

ಸಿದ್ಧಾಪುರ ತಾಲೂಕಿನ ಸೋಮನಕುಳಿ,ಮದ್ದಿನಕೇರಿ ಗ್ರಾಮದ ಜನರು ತಮ್ಮ ಊರಿನ ಮೂಲಭೂತ ಸೌಕರ್ಯ ಪೂರೈಸದ ವ್ಯವಸ್ಥೆ ವಿರುದ್ಧ ಪ್ರತಿಭಟನೆಯಾಗಿ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಬೇಡ್ಕಣಿ ಗ್ರಾಮ ಪಂಚಾಯತ್ ನ ಮದ್ದಿನಕೇರಿ ಹಾಗೂ ಹಲಗೇರಿ ಪಂಚಾಯತ್ ನ ಸೋಮನಕುಳಿ ಜನರು ತಮಗೆ ನೀರು, ರಸ್ತೆ,ವಿದ್ಯುತ್ ಸೇರಿದ ಮೂಲಭೂತ ಅವಶ್ಯಕತೆಗಳನ್ನು ಪೂರೈಸದ ಸ್ಥಳಿಯ ಆಡಳಿತದ ಕ್ರಮ ಪ್ರಶ್ನಿಸಿ, ಪ್ರತಿಭಟನಾರ್ಥ ಮತದಾನ ಬಹಿಷ್ಕರಿಸುವುದಾಗಿ ಇಂದು ಸಿದ್ಧಾಪುರ ತಹಸಿಲ್ಧಾರರಿಗೆ ಮನವಿ ನೀಡಿದ್ದಾರೆ.
ಡಿ 27 ರಂದು ನಡೆಯಲಿರುವ ಗ್ರಾ.ಪಂ. ಚುನಾವಣೆಯಲ್ಲಿ ತಾವು ಮತ ಚಲಾಯಿಸುವುದಿಲ್ಲ, ಈ ವರೆಗೆ ಅನೇಕ ಬಾರಿ ನಮ್ಮ ತೊಂದರೆಗಳನ್ನು ಸರ್ಕಾರ, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ ಆದರೆ ಇದರಿಂದ ಪ್ರಯೋಜನವಾಗದಿರುವುದರಿಂದ ಈಗ ಅನಿವಾರ್ಯವಾಗಿ ಮತದಾನ ಬಹಿಷ್ಕರಿಸುತ್ತೇವೆ ಮತ್ತು ನಮ್ಮ ಸಮಸ್ಯೆ ಬಗೆಹರಿಯುವ ವರೆಗೆ ನಾವು ಎಲ್ಲಾ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಸಮಾಜಮುಖಿಗೆ ಪ್ರತಿಕ್ರೀಯಿಸಿರುವ ಸ್ಥಳಿಯ ತಹಸಿಲ್ಧಾರ ಮಂಜುಳಾ ಭಜಂತ್ರಿ ಸೋಮನಕುಳಿ, ಮದ್ದನಕೇರಿ ಜನರು ಗ್ರಾ.ಪಂ. ಮತದಾನ ಬಹಿಷ್ಕರಿಸುವುದಾಗಿ ಮನವಿ ನೀಡಿದ್ದಾರೆ. ಅವರ ತುರ್ತು ಸಮಸ್ಯಗಳ ಪರಿಹಾರಕ್ಕೆ ಸ್ಪಂ ದಿಸಲು ತಾಲೂಕಾಡಳಿತದಿಂದ ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ. ಈ ಗ್ರಾಮಗಳ ಜನರು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹೇಳಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈಗಲೂ ಅವಕಾಶವಿದೆ. ಮತದಾನ ಜವಾಬ್ಧಾರಿ,ಕರ್ತವ್ಯ ಮತ್ತು ಪವಿತ್ರಕೆಲಸ, ಹಕ್ಕು ಹಾಗಾಗಿ ಈ ಗ್ರಾಮಗಳ ಜನರಿಗೆ ಮನವರಿಕೆ ಮಾಡಿ ಮತದಾನ ಮಾಡಲು ವಿನಂತಿಸುತ್ತೇವೆ. ಅವರ ಸಮಸ್ಯೆಗಳಿಗೂ ಸ್ಪಂದಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

1 Comment