

ಎನ್.ಪಿ.ಎಸ್. ನೌಕರರ ತೊಂದರೆ ಇರಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯವಿರಲಿ ನೌಕರರ ಸಮಸ್ಯೆ ಬಗೆಹರಿಸಿ ಅವರಿಗೆ ಅನುಕೂಲ ಮಾಡುವ ದಿಸೆಯಲ್ಲಿ ಗೆಲ್ಲುವ ಬಗ್ಗೆ ತಮಗೆ ನಂಬಿಕೆ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ಧಾಪುರ ರಾಘವೇಂದ್ರಮಠದಲ್ಲಿ ಸ್ಥಳಿಯ ಶಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೌಕರರ ಸಂಘದ ಸದಸ್ಯರ ಜೊತೆ ಸಂವಾದ ನಡೆಸಿ ಮಾತನಾಡಿದ ಅವರು ರಾಜ್ಯ ಸರ್ಕಾರಿ ನೌಕರರು, ಕೇಂದ್ರದ ಸರ್ಕಾರಿ ನೌಕರರ ನಡುವೆ ವೇತನ ತಾರತಮ್ಯವಿದೆ. ಎನ್.ಪಿ.ಎಸ್. ನೌಕರರಿಗೆ ಅನ್ಯಾಯವಾಗುತ್ತಿದೆ. ಇವುಗಳ ಜೊತೆಗೆ ಅನೇಕ ತೊಂದರೆ ತಾರತಮ್ಯಗಳಿವೆ. ಇವುಗಳ ಪರಿಹಾರಕ್ಕೆ ಸಂಘ ಪ್ರಯತ್ನಿಸುತ್ತಿದೆ. ಕೋವಿಡ್ ಅವಧಿಯ ವೇತನ ಕಡಿತ ತಪ್ಪಿಸಿದ್ದು,ಸರ್ಕಾರಿ ನೌಕರರ ಹಿತಾಸಕ್ತಿಯ ವಿರೋಧಿ ಕಾನೂನು, ನಿಯಮಗಳ ಜಾರಿ ವಿರುದ್ಧ ಜಯ ಸಾಧಿಸಿದ್ದು ಸೇರಿದಂತೆ ಅನೇಕ ವಿಚಾರಗಳಲ್ಲಿ ಸಂಘ ಜಯ ಗಳಿಸಿದೆ. ಮುಂದೆ ಕೂಡಾ ನೌಕರರ ಹಿತಾಸಕ್ತಿ, ಅನುಕೂಲಕ್ಕಾಗಿ ಸಂಘ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದರು.
ನಿವೃತ್ತರು, ಪ್ರತಿಭಾವಂತರು, ನೌಕರರ ಸಂಘದ ಪದಾಧಿಕಾರಿಗಳ ಸನ್ಮಾನದ ನಂತರ ಸಂವಾದ ನಡೆಸಿದ ಷಡಕ್ಷರಿ ಅಧ್ಯಯನ, ಅನುಭವ ಪೂರಿತ ಮಾತು, ಉತ್ತರ ಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದರು.

