ಮಾಜಿ ಸಚಿವ ಪಿ ಎಸ್ ಜೈವಂತ ನಿಧನ; ಗಣ್ಯರ ಕಂಬನಿ
ಶಿರಸಿ: ಮಾಜಿ ಅಬಕಾರಿ ಸಚಿವರು, ಹಿರಿಯ ಜನತಾ ಪಾರ್ಟಿಯ ಮುಖಂಡರಾಗಿದ್ದ ಪ್ರೇಮಾನಂದ ಜೈವಂತ(74) ಶುಕ್ರವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಅವರು, ಜೆ ಎಚ್ ಪಟೇಲರ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು.1999ರಲ್ಲಿ ವಿವೇಕಾನಂದ ವೈದ್ಯರೆದುರು ಪಕ್ಷೇತರರಾಗಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಮೃತರಿಗೆ ಮೂವರು ಮಕ್ಕಳಿದ್ದಾರೆ. ಜೈವಂತರ ನಿಧನಕ್ಕೆ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
ನಾನು ಹತ್ತಿರ ಕಂಡಂತೆ ಅತ್ಯಂತ ಸರಳ ಮತ್ತು ಸಜ್ಜನಿಕೆಯ ರಾಜಕಾರಣಿಗಳು ಇವರು. ರಾಜಕಾರಣಿಗಳಲ್ಲಿ ಇರಬಹುದಾದ ಧಿಮಾಕು, ದೌಲತ್ತು ಯಾವುದೂ ಇಲ್ಲದ ಸಾಮಾನ್ಯ ಮನುಷ್ಯ ಆಗಿದ್ದರು. ರಾಜಕೀಯದಲ್ಲಿ ಏರು ಪೇರು ಆದಾಗ ಪಕ್ಷೇತರರಾಗಿ ನಿಂತಾಗ ನನ್ನಂತ ಹವರು ಮತ ಹಾಕುವಷ್ಟು ಒಳ್ಳೆಯ ವ್ಯಕ್ತಿತ್ವ ಹೊಂದಿದವರಾಗಿದ್ದರು. ಶಿರಸಿ-ಸಿದ್ದಾಪುರ ಮೀಸಲು ಕ್ಷೇತ್ರದಲ್ಲಿ ಗೆದ್ದ ಇವರು ಕೆಲವೊಂದು ಯೋಗಾ ಯೋಗದಿಂದ ಮಂತ್ರಿ ಆಗಿ ಕಾರ್ಯ ನಿವ೯ಹಿಸಿದರು.ಪಿ.ಎಸ್ . ಉತ್ತರ ಕನ್ನಡ ಜಿಲ್ಲೆ (ಜೈವಂತರನ್ನು)ಒಬ್ಬ ಜನಸಾಮಾನ್ಯ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. – ದೇವರಾಯ ಕಾನಗೋಡು, ಹುಬ್ಬಳ್ಳಿ.