರುವ ಇಬ್ಬರು ಗೃಹರಕ್ಷಕ ಸಿಬ್ಬಂದಿಗಳ ಶ್ರಮವನ್ನು ಶ್ಲಾಘಿಸಲಾಗಿದೆ.



