

ಕೋರ್ ಕಮಿಟಿ ಸಭೆಗೆ ಕೊರೋನಾ ಅಡ್ಡಿಯಾಗಿಲ್ಲವೇ, ಕಾರ್ಯಕಾರಿಣಿ ಕೇವಲ ಚುನಾವಣೆ ಗಿಮಿಕ್: ಹೆಬ್ಬಾಳ್ಕರ್ ಲೇವಡಿ
ಕರೋನಾ ಭಯ, ಆತಂಕ ಸರ್ಕಾರದ ನೀತಿ-ನಿಯಮ,ನಿಬಂಧನೆಗಳ ಹಂಗಿಲ್ಲದೆ ಉತ್ತರ ಕನ್ನಡ ಜಿಲ್ಲೆಯ ಸಂಸದರು,ಉಸ್ತುವಾರಿ ಸಚಿವರು ಕಾರ್ಯಕ್ರಮ ನಡೆಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ
ವ್ಯಕ್ತವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ರಾಘವೇಂದ್ರಮಠದ ಸಭಾಂಗಣದಲ್ಲಿ ಇಂದು ಬಿ.ಜೆ.ಪಿ. ಕಾರ್ಯಕರ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಕೇಂದ್ರದ ಮಾಜಿಮಂತ್ರಿ ಅನಂತಕುಮಾರ ಹೆಗಡೆ ಸ್ವಯಂ ಮಾಸ್ಕ್ ಧರಿಸದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರ್ಯಕರ್ತರೂ ಕೂಡಾ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ತಪ್ಪು ಮಾಡಿದರು.
ಸಭೆಯಲ್ಲಿ ಕಾರ್ಯಕರ್ತರು, ಹೊಸದಾಗಿ ಪಕ್ಷಕ್ಕೆ ಸೇರುವ ಕೆಲವು ಮುಖಂಡರು, ಕಾರ್ಯಕರ್ತರಿದ್ದರು ಅವರ್ಯಾರೂ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಸ್ವೇಚ್ಛೆಯಿಂದ ವರ್ತಿಸಿದರು. ಸ್ವಂತ ಉಸ್ತುವಾರಿ ಸಚಿವರು, ಸಂಸದರು ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಸಭೆ-ಸಮಾರಂಭಗಳಲ್ಲಿ ಪಾಲ್ಗೊಂಡರೆ ಸಾರ್ವಜನಿಕರು ಕೇಳುತ್ತಾರೆಯೆ?
ಜನಸಾಮಾನ್ಯರು, ಬಡವರಿಗೆ ದಂಡ ವಿಧಿಸುವ ಸರ್ಕಾರಿ ಅಧಿಕಾರಿಗಳಿಗೆ ಬಿ.ಜೆ.ಪಿ. ಕಾರ್ಯಕ್ರಮ, ಸಚಿವರು, ಸಂಸದರ ನಿಯಮ ಉಲ್ಲಂಘನೆ ಕಾಣಲಿಲ್ಲವೆ? ಎಂದು ಪ್ರಶ್ನಿಸಿದ್ದು, ಅಧಿಕಾರಸ್ಥರು ಶ್ರೀಮಂತರಿಗೆ ಕೋವಿಡ್ ನಿಯಮದಲ್ಲಿ ವಿನಾಯಿತಿ ಇದೆಯೆ? ಎಂದು ಪ್ರಶ್ನಿಸಿದ್ದಾರೆ.
ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಕೊರೋನಾ ಕಾರಣದಿಂದಾಗಿ ಸುವರ್ಣ ವಿಧಾನಸೌಧದಲ್ಲಿ ನಡೆಸಲಾಗುತ್ತಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲು ಕೊರೊನಾ ಅಡ್ಡಿ ಆಗುವುದಿಲ್ಲವೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.

ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಕೊರೋನಾ ಕಾರಣದಿಂದಾಗಿ ಸುವರ್ಣ ವಿಧಾನಸೌಧದಲ್ಲಿ ನಡೆಸಲಾಗುತ್ತಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲು ಕೊರೊನಾ ಅಡ್ಡಿ ಆಗುವುದಿಲ್ಲವೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.
ಎರಡು ಬಾರಿ ಪ್ರವಾಹ ಉಂಟಾಗಿ ಅಪಾರ ನಷ್ಟವಾದರೂ ಸರ್ಕಾರ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಒದಗಿಸಿಲ್ಲ. ಕೇಂದ್ರವೂ ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬರಬೇಕಾದ ಜಿಎಸ್‌ಟಿ ಹಣವನ್ನೂ ಕೊಟ್ಟಿಲ್ಲ. ಹೀಗಿರುವಾಗ ಇಲ್ಲಿ ಕಾರ್ಯಕಾರಿಣಿ ನಡೆಸುವುದು ರಾಜಕೀಯ ಗಿಮಿಕ್ ಆಗಬಾರದು’ ಪ್ರವಾಹ ಸಂಬಂಧ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಪ್ರವಾಹ ಪರಿಹಾರಕ್ಕೆ ಕೋವಿಡ್ ಕಾರಣದಿಂದ ಅನುದಾನದ ಕೊರತೆ ಎನ್ನುವ ಸರ್ಕಾರ, ಬೇರೆಯದಕ್ಕೆಲ್ಲ ಅನಗತ್ಯವಾಗಿ ಖರ್ಚು ಮಾಡುತ್ತಿದೆ. ಸರ್ಕಾರದ ದೃಷ್ಟಿ ಕೇವಲ ಚುನಾವಣೆಯತ್ತ ಮಾತ್ರವೇ ಇದೆ. ಜನರ ಹಿತವನ್ನು ಸಂಪೂರ್ಣ ಕಡೆಗಣಿಸಿದೆ’ ಎಂದು ಆರೋಪಿಸಿದ್ದಾರೆ.
ಕಳೆದ ಎರಡು ಬಾರಿಯಿಂದ ಬಿಜೆಪಿ ಸರ್ಕಾರ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸದಿರುವುದು ದುರಾದೃಷ್ಟಕರ, ಬೆಳಗಾವಿಯ ಹಲವು ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ, ಹಣವನ್ನು ಕೇಳಿದಾಗ, ನಾವು ಸರ್ಕಾರದಿಂದ ಸಾಮಾನ್ಯ ಉತ್ತರವನ್ನು ಪಡೆಯುತ್ತೇವೆ. ಆದರೆ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಿ ಸಭೆ ನಡೆಸಲು ಹಣ ಹೇಗೆ ಇದೆ, ”ಎಂದು
ಅವರು ಪ್ರಶ್ನಿಸಿದ್ದಾರೆ. (kpc)
