

ಪ್ರಜಾಪ್ರಭುತ್ವದಲ್ಲಿ ಉತ್ತಮರನ್ನು ಆಯ್ಕೆ ಮಾಡಿ ತಮ್ಮ ಆಶೋತ್ತರ ಗಳನ್ನು ಈಡೇರಿಸಿಕೊಳ್ಳಲು ಅನುಕೂಲ ಆಗಲೆಂದೇ ಚುನಾವಣೆಗಳು ನಡೆಯುತ್ತವೆ. ಇಂಥ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸುವುದು ಯಾವುದೇ ಸಮಸ್ಯೆ,ತೊಂದರೆಗಳಿಗೆ ಪರಿಹಾರ ಕ್ರಮವಲ್ಲ ಎಂದಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಚುನಾವಣಾ ನೀತಿ ಸಂಹಿತೆ ಅನುಸರಿಸಿ ಮತದಾನ ಮಾಡುವ ಮೂಲಕ ಪ್ರತಿಯೊಬ್ಬರು ತಮ್ಮ ಕರ್ತವ್ಯ ಪಾಲಿಸಬೇಕು ಎಂದರು.
ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮತದಾನ ಬಹಿಷ್ಕಾರದ ಬೆಳವಣಿಗೆ ನಮ್ಮ ಗಮನಕ್ಕಿದೆ. ಅಂಥವರ ಮನ ಒಲಿಸುವ ಪ್ರಯತ್ನವನ್ನೂ ಮಾಡುತಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಉತ್ತಮ ಪ್ರಗತಿ ಸಾಧಿಸಿದ ಬಗ್ಗೆ ಕೇಳಿದ್ದೇನೆ. ಆದರೆ ಈ ನರೇಗಾ ಯೋಜನೆ ವಿಫಲವಾಗಿರುವ ಮಾಹಿತಿ ನಮಗಿಲ್ಲ. ಮೂಲಭೂತ ಸಮಸ್ಯೆಗಳಿಂದ ನರಳುತ್ತಿರುವ ಗ್ರಾಮಗಳಲ್ಲಿ ನರೇಗಾ ಯೋಜನೆಯಿಂದ ಅಭಿವೃದ್ಧಿ ಕೆಲಸ ಮಾಡುವ ನಿಮ್ಮ ಸಲಹೆ ಸ್ವೀಕಾರಾರ್ಹ ಎಂದರು.
