

https://www.youtube.com/watch?v=-uZ-7WMTdgI&t=72s
ಬೆಂಗಳೂರಿನಲ್ಲಿ ನಡೆದ 2 ಮದುವೆಗಳು ಮತ್ತು ತುಮಕೂರು ಶಿರಾದಲ್ಲಿ ನಡೆದ ಮದುವೆಯೊಂದರ ಆರತಕ್ಷತೆ
ಕಾರ್ಯಕ್ರಮಗಳು ಸಿದ್ಧಾಪುರದಲ್ಲಿ ಕಳೆದ ವಾರ ನಡೆದವು. ನಗರದ ಉದ್ಯಮಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಕೆ.ಜಿ.ನಾಗರಾಜ್ ರ ಪುತ್ರನ ಆರತಕ್ಷತೆ ಕಾರ್ಯಕ್ರಮ ಕಳೆದ ರವಿವಾರ ಹೊಸೂರು ಬಂಕೇಶ್ವರ ದೇವಸ್ಥಾನದ ಮದುವೆ ಛತ್ರದಲ್ಲಿ ನಡೆಯಿತು.
ಉಪನ್ಯಾಸಕ ಎಂ.ಕೆ.ನಾಯ್ಕ ಹೊಸಳ್ಳಿಯವರ ಮಗಳು ಗೀತಾಂಜಲಿ ಆರತಕ್ಷತೆ ಕಾರ್ಯಕ್ರಮ ಇತ್ತೀಚೆಗೆ ಶಂಕರಮಠದಲ್ಲಿ ನಡೆಯಿತು.
ನಮ್ಮ ಧ್ವನಿಯ ಪ್ರಗತಿಪರ ಯುವಕ ಲೋಹಿತ್ ನಾಯ್ಕ ಮದುವೆ ಆರತಕ್ಷತೆ ಕಾರ್ಯಕ್ರಮ ಅವರ ಹುಟ್ಟೂರು ಗಿರಗಡ್ಡೆಯಲ್ಲಿ ನಡೆಯಿತು.ಅವರು ಶಿರಾದಲ್ಲಿ ಸರಳ ಅಂತರ್ಜಾತಿ ವಿವಾಹವಾಗುವ ಮೂಲಕ ಅವರ ಗಟ್ಟಿಧ್ವನಿ ಮೊಳಗಿಸಿದ್ದಾರೆ.
(ಸಿದ್ದಾಪುರ-30)
ಪಿ.ಹೆಚ್.ಡಿ ಮತ್ತು ಎಂಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಅರ್ಹ ವಿದ್ಯಾರ್ಥಿಗಳಿಗೆ ಕೋವಿಡ್ ಕಾರಣ ಹೇಳಿ ಫೆಲೋಶೀಫ್ ಮೊತ್ತವನ್ನು 2 ಲಕ್ಷದಿಂದ 1 ಲಕ್ಷಕ್ಕೆ ಇಳಿಸಿರುವ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಇಲಿಯಾಸ ಇಬ್ರಾಹಿಂ ಸಾಬ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಬಿಜೆಪಿ ಸರ್ಕಾರದ ಈ ಕ್ರಮದಿಂದ ಪ್ರತಿಭಾವಂತ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಮೇಲೆ ಆರ್ಥಿಕವಾಗಿ ಹೊರೆಬೀಳುತ್ತದೆ. ಅಲ್ಪಸಂಖ್ಯಾತ ಪಿಎಚ್‍ಡಿ ವಿದ್ಯಾರ್ಥಿಗಳ ಮೇಲೆ ಮಲತಾಯಿ ಧೋರಣೆ ತೋರುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಗಮನಿಸುತ್ತಿರುವ ಕಾಂಗ್ರೆಸ್ ಪಕ್ಷ ಈ ಕುರಿತು ಏಕೆ ಮೌನವಾಗಿದೆ ಎಂದು ಪ್ರಶ್ನಿಸಿರುವ ಇಲಿಯಾಸ ಇಬ್ರಾಹಿಂ ಸಾಬ ಜೆಡಿಎಸ್ ಅಲ್ಪಸಂಖ್ಯಾತರಿಗಾಗಿ ಈ ಹಿಂದೆ ಮೀಸಲಿಟ್ಟ ವಿವಿಧ ಯೋಜನೆಗಳನ್ನು ಬಿಜೆಪಿ ಸರ್ಕಾರ ಹತ್ತಿಕ್ಕುತ್ತಿರುವುದು ಅಲ್ಪಸಂಖ್ಯಾತರಿಗೆ ಮಾಡಿದ ದ್ರೋಹವಾಗಿದ್ದು ಮುಂದಿನ ದಿನಗಳಲ್ಲಿ ಇದರ ವಿರುದ್ಧ ಪ್ರತಿಭಟನೆ ಅನಿವಾರ್ಯ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಕಿ ಕೆ.ಎಲ್. ಗಾಯತ್ರಿ ನಿವೃತ್ತಿ ಸನ್ಮಾನ
ಮಲೆನಾಡ ಪ್ರೌಢಶಾಲೆ ಕವಂಚೂರ ನ ವಿಜ್ಞಾನ ಶಿಕ್ಷಕಿ ಕೆ.ಎಲ್.ಗಾಯತ್ರಿ ನಿವೃತ್ತಿ, ಅಂಗವಾಗಿ ಸನ್ಮಾನ ಸಮಾರಂಭ ನೆರವೇರಿದ್ದು ಅಧ್ಯಕ್ಷತೆಯನ್ನು ಮುಖ್ಯಾಧ್ಯಾಪಕಿ ಗಂಗಮ್ಮ ಪಿ. ಜಿ. ಅವರು ವಹಿಸಿ ಮಾತನಾಡಿ ಶಿಕ್ಷಕವೃತ್ತಿ ಅತ್ಯಂತ ಪವಿತ್ರವಾದುದು ಹಾಗೂ ಉತ್ತಮ ಜನಾಂಗವನ್ನು ನಿರ್ಮಿಸುವಲ್ಲಿ ಸಹಾಯಕವಾದುದು ಎಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ಜಿ. ಜಿ. ಹೆಗಡೆ ಬಾಳಗೋಡ ಅವರು ಅಥಿತಿಯಾಗಿ ಮಾತನಾಡಿ ಒಂದು ವಿದ್ಯಾಸಂಸ್ಥೆ ಕಟ್ಟುವಾಗ ಶಿಕ್ಷಕರ ಶ್ರಮ ಮಹತ್ವದ್ದಾಗಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿ ಅವರನ್ನು ವೈಚಾರಿಕವಾಗಿ ರೂಪಿಸುವಲ್ಲಿ ಶಿಕ್ಷಕಿ ಕೆ.ಎಲ್. ಗಾಯತ್ರಿಯವರ ಶ್ರಮ ಸಾರ್ಥಕವಾದುದು ಅಲ್ಲದೆ ವಿಜ್ಞಾನ, ಪರಿಸರ ಮತ್ತು ಸೃಜನಶೀಲ ಮನೋಭಾವವನ್ನು ರೂಪಿಸುವಲ್ಲಿ ಅವರು ಪ್ರಯತ್ನಿಸಿದ್ದಾರೆ ಎಂದು ಅಭಿನಂದಿಸಿ ಮಾತನಾಡಿದರು.
ನಿವೃತ್ತ ಮುಖ್ಯಶಿಕ್ಷಕ ಎಲ್. ಐ. ನಾಯ್ಕ ಗೋಳಗೋಡ ಅಥಿತಿಯಾಗಿ ಭಾಗವಹಿಸಿ ಮಾತನಾಡಿ ಕೆ.ಎಲ್ ಗಾಯತ್ರಿಯವರು ಹಿರಿಯ ಶಿಕ್ಷಕಿಯಾಗಿ ವಿಧ್ಯಾಸಂಸ್ಥೆಯನ್ನು ಕ್ರಿಯಾತ್ಮಕವಾಗಿ ರೂಪಿಸುವಲ್ಲಿ ನಿಷ್ಠೆಯಿಂದ ಕೆಲಸ ನಿರ್ವಹಿಸಿದ್ದಾರೆ ಅವರ ಸೇವೆ ಸಾರ್ಥಕವಾಗಿದೆ ಎಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕಿ ಸ್ವರ್ಣಲತಾ ಎನ್. ಶಾನಭಾಗ ಅಥಿತಿಯಾಗಿ ಮಾತನಾಡುತ್ತಾ ಶಾಲಾಕೋಣೆಯಲ್ಲಿ ದೇಶದ ಭವಿತವ್ಯ ರೂಪಿತವಾಗುತ್ತಿದ್ದು ಅದನ್ನು ಶಿಕ್ಷಕರು ತುಂಬಾ ಜಾಗರೂಕತೆಯಿಂದ ನಿರ್ವಹಿಸಬೇಕಾಗಿದೆ. ಈ ವಿಚಾರದಲ್ಲಿ ಶಿಕ್ಷಕಿ ಕೆ. ಎಲ್. ಗಾಯತ್ರಿಯವರು ತಮ್ಮ 34ವರ್ಷಗಳ ಸಾರ್ಥಕ ಸೇವೆಯನ್ನು ವಿಧ್ಯಾರ್ಥಿಗಳಿಗೆ ಮತ್ತು ವಿದ್ಯಾ ಸಂಸ್ಥೆಗೆ ನೀಡಿದ್ದಾರೆ ಎಂದು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಅಥಿತಿ ಶಿಕ್ಷಕಿ ಶೈಲಾ ಕೆ. ಹಿತ್ತಲಕೊಪ್ಪ ಅವರನ್ನು ಸನ್ಮಾನಿಸಲಾಯಿತು. ಹಳೆಯ ವಿಧ್ಯಾರ್ಥಿಗಳಾದ ಮುದಳಿಧರ ಹಿತ್ತಲಕೊಪ್ಪ ಮತ್ತು ಮೇಘನಾ ಅವರು ಮಾತನಾಡಿದರು.
ತಮಗಿತ್ತ ಸನ್ಮಾನವನ್ನು ಸ್ವಿಕರಿಸಿ ಹಿರಿಯ ಶಿಕ್ಷಕಿ ಕೆ.ಎಲ್.ಗಾಯತ್ರಿಯವರು ಮಾತನಾಡಿ ತನ್ನ ಮೂರುವರೆ ದಶಕಗಳ ಶಿಕ್ಷಕ ವೃತ್ತಿಯನ್ನು ಆತ್ಮತೃಪ್ತಿಯಿಂದ ನಿರ್ವಹಿಸಿದ್ದೇನೆ. ವಿಧ್ಯಾರ್ಥಿಗಳಲ್ಲಿ ಸೃಜನಶೀಲ ಮನೋಭಾವನ್ನು ರೂಪಿಸುವಲ್ಲಿ ವೃತ್ತಿಯ ಜೊತೆಯಲ್ಲಿ ನಿರ್ವಹಿಸಿ ಸಮಯದ ಸದುಪಯೋಗವನ್ನು ಮಾಡಿಕೊಂಡಿದಬಗ್ಗೆ ಸಂತೋಷವಿದೆ ಎಂದು ಹೇಳಿದರು.
ಅಥಿತಿ ಶಿಕ್ಷಕಿ ಶೈಲಾ ಕೆ. ಹಿತ್ತಲಕೊಪ್ಪ ಅವರು ಮಾತನಾಡಿ ಕೃತಜ್ಞತೆ ಅರ್ಪಿಸಿದರು.
ಚೈತ್ರಿಕ ಪ್ರಾರ್ಥಿಸಿದರು, ಪಿ.ಟಿ.ನಾಯ್ಕ ಗೋಳಗೋಡು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಶಿಕ್ಷಕ ಕಿರಣ್ ಬಿ. ನಿರೂಪಿಸಿದರು. ಶಿಕ್ಷಕಿ ವಿನುತಾ ನಾಯ್ಕ ವಂದಿಸಿದರು.




