

ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಪಾಳಾ ಗ್ರಾಮದಲ್ಲಿ ದಿನಾಂಕ : 14-07-2015 ರಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಪ್ರಕರಣದ ತನಿಖೆ ಕೈಗೊಂಡ ಎಸ್.ಸಿ.ಪಾಟೀಲ ಪಿ.ಐ. ಮುಂಡಗೋಡ ತನಿಖೆ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಆರೋಪಿತನ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ FTSC-I (CFC) ಉತ್ತರ ಕನ್ನಡ, ಕಾರವಾರ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶ ಶಿವಾಜಿ ಅನಂತ ನಾಲ್ವಾಡೆ ಈ ಪ್ರಕರಣದ ವಿಚಾರಣೆ ಕೈಗೊಂಡು ಆರೋಪಿತನಾದ ಫಕೀರೇಶ ತಂದೆ ನಿಂಗಪ್ಪ ವಾಲೀಕಾರ ಸಾ|| ಬಿಸಟ್ಟಿಕೊಪ್ಪ, ವನಹಳ್ಳಿ ಪಂಚಾಯತಿ ತಾ|| ಶಿಗ್ಗಾಂವ, ಹಾವೇರಿ ಜಿಲ್ಹೆ ಈತನಿಗೆ ಕಲಂ 376 ಐಪಿಸಿ, ಕಲಂ 4,6, Protection of Children from Sexual Offences Act 2012 ಪ್ರಕಾರ 11 ವರ್ಷ ಕಾರಾಗೃಹ ಶಿಕ್ಷೆ 20,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.
ಸರಕಾರದ ಪರವಾಗಿ ಪೋಕ್ಸೊ ವಿಶೇಷ ಅಭಿಯೋಜಕ ಸುಭಾಷ ಪಿ. ಖೈರಾನ ವಾದವನ್ನು ಮಂಡಿಸಿದ್ದರು. ಪ್ರಕರಣವನ್ನು ತನಿಖೆ ಕೈಗೊಂಡ ತನಿಖಾಧಿಕಾರಿ, ತನಿಖಾ ಸಹಾಯಕರು ಹಾಗೂ ಆಪಾದಿತ ನನ್ನು ದಸ್ತಗಿರಿ ಮಾಡಿದ ಅಧಿಕಾರಿ/ ಸಿಬ್ಬಂದಿಯವರಿಗೆ ಹಾಗೂ ಸರಕಾರದ ಪರವಾಗಿ ವಾದ ಮಂಡಿಸಿದ ವಿಶೇಷ ಅಭಿಯೋಜಕ ರಾದ ಶ್ರೀ ಸುಭಾಷ್ ಪಿ. ಖೈರನ ರವರನ್ನು ಪೋಲಿಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಅಭಿನಂದಿಸಿ ಪೋಲಿಸ್ ಅಧಿಕಾರಿ/ಸಿಬ್ಬಂದಿಯವರಿಗೆ ನಗದು ಬಹುಮಾನ ಘೋಷಿಸಿರುತ್ತಾರೆ.
