

ಇಂದು ಬೆಳಿಗ್ಗೆ ಭಜರಂಗದಳದ ಕಾರ್ಯಕರ್ತರೊಬ್ಬರ ಮೇಲೆ ಅನ್ಯ ಕೋಮಿನ ವ್ಯಕ್ತಿಯೊಬ್ಬರು ಮಾಡಿದ ಹಲ್ಲೆ ಹಿನ್ನೆಲೆಯಲ್ಲಿ ಗಾಂಧಿ ಬಜಾರ್ ಸೇರಿದಂತೆ ಶಿವಮೊಗ್ಗದ ಕೆಲವು ಕಡೆ ಶನಿವಾರದ ವರೆಗೆ 144 ಜಾರಿ ಮಾಡಲಾಗಿದೆ. ಇಂದಿನ ಗಲಾಟೆ, ಹಲ್ಲೆ ನಂತರ ಶಾಂತಿ-ಸುವ್ಯವಸ್ಥೆಗಳ ಹಿನ್ನೆಲೆಯಲ್ಲಿ ಈ ನಿಷೇಧಾಜ್ಞೆ ಜಾರಿ ಮಾಡಿರುವುದಾಗಿ ಶಿವಮೊಗ್ಗ ತಹಸಿಲ್ಧಾರರು ತಮ್ಮ ಲಿಖಿತ ಆದೇಶದಲ್ಲಿ ತಿಳಿಸಿದ್ದಾರೆ.
