ಕಳೆದ ಎರಡ್ಮೂರು ದಶಕಗಳಿಂದ ಬೇಡಿಕೆಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪ್ರತ್ಯೇಕ ಜಿಲ್ಲೆ ಸ್ಥಾಪನೆ ಬೇಡಿಕೆ ಈಗ ಕಿಚ್ಚು ಹಚ್ಚಿಸಿದೆ. ಕರೋನಾ ಅವಧಿಯ ಮೊದಲು ರೂಪಿತವಾಗಿದ್ದ ಶಿರಸಿ ಜಿಲ್ಲೆ ಬೇಡಿಕೆ ಈಗ ಮತ್ತೆ ಹೊಸರೂಪ ಪಡೆದಿದ್ದು ಇಂದು ಶಿರಸಿ-ಸಿದ್ಧಾಪುರಗಳಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ಶಿರಸಿ ಜಿಲ್ಲಾ ಹೋರಾಟ ಸಮೀತಿ ಆಯೋಜಿಸಿದ್ದ ಈ ಪಂಜಿನ ಮೆರವಣಿಗೆಯಲ್ಲಿ ಡೊಳ್ಳು ಹೊಡೆಯುತ್ತಾ ಪಂಜಿನ ಮೆರವಣಿಗೆ ಮಾಡಿದ ಸದಸ್ಯರು ಸಿದ್ಧಾಪುರದಲ್ಲಿ ತಿಮ್ಮಪ್ಪ ನಾಯಕ ವೃತ್ತದಿಂದ ಅಮೀನಾ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿ ತಮ್ಮ ಬೇಡಿಕೆ ಈಡೇರಿಸಲು ಆಗ್ರಹಿಸಿದರು.
ಈ ಸಂರ್ಭದಲ್ಲಿ ಮಾತನಾಡಿದ ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷ ಉಪೇಂದ್ರ ಪೈ, ಸಿದ್ಧಾಪುರ ತಾಲೂಕಿನ ಪ್ರತಿನಿಧಿ ಸಿ.ಎಸ್. ಗೌಡರ್, ಶಿರಸಿಯ ಎಂ.ಎಂ. ಭಟ್ ಶಿರಸಿ ಜಿಲ್ಲೆ ಆಗುವವರೆಗೆ ಹೋರಾಟ ಮುಂದುವರಿಯುತ್ತದೆ. ಇದಕ್ಕೆ ಸಾರ್ವಜನಿಕ ಜಾಗೃತಿ- ಸಹಕಾರ ಮುಖ್ಯ ಎಂದರು.