ಶಿರಸಿ ಕಾಂಗ್ರೆಸ್ ಸಮಾವೇಶದ ಚಿತ್ರಗಳು & ಇತರ ಸ್ಥಳೀಯ ಸುದ್ದಿಗಳು

ಕನ್ನಡಕ್ಕೆ ಶಕ್ತಿ ತುಂಬುವ ಕೆಲಸ ಅಗತ್ಯ – ನಾಗರಾಜ ಭೈರಿ
ಸಿದ್ದಾಪುರ-28 : ಕನ್ನಡ ನೆಲದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕು. ಕನ್ನಡಕ್ಕೆ ಶಕ್ತಿ ತುಂಬುವ ಕೆಲಸ ಎಲ್ಲ ಸಂಘ-ಸಂಸ್ಥೆಗಳ ಮೂಲಕ ಆಗಬೇಕು. ಮಾನ್ಯ ಅಂತಾರಾಷ್ಟ್ರೀಯ ಸಂಸ್ಥೆ ಕನ್ನಡ ನೆಲದಲ್ಲಿ ಕ್ರಿಯಾತ್ಮಕವಾಗಿ ವಿವಿಧ ಲಯನ್ಸ್ ಕ್ಲಬ್, ಜಿಲ್ಲೆ ಹಾಗೂ ಬಹುಜಿಲ್ಲೆಗಳ ಒಕ್ಕೂಟದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಪ್ರಾದೇಶಿಕ ಭಾಷೆಗಳಿಗೆ ಮಹತ್ವ ನೀಡುತ್ತದೆ ಎಂದು ಲಯನ್ಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ ಚೇರ್ಮನ್ ಲಯನ್ ನಾಗರಾಜ ಭೈರಿ ಹೇಳಿದರು.
ಅವರು ಸಿದ್ದಾಪುರ ಲಯನ್ಸ್ ಕ್ಲಬ್‍ಗೆ ದಿನಾಂಕ: 27-11-2020 ರಂದು ಭೇಟಿ ನೀಡಿ ಕ್ಲಬ್ಬಿನ ಸದಸ್ಯರನ್ನುದ್ದೇಶಿಸಿ ತಮಗಿತ್ತ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅವರು ಮಾತನ್ನಾಡುತ್ತಾ ಭಾಷೆ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುವುದರ ಜೊತೆ, ಪರಸ್ಪರ ಪ್ರೀತಿ ವಿಶ್ವಾಸವನ್ನು ಹೆಚ್ಚಿಸುತ್ತದೆ. ಲಯನ್ಸ್ ಸಮೂಹ ತನ್ನ ಕಾರ್ಯ ಚಟುವಟಿಕೆಗಳನ್ನು ಅಲ್ಲಲ್ಲಿಯ ಪ್ರಾದೇಶಿಕ ಭಾಷೆಗಳ ಮೂಲಕ ನಡೆಸಲು ಪ್ರೋತ್ಸಾಹಿಸುತ್ತದೆ. ಜಾಗತಿಕ ಅರಿವಿನೊಂದಿಗೆ ಪ್ರಾದೇಶಿಕ ಪ್ರೀತಿ ನೆಲೆಗೊಳ್ಳಬೇಕು ಎಂದು ಹೇಳಿದರು.

ಸಿದ್ದಾಪುರದಲ್ಲಿನ ಅಂಧರ ಶಾಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಲ್ಲಿ ಮಹಿಳೆಯರಿಗಾಗಿ ನಡೆಯುತ್ತಿರುವ ಹೊಲಿಗೆ ತರಬೇತಿ ವರ್ಗವನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದು, 48 ವರುಷಗಳಿಂದ ವಿವಿಧ ಜನಪರ ಸೇವೆಯಲ್ಲಿ ಸಿದ್ದಾಪುರ ಕ್ಲಬ್ ನಡೆಯುತ್ತಿದ್ದ ಬಗ್ಗೆ ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ, ಮಾಜಿ ಜಿಲ್ಲಾ ಗವರ್ನರ್ ಕೆ.ಎಂ. ಮುನಿಯಪ್ಪ ಬೆಂಗಳೂರು ರವರು ಮಾತನಾಡಿ, ಸಮಾಜದ ಋಣ ಬಲು ದೊಡ್ಡದು. ವಿವಿಧ ಸೇವಾ ಚಟುವಟಿಕೆಗಳ ಮೂಲಕ ಸಾಮಾಜಿಕ ಋಣಭಾರ ಇಳಿಸಿಕೊಳ್ಳಲು ಸಾಧ್ಯ. ಪ್ರೀತಿ ವಿಶ್ವಾಸಗಳು ಮನುಷ್ಯನ ಸಂಬಂಧಗಳನ್ನು ಗಟ್ಟಿಗೊಳಿಸುವುದರ ಜೊತೆ ಮಾನವೀಯ ಅನುಕಂಪಗಳನ್ನು ಹೆಚ್ಚಿಸಿ ಇನ್ನೊಬ್ಬರ ಕಷ್ಟದಲ್ಲಿ ಸಹಕರಿಸಲು ಸಾಧ್ಯ ಎಂದು ಹೇಳಿದರು.
ಮಾಜಿ ಲಯನ್ಸ್ ಜಿಲ್ಲಾ ಗವರ್ನರ್, ಜಿ.ಪಿ. ದಿವಾಕರ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಲಯನ್ಸ್ ಸಮೂಹಗಳು ಶಹರ ಗ್ರಾಮಾಂತರ ಪ್ರದೇಶಗಳೆಂಬ ಪ್ರತ್ಯೇಕತೆಯನ್ನು ಸೃಷ್ಟಿಸದೇ ತಮ್ಮ ನಿರ್ದಿಷ್ಟ ಗುರಿಗಳೊಂದಿಗೆ ಕಾರ್ಯತತ್ಪರವಾಗಿವೆ. ವೃತ್ತಿಪರ ತರಬೇತಿ ನೀಡುವುದು ಉತ್ತಮ ಸೇವಾಕಾರ್ಯ. ಸಿದ್ದಾಪುರ ಲಯನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಆಶಾಕಿರಣ ಟ್ರಸ್ಟ್‍ದವರ ಜೆ.ಎಂ.ಆರ್. ಅಂಧರ ಶಾಲೆಯಲ್ಲಿ ಮಹಿಳೆಯರಿಗಾಗಿ ನಡೆಯುತ್ತಿರುವ ಹೊಲಿಗೆ ತರಬೇತಿ ಕೇಂದ್ರ ವೀಕ್ಷಿಸಿ ಹೊಲಿಗೆ ಯಂತ್ರವೊಂದನ್ನು ದಾನವಾಗಿ ನೀಡಿ, ತರಬೇತು ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸುತ್ತಿದ್ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆ ಮಾತನಾಡಿ ಸನ್ಮಾನಿತರನ್ನು ಅಭಿನಂದಿಸಿ, ಕೋವಿಡ್ 19 ರ ನಿಯಂತ್ರಣ ಹಾಗೂ ರಕ್ಷಣೆ ಸಲುವಾಗಿ ಕೋಟ್ಯಾಂತರ ರೂ.ಗಳ ಆರ್ಥಿಕ ನೆರವನ್ನು ಲಯನ್ಸ್ ಸಂಸ್ಥೆಗಳ ಮೂಲಕ ವಿತರಿಸಲಾಗಿದೆ. ಜನರ ಕಷ್ಟದಲ್ಲಿ ಭಾಗಿಯಾಗುವುದು ಅತ್ಯುತ್ತಮ ಸೇವೆ ಎಂದು ಹೇಳಿ ಸನ್ಮಾನವನ್ನು ನೆರವೇರಿಸಿದರು.
ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಹೂವಿನಮನೆ ವಹಿಸಿ, ಸಿದ್ದಾಪುರ ಕ್ಲಬ್‍ನ ಜಿಲ್ಲೆ, ರಾಜ್ಯ, ಅಂತರ್‍ರಾಷ್ಟ್ರೀಯ ಮಟ್ಟದ ಲಯನ್ಸ್ ನಾಯಕರು ಭೇಟಿ ನೀಡಿದ್ದು, ಸಂತಸದ ಸಂಗತಿ. ಅವರೊಂದಿಗೆ ಇಂದು ಭೇಟಿ ನೀಡಿದ ಮೂವರು ಲಯನ್ಸ್ ನಾಯಕರು ತಮ್ಮ ವಿವಿಧ ಕಾರ್ಯ ಚಟುವಟಿಕೆಗಳ ಮೂಲಕ ಲಯನ್ಸ್ ಸಮೂಹದ ಕೀರ್ತಿಯನ್ನು ಹೆಚ್ಚಿಸಿದ್ದು, ನಮ್ಮ ಕ್ಲಬ್ಬಿನ ಸನ್ಮಾನ ಸ್ವೀಕರಿಸಿದ ಬಗ್ಗೆ ಸಂತಸವಾಗಿದೆ ಎಂದರು.
ಲಯನ್ ಆರ್.ಎಂ. ಹೆಗಡೆ ಬಾಳೇಸರ, ಕಾರ್ಯದರ್ಶಿ ರಾಘವೇಂದ್ರ ಭಟ್ಟ ಕಲ್ಲಾಳ, ಜಿಲ್ಲಾ ಚೇರ್ಮನ್ ಸತೀಶಗೌಡರ್ ಹೆಗ್ಗೋಡ್ಮನೆ, ನಾಗರಾಜ ಪಾಟೀಲ ಮಳವತ್ತಿ ಉಪಸ್ಥಿತರಿದ್ದರು.
ಜಿ.ಜಿ. ಹೆಗಡೆ ಬಾಳಗೋಡ ಸ್ವಾಗತಿಸಿ ನಿರೂಪಿಸಿದರು. ನಾಗರಾಜ ಎಂ. ದೋಶೆಟ್ಟಿ ವಂದಿಸಿದರು.

ನಿಧನ ಸುದ್ದಿ- ಗಂಗೂಬಾಯಿ ಗಣಪತಿ ಭಟ್ಟ.
ಸಿದ್ದಾಪುರ: ತಾಲೂಕಿನ ಗಾಳಿಜಡ್ಡಿ ಸಮೀಪದ ಗಂಗೂಬಾಯಿ ಗಣಪತಿ ಭಟ್ಟ(85) ಗಾಳೀಮನೆ ಇವರು ಸೋಮವಾರ ನಿಧನಹೊಂದಿದರು.
ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರಬಂಧು-ಬಳಗವಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *