

ರೈತ ವಿರೋಧಿ ಮಸೂದೆಗಳನ್ನು ಹಿಂದೆ ಪಡೆಯಲು ಆಗ್ರಹಿಸಿ ಮಂಗಳವಾರ ದೇಶದಾದ್ಯಂತ ನಡೆಯಲಿರುವ ಬಂದ್ ಗೆ ಉತ್ತರ ಕನ್ನಡದಲ್ಲಿ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದೆ.
ಜಿಲ್ಲೆಯ ನಾನಾ ತಾಲೂಕುಗಳ ಕಮ್ಯುನಿಸ್ಟ್ ಸಂಘಟನೆಗಳು, ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷ ಹಾಗೂ ಇತರ ರೈತಪರ ಸಂಘಟನೆಗಳು ನಾಳೆಯ ಭಾರತ್ ಬಂದ್ ಗೆ ಬೆಂಬಲ ಸೂಚಿಸಿವೆ.
‘ನಾಳೆಯ ಭಾರತ್ ಬಂದ್ ಗೆ ಕಾಂಗ್ರೆಸ್ ಬೆಂಬಲವಿದೆ. ಪಕ್ಷದಿಂದ ಬಂದ್ ಅಥವಾ ಮನವಿ ಅರ್ಪಣೆ ಬಗ್ಗೆ ಸೂಚನೆ ನೀಡದಿರುವ ಹಿನ್ನೆಲೆಯಲ್ಲಿ ಮಂಗಳವಾರ ಪಕ್ಷದಿಂದ ಕಾರ್ಯಕ್ರಮಗಳಿಲ್ಲ ಆದರೆ ಬಂದ್ ಗೆ ನಮ್ಮ ಬೆಂಬಲವಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.
ನಾಳೆಯ ಬಂದ್ ಹಿನ್ನೆಲೆಯಲ್ಲಿ ತಹಸಿಲ್ಧಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡುವ ಕಾರ್ಯಕ್ರಮವಿದ್ದು . ರೈತ ವಿರೋಧಿ ಮಸೂದೆಗಳ ವಾಪಸ್ಸಾತಿಗೆ ನಮ್ಮ ಬೆಂಬಲವಾಗಿ ನಾವೂ ಭಾರತಬಂದ್ ನಲ್ಲಿ ಪಾಲ್ಗೊಳ್ಳುತ್ತೇವೆ. ನಾವೆಲ್ಲಾ ರೈತರ ಪರವಾಗಿದ್ದೇವೆ ಎಂದು ತಿಳಿಸಿರುವ ಕಮ್ಯುನಿಸ್ಟ್, ಸಮಾಜವಾದಿ, ಪ್ರಗತಿಪರಮುಖಂಡರಾದ ಯಮುನಾ ಗಾಂವ್ಕರ್, ನಾಗರಾಜ್ ನಾಯ್ಕ, ಕನ್ನೇಶ್ ಕೋಲಶಿರ್ಸಿ ಹಾಗೂ ಕರ್ನಾಟಕ ರಣಧೀರ ಪಡೆ ಜಿಲ್ಲಾಧ್ಯಕ್ಷ ಹೇಮಂತ್ ನಾಯ್ಕ ನಾಳೆಯ ಭಾರತ ಬಂದ್ ಮತ್ತು ಸಿದ್ಧಾಪುರದ ಮನವಿ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಬಂಧುಗಳೇ. *ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ಭಾರತ ಸರ್ಕಾರವನ್ನು ಒತ್ತಾಯಿಸಿ ನಾಳೆ ನಡೆಯುವ ಭಾರತ ಬಂದ್ ಗೆ ಸಮಾಜವಾದಿ ಪಕ್ಷದ ಬೆಂಬಲ .
* ಕೆಂದ್ರ ಸರಕಾರವು “ಸರ್ವಾಧಿಕಾರ ” ದ ಆಡಳಿತ ನಡೆಸುತ್ತಿದ್ದು, ಕಾರ್ಪೋರೇಟ್ ಕಂಪನಿಗಳ ಕೈಗೊಂಬೆ ಸರ್ಕಾರವಾಗಿದೆ. ಭಾರತ ಸರ್ಕಾರ ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸಲಿರುವರೈತರ ಪಾಲಿನ ಮೂರು ಕರಾಳ ಕಾಯ್ದೆಗಳು.1. ಕಾಂಟ್ರ್ಯಾಕ್ಟ್ ಫಾರ್ಮಿಂಗ್ ಮಸೂದೆ – ರೈತರ ಬೆಲೆ ಖಚಿತತೆ ಮತ್ತು ಹೊಲ ಸೇವೆಗಳು (ಸಶಸ್ತ್ರೀಕರಣ ಮತ್ತು ರಕ್ಷಣೆ)2. ರೈತರ ಉತ್ಪನ್ನ , ವ್ಯಾಪಾರ , ವ್ಯವಹಾರ (ಉತ್ತೇಜಕ ಹಾಗೂ ಸವಲತ್ತು) ಕಾಯ್ದೆ 2020 (ಎಪಿಎಂಸಿ ಹಾಗೂ ಎಂ.ಎಸ್.ಪಿ)3. ಆಹಾರ ಸರಕುಗಳನ್ನು ದಾಸ್ತಾನು ಮಾಡಿಕೊಳ್ಳಲು ಅವಕಾಶ ಮಾಡಿಕೊಡುವ ಕಾಯ್ದೆ .
ಈ ಮೂರೂ ಕಾಯ್ದೆಗಳು ರೈತರನ್ನು ಕಾರ್ಪೋರೇಟ್ ಕಂಪೆನಿಗಳ ಕಪಿಮುಷ್ಠಿಯಲ್ಲಿ ಕಟ್ಟಿ ಹಾಕುವ ಕರಾಳ ಕಾಯ್ದೆಗಳಾಗಿವೆ . ರೈತರ ಸ್ವತಂತ್ರ ಹಾಗು ಸ್ವಾವಲಂಬನೆಯ ಬದುಕನ್ನು ನಾಶಗೊಳಿಸಿ ಕಾರ್ಪೋರೇಟ್ ಕಂಪೆನಿಗಳಿಗೆ ಸಂಪೂರ್ಣ ಅನುಕೂಲ ಮಾಡಿಕೊಡುವ ಕಾಯ್ದೆಗಳಾಗಿವೆ . ಹಾಗಾಗಿ ಸಮಾಜವಾದಿ ಪಕ್ಷವು ಅಖಿಲೇಶ್ ಯಾದವ್ ರವರ ನೇತೃತ್ವದಲ್ಲಿ ದೇಶದ ರೈತರ ಹಿತಕ್ಕಾಗಿ, ರೈತರ ರಾಷ್ಟ್ರವ್ಯಾಪಿ ಬಂದ್ ಗೆ ಬೆಂಬಲ ಘೋಷಿಸಿದೆ. ರೈತ, ಕಾರ್ಮಿಕ, ದಲಿತ, ಪ್ರಗತಿಪರ, ಸಂಘಟನೆಗಳ ನೇತೃತ್ವದಲ್ಲಿ ರೈತ ವಿರೋಧಿ ಮಸೂದೆ ಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಮತ್ತು ದೆಹಲಿಯಲ್ಲಿ ನಡೆಯುತ್ತಿರುವ, ಚಾರಿತ್ರಿಕ ಪ್ರತಿಭಟನೆಗೆ ನಮ್ಮ ಪಕ್ಷದ ರಾಜ್ಯ ಘಟಕದ ವತಿಯಿಂದ ಕೂಡ ಕರ್ನಾಟಕ ರಾಜ್ಯಾಧ್ಯಕ್ಷರಾದ ರಾಬಿನ್ ಮ್ಯಾಥ್ಯೂಸ್ ರವರ ನೇತೃತ್ವದಲ್ಲಿ ಬೆಂಬಲ ಘೋಷಿಸಿದೆ. ನಾಳೆ ನಡೆಯುವ ಭಾರತ ಬಂದ್ ಗೆ ಸಮಾಜವಾದಿ ಪಕ್ಷ ಬೆಂಬಲ ನೀಡುತ್ತದೆ ಮತ್ತು ರೈತ ವಿರೋಧಿ ಮಸೂದೆಯನ್ನು ವಾಪಸ್ ಪಡೆಯಲು ಒತ್ತಾಯಿಸುತ್ತದೆ. ವಂದನೆಗಳೊಂದಿಗೆ-
– ನಾಗರಾಜ ನಾಯ್ಕ ಜಿಲ್ಲಾಧ್ಯಕ್ಷರು ಉತ್ತರ ಕನ್ನಡ ಸಮಾಜವಾದಿ ಪಕ್ಷ
