

ಜೋಗ ಸಮೀಪದಲ್ಲಿದ್ದರೂ ವಿದ್ಯುತ್ ಸಂಪರ್ಕ ಸಮರ್ಪಕವಾಗಿಲ್ಲ, 8 ಮನೆಗಳಿದ್ದರೂ ಸರ್ವ ಋತು ರಸ್ತೆ ಇಲ್ಲ, ಶಾಸಕ,ಸಂಸದ, ಸಚಿವರಿದ್ದರೂ ಯಾರೂ ಈ ಗ್ರಾಮ ನೋಡಿಲ್ಲ…. ಹೀಗೆ ತಮ್ಮೂರಿನ ಸಮಸ್ಯೆಗಳನ್ನು ಹೇಳಿಕೊಂಡವರು ರಾಜು ಮತ್ತು ಗರೀಶ್ ನಾಯ್ಕ

ಇದು ಸಿದ್ಧಾಪುರ ತಾಲೂಕಿನ ಹಲಗೇರಿ ಪಂಚಾಯತ್, ಹೇಮಗಾರ ಗ್ರಾಮದ ಸೋಮುನಕುಳಿ ಮಜರೆಯ ಕತೆ. ಈ ಗ್ರಾಮದಲ್ಲಿ 8 ಮನೆಗಳಿವೆ ವೋಲ್ಟೇಜ್ ಇಲ್ಲದ ವಿದ್ಯುತ್ ಸಂಪರ್ಕ, ವ್ಯವಸ್ಥಿತ ಸಂಚಾರಕ್ಕೆ ಅನುಕೂಲವಿಲ್ಲದ ರಸ್ತೆ…. ಇಂಥ ಅನೇಕ ಅನಾನುಕೂಲಗಳ ಬಗ್ಗೆ ಗ್ರಾಮ ಪಂಚಾಯತ್, ತಾಲೂಕಾ ಪಂಚಾಯತ್, ಜಿಲ್ಲಾ ಪಂಚಾಯತ್ ಶಾಸಕರು ಎಲ್ಲರಿಗೂ ಮನವಿ ನೀಡಿದ್ದಾರೆ. ಆದರೆ ಫಲಶೃತಿ ಶೂನ್ಯ. ಇದಕ್ಕೆ ಪ್ರತಿಭಟನೆಯಾಗಿ ಈ ಗ್ರಾಮದ ಜನರು ಈಗ ಗ್ರಾಮ ಪಂಚಾಯತ್ ಚುನಾವಣೆಯ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಇಂದು ತಹಸಿಲ್ಧಾರರರಿಗೆ ಮನವಿ ನೀಡಿರುವ ಈ ಗ್ರಾಮದ ಪ್ರತಿನಿಧಿಗಳು ತಮ್ಮ ಸಮಸ್ಯೆ ಬಗೆಹರಿಯುವವವರೆಗೆ ಯಾವ ಚುನಾವಣೆಯಲ್ಲೂ ತಾವು ಮತ ಚಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
