ಬಣ ರಾಜಕೀಯ -2- ಕಾಂಗ್ರೆಸ್ ಬಿಟ್ಟರೆ ಮತ್ತ್ಯಾರು ಪರ್ಯಾಯ?

ಕಾಂಗ್ರೆಸ್ ವಿರೋಧಿಸುತ್ತಲೇ ರಾಜಕೀಯ,ದೇಶದ ಚುಕ್ಕಾಣಿ ಹಿಡಿದ ಮೋದಿ ಮತ್ತು ಬಿ.ಜೆ.ಪಿ. ಈಗಲೂ ನೆಹರೂ ಟೀಕೆ, ರಾಹುಲ್ ಮಾನಹಾನಿ ಮಾಡುವುದನ್ನು ಬಿಟ್ಟು ತಮ್ಮ ರಾಜಕೀಯ ದೂರದೃಷ್ಟಿಯನ್ನು ಪ್ರತಿಬಿಂಬಿಸಿದ್ದಿಲ್ಲ. ಸ್ವಾತತ್ರ್ಯೋತ್ತರ ಕಾಲದಲ್ಲಿ ರಸ್ತೆ, ಆಣೆಕಟ್ಟೆಗಳೇ ದೇಶದ ಜೀವನಾಡಿ, ದೇವಾಲಯಗಳು ಎಂದು ಸಮರ್ಥಿಸಿದ ನೆಹರೂ ದೂರದೃಷ್ಟಿ ಮುಂದೆ ಮೋದಿ ಕಾಲ ಕಸ. ದೇವಾಲಯ,ದೇವರು, ನಂಬಿಕೆ, ದೇಶಪ್ರೇಮ, ರಾಷ್ಟ್ರೀಯತೆಗಳೆಂಬ ಹುಸಿ ಡಂಬಾಚಾರಗಳ ಮೂಲಕ ರಾಜಕೀಯ ಮಾಡುತ್ತಿರುವ ಮೋದಿ ಅಂಬಾನಿ ಮೊಮ್ಮಗನ ನಾಮಕರಣಕ್ಕೆ ಸಿಪಾಯಿಯಂತೆ ಹೋಗಿ ದೇಶ, ಪಕ್ಷದ ಮಾನಕಳೆಯುವ ವಿವೇಕಶೂನ್ಯ ಪ್ರಧಾನಿ ಮೋದಿಯಂಥವರ ಎದುರು ಇಂದಿರಾ, ನೆಹರೂ, ಚಂದ್ರಶೇಖರ್, ಗುಜ್ರಾಲ್, ಮನಮೋಹನಸಿಂಗ್ ಈ ನಾಟಕದ ಚೌಕಿದಾರನಿಗಿಂತ ಕೋಟಿ ಅಂಶಗಳಲ್ಲಿ ಮೇಲು.

ಕಾಂಗ್ರೆಸ್ ಮತ್ತು ಜಾತ್ಯಾತೀತ ಈ ಪರಂಪರೆಯ ರಾಹುಲ್ ನಿಜಕ್ಕೂ ವಿದ್ಯಾವಂತ, ಜನರ ಕಷ್ಟ-ನೋವು ಕೇಳಬಲ್ಲ ಸಹೃದಯಿ, ಆದರೆ ಭಾರತ ಎಂಥಾ ದುರಂತದ ಅಂಚಿನಲ್ಲಿದೆ ಎಂದರೆ ವಿದ್ಯೆ-ವಿನಯಗಳ ಗಂಧ-ಗಾಳಿ ಇಲ್ಲದ ಕಟೀಲು,ಪಿಟೀಲುಗಳಂಥ ಮೂರನೇ ದರ್ಜೆಯ ವ್ಯಕ್ತಿಗಳು ರಾಷ್ಟ್ರೀಯ ಪಕ್ಷದ ರಾಜ್ಯ, ದೇಶದ ಅಧ್ಯಕ್ಷರಾಗುತ್ತಿರುವ ಸಂದರ್ಭದಲ್ಲಿ ರಾಹುಲ್ ನಂಥ ಶಿಕ್ಷಿತರು ಗ್ರಾಮ ಪಂಚಾಯತ್ ಪುಡಾರಿಗಳ ಎದುರು ಸಜ್ಜನರು ಸಣ್ಣವರಾದಂತೆಯೇ…….

ಹೀಗೆ ದೇಶದಲ್ಲಿ ನಾಟಕಕಾರ, ಗುಲಾಮ, ಕಳ್ಳ. ಅವಿದ್ಯಾವಂಥ ಪರಿವಾರದ ಸಿಪಾಯಿ ಪ್ರಮುಖ ಹುದ್ದೆ ಅಲಂಕರಿಸಿ, ದೇಶವನ್ನು ಬಿಕ್ಕಟ್ಟಿನೆಡೆಗೆ ಒಯ್ಯುತ್ತಿರುವ ಸಂದರ್ಭದಲ್ಲಿ ರಾಹುಲ್ ಅಧ್ಯಕ್ಷರಾಗಿ, ಪ್ರಧಾನಿಯಾಗಿ ದೇಶವನ್ನು ನಡೆಸುವ ಎಲ್ಲಾ ಅವಕಾಶಗಳಿವೆ. ಆದರೆ ಪುಂಡರು-ಪೋಕರಿಗಳು ಮತಾಂಧರ ಎದುರು ಸಭ್ಯರು ಸಾಮಾಜಿಕ, ರಾಜಕೀಯ ನಾಯಕತ್ವಕ್ಕೆ ಅಂಜುವಂಥಹ ಸೊಗಸಿನ ರಾಹುಲ್ ಸೂಕ್ಷ್ಮಜ್ಞತೆ ಕಳ್ಳರ ನಾಡಿನಲ್ಲಿ ಪುಂಡರನ್ನು ನಾಯಕನನ್ನಾಗಿಸುತ್ತಿದೆ.

ಪ್ರಾದೇಶಿಕ ಪಕ್ಷಗಳು ಜಾತ್ಯಾತೀತತೆಯ ಅಡಿಪಾಯ, ಏಕತೆಯ ಸಂಕಲ್ಫದೊಂದಿಗೆ ಒಂದಾಗಿ ದೇಶದ ಚುಕ್ಕಾಣಿಯನ್ನು ನೀಡಿದರೆ ಅದನ್ನು ನಿಭಾಯಿಸುವ ಸಾಮರ್ಥ್ಯ ರಾಹುಲ್, ಶಶಿ ತರೂರ್, ಅಖಿಲೇಶ್ ಯಾದವ್ ಸೇರಿದಂತೆ ಕನಿಷ್ಟ ಒಂದು ಡಜನ್ ಭಾರತೀಯ ಯುವಕರಿಗಿದೆ, ಆದರೆ ವ್ಯವಸ್ಥೆ ಒಳ್ಳೆಯದರ ಬದಲು ಕೆಟ್ಟದನ್ನೇ ಸ್ವೀಕರಿಸುತ್ತಿರುವುದರಿಂದ ಕೋಮುವಾದಿ ಮತಾಂಧರು ವಿಜೃಂಬಿಸುತಿದ್ದಾರೆ. ಈ ಸ್ಥಿತಿಯಲ್ಲಿ ಭಾರತದಲ್ಲಿ ಜಾತ್ಯಾತೀತ ಶಕ್ತಿಗಳ ಒಕ್ಕೂಟ ಅಥವಾ ಕಾಂಗ್ರೆಸ್ ನಂಥ ಎಲ್ಲರನ್ನೂ ಒಳಗೊಳ್ಳುವ ಪಕ್ಷ ಅಧಿಕಾರ ಹಿಡಿದರೆ ಭಾರತ ಭವ್ಯ ಭಾರತವಾಗುವುದರಲ್ಲಿ ಅನುಮಾನಗಳಿಲ್ಲ. ಈ ಹಿನ್ನೆಲೆಯಲ್ಲಿ ಭಾರತದ ಚುಕ್ಕಾಣಿ ಹಿಡಿಯಲು ಈಗಿರುವ ನಾಟಕರಾರನಿಗಿಂತ ನೂರಾರು ಜನ ಸಮರ್ಥರು, ಯೋಗ್ಯರೂ ಇದ್ದಾರೆ.

ದೇಶದಲ್ಲಿ ಕಾಂಗ್ರೆಸ್ ಮೃಧು ಹಿಂದುತ್ವ ಅನುಸರಿಸಿ ವಿನಾಶದ ಅಂಚಿಗೆ ಸಾಗಿದೆ. ರಾಹುಲ್ ಮೃಧುಹಿಂದುತ್ವ, ಬ್ರಾಹ್ಮಣಶಾಹಿ ನಯವಂಚಕರನ್ನು ಹೊರಗಿಟ್ಟು ಭಾರತೀಯ ಬಹುಸಂಖ್ಯಾತರಿಗೆ ಅನುಕೂಲ ಮಾಡಿದರೆ ಅವರೂ ಬೆಳೆದಾರು. ದೇಶಕ್ಕೂ ಒಳಿದಾದೀತು.

ದೇಶದಲ್ಲಿ ಮತಾಂಧರು, ಉಳ್ಳವರ ಅಟ್ಟಹಾಸದ ಬಾಯುಪಚಾರದ ಅಚ್ಚೆದಿನ ಬದಲು ನಿಜವಾದ ಅಚ್ಚೇ ದಿನ ಬರಲು ಪ್ರಾದೇಶಿಕ ಹಿತಾಸಕ್ತಿಗಳ ಸಮಾನ ಆಸಕ್ತಿಗಳ ಜಾತ್ಯಾತೀತ, ಧರ್ಮಾತೀತ ಒಕ್ಕೂಟ ರಚನೆ ಈ ಕಾಲದ ಅನಿವಾರ್ಯತೆ.

ದೇಶದಲ್ಲಿ ದೇಶ ಮತ್ತು ಕಾಂಗ್ರೆಸ್ ನಂಥ ದೇಶಪ್ರೇಮಿ ಪಕ್ಷಕ್ಕೆ ನಿಜ ನಾಯಕ ನಾವಿಕನಾಗುವವರೆಗೆ ಮತಾಂಧರು ಬೊಬ್ಬಿರಿದು, ಹಿಗ್ಗಬಹುದು ಆದರೆ ದೇಶ ಮತಾಂಧ ದುಷ್ಟರಿಗೆ ಪರ್ಯಾಯವಾಗಿ ಹೊಸ ಪಕ್ಷ, ನಾಯಕನ ಸೃಷ್ಟಿ ಮಾಡುವುದರಲ್ಲಿ ಅನುಮಾನಗಳಿಲ್ಲ.

ಈಗ ನಾವು ಗ್ರಾ.ಪಂ. ಚುನಾವಣೆಯ ಹೊಸ್ತಿಲಲ್ಲಿದ್ದೇವೆ. ರೈತ ಪರವಾಗಿದ್ದ ಕುಮಾರಸ್ವಾಮಿ ಮತ್ತು ಜೆ.ಡಿ.ಎಸ್. ಪಕ್ಷವನ್ನು ಆಪೋಶನ ಮಾಡಿರುವ ಬಿ.ಜೆ.ಪಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ ನಿರ್ನಾಮ ಮಾಡಿ ಮುಂದೆ ಮತಾಂಧತೆಗೆ ಅಡ್ಡವಾಗಿರುವ ಕಾಂಗ್ರೆಸ್ ನಿರ್ನಾಮಕ್ಕೆ ಮುಂದಾಗಿದೆ. ಹಾಗಾಗಿ ಕುಮಾರಸ್ವಾಮಿ, ಜೆ.ಡಿ.ಎಸ್. ನೊಂದಿಗೆ ಜಾತ್ಯಾತೀತತೆ ಬಲಿಪಡೆದಿರುವ ಬಿ.ಜೆ.ಪಿ. ಇಂಥ ಪ್ರಾದೇಶಿಕ ಪಕ್ಷಗಳನ್ನು ನುಂಗಿ ಸರ್ವಾಧಿಕಾರಕ್ಕೆ ಮುನ್ನುಡಿ ಬರೆಯುತ್ತಿದೆ.

ಇದಕ್ಕೆ ದೃಷ್ಟಾಂತವೆಂಬಂತೆ ಮತಾಂಧ ಪಕ್ಷ ಕರ್ನಾಟಕದ ಲಜ್ಜೆಗೆಟ್ಟ, ಆಶೆಬುರುಕ ಜನಪ್ರತಿನಿಧಿಗಳನ್ನು ಖರೀದಿಸಿ ಸರ್ಕಾರ ರಚಿಸಿ ಜನೋಪಯೋಗಿಯಾಗಿ ವರ್ತಿಸದ ವಿದ್ಯಮಾನ ದಿನದ ವಾಸ್ತವ. ಈ ಸ್ಥಿತಿಯಲ್ಲಿ ರಾಜ್ಯದಲ್ಲಿ ಹಣ, ಬಾಹು,ಅನೈತಿಕ ಬಲಗಳ ಮೂಲಕ ಗ್ರಾಮಪಂಚಾಯತ್ ಗಳನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಸುವ ಬಿ.ಜೆ.ಪಿ.ಗೆ ಪೂರಕವಾಗುವಂಥ ವಾತಾವರಣ ಕಾಂಗ್ರೆಸ್, ಜೆ.ಡಿ.ಎಸ್. ಗಳಿಂದಲೇ ನಿರ್ಮಾಣವಾಗುತ್ತಿದೆ.

ರಾಜ್ಯದಲ್ಲಿ ಪರ್ಯಾಯ, ಅನಿವಾರ್ಯವಾದ ಆಯ್ಕೆಯಾಗಿದ್ದ ಜೆ.ಡಿ.ಎಸ್. ಮತಾಂಧರ ಕೈ ಹಿಡಿದು ಜನದ್ರೋಹಿ ಎನ್ನುವುದನ್ನು ಸಾಬೀತುಮಾಡಿದೆ. ಬಿ.ಜೆ.ಪಿ. ಬಹುಸಂಖ್ಯಾತರನ್ನು ಉಪೇಕ್ಷಿಸುತ್ತಲೇ ಮೆರೆಯಲು ಹವಣಿಸುತ್ತಿದೆ. ಈ ಪರ್ವಕಾಲದಲ್ಲಿ ಕಾಂಗ್ರೆಸ್ ಜನಪರವಾಗಿ ನಿಲ್ಲಬೇಕಿತ್ತು.

ಆದರೆ…. ದೇಶದ ಕಾಂಗ್ರೆಸ್ ನಲ್ಲಿ ರಾಹುಲ್ ಬಿಟ್ಟರೆ ಅನ್ಯಮುಖ ಕಾಣುತ್ತಿಲ್ಲ, ರಾಜ್ಯದಲ್ಲಿ ಶಿವಕುಮಾರ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವ ಬದಲು ಬಿ.ಜೆ.ಪಿ. ನಾಯಕತ್ವದಂತೆ ಉಳ್ಳವರ ಪರ ಎನ್ನುವ ಆರೋಪಗಳಿವೆ. ಇದರ ಮಧ್ಯೆ ಉತ್ತರ ಕನ್ನಡ, ಶಿರಸಿ ಕ್ಷೇತ್ರಕ್ಕೆ ಹಿಂಬಾಗಿಲ ಮೂಲಕ ಬಿ.ಜೆ.ಪಿ.ಗೆ ನೆರವಾಗಲು ಅನ್ಯ ಕ್ಷೇತ್ರದ ಶ್ರೀಮಂತರು ಹವಣಿಸುತಿದ್ದಾರೆ. ಇಂಥದ್ದೇ ವಿದ್ಯಮಾನ ರಾಜ್ಯ ಕಾಂಗ್ರೆಸ್ ನ ವಾಸ್ತವವಾದರೆ ಮಾತಾಂಧರಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ! ಇದೇ ಸಮಯದಲ್ಲಿ ಮೃಧು ಹಿಂದುತ್ವವಾದಿ ದೇಶಪಾಂಡೆಯವರಂಥ ರಾಜಕೀಯ ವ್ಯವಹಾರಸ್ಥರು ಪ್ರತ್ಯಕ್ಷ-ಪರೋಕ್ಷವಾಗಿ ಮತಾಂಧರನ್ನು ಉತ್ತೇಜಿಸುವಂತೆ ಅವರ ಶಿಷ್ಯರು ಶಿರಸಿ-ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬಹುತೇಕ ಕಡೆ ಬಿ.ಜೆ.ಪಿ. ಬೆಂಬಲಿಸುತ್ತಿರುವುದಕ್ಕೆ ಸಹಕಾರಿ ಕ್ಷೇತ್ರದ ಸಹಕಾರಿ ಭಾರತಿ, ಈಗಿನ ಕಾಂಗ್ರೆಸ್ ಬಂಡಾಯಗಾರರೇ ಸಾಕ್ಷಿ. ಈ ಸ್ಥಿತಿಯಲ್ಲಿ ಶಿರಸಿಯ ಗೌಡ, ಸಿದ್ಧಾಪುರದ ನಾಯ್ಕ ಮೃಧು ಹಿಂದುತ್ವವಾದಿ ಆಶಾಢಬೂತಿಗಳೆದುರು ಸೆಣಸುವ ವಿದ್ಯಮಾನ ಸಮಾಜದ ಅಭಿವೃದ್ಧಿ-ಶಾಂತಿ-ಸುವ್ಯವಸ್ಥೆಗೆ ಪೂರಕವಲ್ಲ ಎನ್ನುವ ವಿಶ್ಲೇಷಣೆಗಳಿವೆ.

ಈ ವಿದ್ಯಮಾನಗಳ ನಡುವೆ ಶಿರಸಿ-ಸಿದ್ಧಾಪುರ ಸೇರಿದಂತೆ ಜಿಲ್ಲೆಯಲ್ಲಿ ಭೀಮಣ್ಣ ನಾಯ್ಕ, ವಸಂತ ನಾಯ್ಕ, ಸೇರಿದ ಅನೇಕರು ಕಾಂಗ್ರೆಸ್ ಉಳಿಸುವ ಪ್ರಯತ್ನ ಮಾಡುತಿದ್ದಾರೆ. ಇವರ ಪ್ರಯತ್ನದ ನಡುವೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಾತ್ಯಾತೀತತೆ, ಅಭಿವೃದ್ಧಿಗೆ ವಿರುದ್ಧವಾಗಿ ಸುಳ್ಳು, ನಾಟಕ, ಮತಾಂಧತೆ, ಹಣ, ಉಳ್ಳವರ ಕುಟಿಲತೆ ಮತಾಂಧರ ಪರವಾಗಿವೆ. ಈ ವರ್ತಮಾನದ ನಡುವೆ ಹೊಸವರ್ಷ ಹೊಸ ಭರವಸೆ, ಹೊಸ ನಿರೀಕ್ಷೆಗಳಿಗೆ ಮುನ್ನುಡಿ ಬರೆಯದಿದ್ದರೆ…. ದೇಶದ ಸ್ಥಿತಿ ಸುಧಾರಿಸುವುದು ಕಷ್ಟ.

ಸಿದ್ಧಾಪುರದಲ್ಲಿ ಬಿ.ಜೆ.ಪಿ. ಮತ್ತು ಇಲ್ಲಿಯ ನಾಯಕರ ಸಂಪರ್ಕದಲ್ಲಿರುವ ಕೆಲವು ಕಾಂಗ್ರೆಸ್ಸಿಗರಲ್ಲಿ ಕೆಲವರು ಈಗ ಕಾಂಗ್ರೆಸ್ ಹೆಸರಲ್ಲಿ ಬಂಡಾಯವೆದ್ದು ಬಿ.ಜೆ.ಪಿ.ಗೆ ಪೂರಕವಾಗಿ ನಂತರ ಬಿ.ಜೆ.ಪಿ. ಯಿಂದ ತಾ.ಪಂ., ಜಿ.ಪಂ. ಗೆ ಸ್ಫರ್ಧಿಸಲಿದ್ದಾರೆ ಎನ್ನುವ ಆರೋಪದ ಹಿಂದೆ ಹಾಲಿ ಮತ್ತು ಮಾಜಿ ತಾ.ಪಂ. ಜಿ.ಪಂ. ಗಳ ಕಾರಸ್ಥಾನವಿರುವ ಬಗ್ಗೆ ಜನ ಗಮನಿಸುತ್ತಿರುವುದನ್ನು ಕಾಂಗ್ರೆಸ್ ನಾಯಕತ್ವ ಗೃಹಿಸದಿರುವುದು ಮುಂದಿನ ಅಪಾಯದ ಸಂಕೇತ ಎನ್ನಲಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *