

ಈಗ ರಾಜ್ಯ ಗ್ರಾ.ಪಂ. ಚುನಾವಣೆಯ ಹೊಸ್ತಿಲಲ್ಲಿದೆ. ಇನ್ನೂ ಎರಡ್ಮೂರು ವರ್ಷ ವಿಧಾನಸಭೆ,ಲೋಕಸಭೆ ಚುನಾವಣೆಗಳು ಅಸಂಭವ. ಇದರ ಮಧ್ಯೆ ಅಥವಾ ಮೊದಲು ಕೇಂದ್ರದಲ್ಲಿ ಲಾಲ್ ಕೃಷ್ಣ ಅಡ್ವಾನಿ, ಯಶವಂತ ಸಿನ್ಹ ಸೇರಿದ ಅನೇಕರು ಅಧಿಕಾರದಾಹಿ ಬಲಪಂಥೀಯ ಉಗ್ರರಿಂದ ಮೂಲೆಗುಂಪಾದರು.
ಇದರ ನಂತರದ ಸರದಿ ರಾಜ್ಯದ ಯಡಿಯೂರಪ್ಪ, ರಮೇಶ್ ಜಿಗಜಿಣಗಿ ಸೇರಿದ ಹಿರಿತಲೆಗಳನ್ನು ಮೂಲೆಗುಂಪು ಮಾಡುವುದಂತೆ. ಹೀಗೆ ಹಿಂದಿನ ದಶಕದಿಂದ ಪ್ರಾರಂಭವಾದ ಮತೀಯವಾದಿ ಪಕ್ಷದ ಆಟಾಟೋಪ ಅನೇಕರ ಕುತ್ತಿಗೆಗೆ ತೂಗುಗತ್ತಿಯಾಗಿದೆ.
ಇದೇ ವಿದ್ಯಮಾನ ನಾನಾ ಜಿಲ್ಲೆ, ತಾಲೂಕುಗಳ ಸ್ಥಿತಿ ಕೂಡಾ. ಈಗ ಉತ್ತರ ಕನ್ನಡ, ಸಿದ್ಧಾಪುರದಂಥ ಜಿಲ್ಲೆ ತಾಲೂಕುಗಳನ್ನೇ ಉದಾಹರಣೆಯಾಗಿ ಪರಿಗಣಿಸಿದರೆ……
ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದ ಅವರ ಜಾತಿ-ಬ್ರಾಹ್ಮಣ ವರ್ಗದ ಕೆಲವರು ಎರಡ್ಮೂರು ದಶಕಗಳಿಂದ ನಿರಂತರ ಅಧಿಕಾರ ಪಡೆಯುತಿದ್ದಾರೆ. ಇವರ ಸಮಾನವಯಸ್ಕ,ಮನಸ್ಕ ಅನೇಕರು ಈಗ ರಾಜಕೀಯ ನೈಪಥ್ಯ ಸೇರಿದ್ದಾರೆ. ಈ ಸ್ಥಿತಿಯಲ್ಲಿ ಅನಂತಕುಮಾರ ಹೆಗಡೆ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಿದ್ದರೂ ಅಭಿವೃದ್ಧಿ, ಸಾರ್ವಜನಿಕ ಕೆಲಸ ಯಾರೂ ಮಾಡುತ್ತಾರೆ ಆದರೆ ದೇಶ,ಧರ್ಮ ಇದರ ವಿಚಾರದಲ್ಲಿ…… ಎನ್ನುತ್ತಾ ತಮ್ಮ ಮೂರು ದಶಕಗಳ ವಿಫಲತೆ,ಜನದ್ರೋಹಿತನಕ್ಕೆ ಸಮರ್ಥನೆ ಒದಗಿಸುತ್ತಾರೆ.
ಇವರಂತೆಯೇ ಕಳೆದ ಮೂರು ದಶಕಗಳಿಂದ ಜನಪ್ರತಿನಿಧಿಯಾಗುತ್ತಾ ಯಾವುದೇ ಗುರುತರ ಕೆಲಸ ಮಾಡದ ಈಗಿನ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲೆಯ ಬಹುಸಂಖ್ಯಾತ ದೀವರನ್ನು ಮೂಲೆಗುಂಪು ಮಾಡುವ ಉದ್ದೇಶದಿಂದ ಎಂ.ಜಿ.ನಾಯ್ಕ, ಕೆ.ಜಿ.ನಾಯ್ಕ ಹಣಜಿಬೈಲ್, ಶಿವಾನಂದ ನಾಯ್ಕ ಭಟ್ಕಳ ಸೇರಿದ ಕೆಲವರನ್ನು ತುಳಿಯುವುದಕ್ಕೆ ಸೀಮಿತವಾಗಿದ್ದಾರೆ.
ಇಂಥ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎನ್ನುವ ಗಾದೆಯಂತೆ ತಾಲೂಕು,ಜಿಲ್ಲೆ,ರಾಜ್ಯ ದೇಶದ ವರೆಗೆ ಕಳೆದ ದಶಕ, ಈ ದಶಕದ ಪ್ರಾರಂಭದ ಅವಧಿಯ ಆಡಳಿತಾರೂಢ ಪಕ್ಷದ ಕತೆ ಅವರ ಪಕ್ಷ,ಸಿದ್ಧಾಂತದ ಮುಖಂಡರ ವ್ಯಥೆಯಾಗಿರುವುದು ಬಿಟ್ಟರೆ ಸಾಧನೆ ಹೇಳಿಕೊಳ್ಳಲೂ ಸಿಗುತ್ತಿಲ್ಲ.
ಈ ಸ್ಥಿತಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಬಂದಿರುವುದರಿಂದ ಆಡಳಿತಾರೂಢ ಪಕ್ಷ ಮೇಲುಗೈ ಸಾಧಿಸಲು ಪ್ರಯತ್ನಿಸುವುದು ಸಹಜ. ಆದರೆ ಉತ್ತರ ಕನ್ನಡದ ಜಮ್ಮು ಎಂದು ಕರೆಯಲಾಗುವ ಕರ್ಮಠ ಯಲ್ಲಾಪುರ ತಾಲೂಕಿನ ಯಲ್ಲಾಪುರ ಕ್ಷೇತ್ರ ಹೆಚ್ಚು ಒಡಕುಗಳನ್ನು ಬಹಿರಂಗವಾಗಿ ಪ್ರದರ್ಶಿಸದ ಕ್ಷೇತ್ರ. ಅದನ್ನು ಬಿಟ್ಟರೆ ಕಾರವಾರ, ಕುಮಟಾ, ಭಟ್ಕಳಗಳಲ್ಲಿ ಆಡಳಿತ ಪಕ್ಷಗಳಲ್ಲೇ ಮುಸುಕಿನ ಗುದ್ದಾಟ!
ಶಿರಸಿಯಲ್ಲಿ ಮೇಲ್ನೋಟಕ್ಕೆ ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆಯವರ ಬಣವಾದರೂ ಅನಂತ ಹೆಗಡೆಯವರ ಜೊತೆ ಕೈಜೋಡಿಸಿರುವ ಕಾಗೇರಿಯವರ ಮಾಜಿ ಶಿಷ್ಯರು ಕಾಗೇರಿಯವರ ಹಿಂಬಾಲಕರನ್ನು ಹಣಿಯುವ ಪ್ರಯತ್ನ ಶುರು ಹಚ್ಚಿದ್ದಾರೆ. ಈ ವಿದ್ಯಮಾನ ಅರಿತಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರೋಧಿ ಆಪ್ತಮಿತ್ರ ಮಾಜಿ ಸಚಿವ ಆರ್.ವಿ. ದೇಶಪಾಂಡೆಯವರ ಮಾಜಿ ಶಿಷ್ಯರ ಮೊರೆಹೋಗಿದ್ದಾರೆ. ಇದರ ಪರಿಣಾಮವೆಂದರೆ… ಮನಮನೆ, ಕಾನಗೋಡು, ಕೋಲಶಿರ್ಸಿ, ಬೇಡ್ಕಣಿ ಯಂಥ ದೊಡ್ಡ ಗ್ರಾಮ ಪಂಚಾಯತ್ ಗಳೊಂದಿಗೆ ಕೆಲವು ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಗೆ ಸೆಡ್ಡು ಹೊಡೆದಿರುವ ಕಾಂಗ್ರೆಸ್ ಬಂಡಾಯಗಾರರು ಕಾಗೇರಿ ಹೊಸತಂಡದ ಜೊತೆಗೆ ನೈತಿಕವಲ್ಲದ ಸಂಬಂಧ, ಸಂಪರ್ಕ ಹೊಂದಿರುವುದು ಬಹಿರಂಗ ಸತ್ಯ.
ಇದರ ಮಧ್ಯೆ ಪಟ್ಟಣ ಪಂಚಾಯತ್, ಬಿ.ಜೆ.ಪಿ. ತಾಲೂಕಾ ಘಟಕದ ಮೇಲೆ ಹಿಡಿತ ಹೊಂದಿರುವ ಕೆ.ಜಿ.ನಾಯ್ಕ ಬಣ ವಿಶ್ವೇಶ್ವರ ಹೆಗಡೆಯವರೊಂದಿಗಿನ ರಾತ್ರಿ ಸಂಬಂಧದ ಹೊಸ ಬಣದ ಬಗ್ಗೆ ವಿರೋಧ ಹೊಂದಿದ್ದು ಬಿ.ಜೆ.ಪಿ.ಗೆ ಇದು ನುಂಗಲಾರದ ತುತ್ತಾಗಿದೆ ಎನ್ನಲಾಗುತ್ತಿದೆ!.
ಈಗಿನ ಮಾಹಿತಿಯಂತೆ ಪತ್ರಿಕೆಗಳಲ್ಲಿ ಹೆಸರುಹಾಕಿಕೊಳ್ಳದೆ ರಾಜ್ಯ ವಿಧಾನಸಭಾ ಅಧ್ಯಕ್ಷರ ಪರವಾಗಿ ಜಾಹೀರಾತು ನೀಡುವ ಕೆಲವು ನಾಯಕರಲ್ಲಿ ಪ್ರಮುಖವಾಗಿ ಹೊಸೂರಿನ ಮಾರುತಿ ಟಿ ನಾಯ್ಕ, ಜೋಗ ರಸ್ತೆಯ ಹೊನ್ನಪ್ಪ ಭೋವಿ, ಹಲಗೇರಿಯ ನಾಗರಾಜ್ ನಾಯ್ಕ, ಪಟ್ಟಣದ ಮಂಜು ಭಟ್, ಶಿರಸಿ ರಸ್ತೆಯ ಗುರುರಾಜ್ ಶಾನಭಾಗ ಸೇರಿದ ಕೆಲವೇ ಬೆರಳೆಣಿಕೆಯ ಜನ ಕಾಗೇರಿಯ ಕಾವಲಿಗಿದ್ದುದು ಬಿಟ್ಟರೆ ಉಳಿದ ಅನೇಕರು ಕೆ.ಜಿ. ನಾಯ್ಕ ನೇತೃ ತ್ವದಲ್ಲಿ ಅನಂತಕುಮಾರ ಹೆಗಡೆ ಪರವಾಗಿದ್ದಾರೆ ಎನ್ನಲಾಗುತ್ತಿದೆ.
ವಿಶೇಶವೇನೆಂದರೆ…. ಕಾಗೇರಿಯವರ ಜೊತೆಗಿರುವ ಕೆಲವರು ಗ್ರಾಮೀಣ ಮಟ್ಟದ ಬಿ.ಜೆ.ಪಿ.ಧುರೀಣರನ್ನು ಅನುಮಾನದಿಂದ ನೋಡುತ್ತಿರುವುದರಿಂದ ಅನಂತಹೆಗಡೆ ಮತ್ತು ಕಾಗೇರಿ ಅತ್ಯಾಪ್ತರನ್ನು ಬಿಟ್ಟು ಉಳಿದವರಿಗೆ ಬಿ.ಜೆ.ಪಿ.ಯ ಬೆಂಬಲ, ಹಣಕಾಸಿನ ನೆರವು ಸಿಗುವ ಸಾಧ್ಯತೆ ಕಡಿಮೆ ಇರುವುದರಿಂದ ಅವರು ಸ್ವತಂತ್ರವಾಗಿ ಸ್ಫರ್ಧಿಸುತಿದ್ದು ಈಗ ಬಿ.ಜೆ.ಪಿ.ಯಲ್ಲಿ ನಾಲ್ಕು ಬಣಗಳಾಗಿವೆ!
ಇಂಥ ಸ್ಥಿತಿಯಲ್ಲಿ ಜೆ.ಡಿ.ಎಸ್. ಯುದ್ಧಕ್ಕೆ ಮೊದಲೇ ಶರಣಾಗಿರುವುದರಿಂದ ಜನತಾದಳದ ಕೆಲವರು ಕಾಂಗ್ರೆಸ್ ಪ್ರವೇಶ ಮಾಡಿರುವ ವರ್ತಮಾನವಿದೆ. ಇನ್ನೂ ಕಾಂಗ್ರೆಸ್ ನ ಸ್ಥಿತಿ……………… (ಮುಂದಿನ ಕಂತಿನಲ್ಲಿ)


