ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಎಸ್.ಎಸ್.ನಕುಲ್ ಅವರನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಕಡಕೇರಿ ಹಾಲು ಉತ್ಫಾದಕರ ಸ.ಸಂಘಕ್ಕೆ ಒಂದು ಲಕ್ಷ ರೂ. ದೇಣಿಗೆ
ಸಿದ್ದಾಪುರ
ತಾಲೂಕಿನ ಕಡಕೇರಿ ಹಾಗೂ ಬೇಡ್ಕಣಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯದಿಂದ ಆರ್ಥಿಕ ಸಹಕಾರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ನೀಡಿದ್ದಾರೆ.
ಕಡಕೇರಿ ಹಾಲು ಸಂಘದ ಬಿಎಂಸಿ ಕಟ್ಟಡಕ್ಕೆ ಒಂದು ಲಕ್ಷ ಹಾಗೂ ಬೇಡ್ಕಣಿ ಹಾಲು ಸಂಘಕ್ಕೆ 75ಸಾವಿರ ರೂಗಳನ್ನು ನೀಡಿದ್ದು ಅದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ-ಸಿದ್ದಾಪುರ ತಾಲೂಕಿನ ಯೋಜನಾಧಿಕಾರಿ ರವಿರಾಜ್ ಅವರು ಸೋಮವಾರ ಸಂಘಕ್ಕೆ ಭೇಟಿ ನೀಡಿ ವಿತರಿಸಿದರು.
ಈ ಸಂದರ್ಭದಲ್ಲಿ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ, ಬೇಡ್ಕಣಿ ಸಂಘದ ಅಧ್ಯಕ್ಷ ಎಂ.ಆರ್.ನಾಯ್ಕ ಹಾಗೂ ಆಡಳಿತ ಮಂಡಳಿ ಸದಸ್ಯರು, ಮುಖ್ಯಕಾರ್ಯನಿರ್ವಾಹಕಿ ಪೂರ್ಣಿಮಾ ಸದಾನಂದ ನಾಯ್ಕ, ಧಾರವಾಡ ಹಾಲು ಒಕ್ಕೂಟದ ತಾಲೂಕು ವಿಸ್ತರಣಾಧಿಕಾರಿ ಪ್ರಕಾಶ ಕೆ, ಕಡಕೇರಿ ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಮಗೇಗಾರ ಹಾಗೂ ಆಡಳಿತ ಮಂಡಳಿ ಸದಸ್ಯರು, ಮುಖ್ಯಕಾರ್ಯನಿರ್ವಾಹಕಿ ಹೇಮಾವತಿ ಭಾಸ್ಕರ ನಾಯ್ಕ ಇದ್ದರು.
ನವದೆಹಲಿ: ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಎಸ್.ಎಸ್.ನಕುಲ್ ಅವರನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಸಿದ್ದಾಪುರ:ತಾಲೂಕಿನ ಕಾನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ವೆಂಕಟ್ರಮಣ ದ್ಯಾವಾ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಂಘದ ಕಚೇರಿಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ದಾಸ ಗಣಪತಿ ನಾಯ್ಕ ಸಂಘದ ವಾರ್ಷಿಕ ವರದಿಯನ್ನು ಓದಿ 2019-20ನೇ ಸಾಲಿನಲ್ಲಿನ 46ಸಾವಿರ 394ರೂ ನಿವ್ವಳ ಲಾಭ ಹೊಂದಿದ್ದು 2018-19ನೇ ಸಾಲಿನ ಲಾಭದಲ್ಲಿ ಬೋನಸ್ ಹಾಗೂ ಡಿವಿಡೆಂಡ್‍ನ್ನು ನೀ ಡಲಾಗುತ್ತದೆ ಎಂದು ಹೇಳಿದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಬೋನಸ್ ಹಾಗೂ ಡಿವಿಡೆಂಡ್‍ನ್ನು ಸದಸ್ಯರಿಗೆ ವಿತರಿಸಿ ಮಾತನಾಡಿ ಸಂಘದ ಅಭಿವೃದ್ಧಿಯಲ್ಲಿ ಎಲ್ಲ ಸದಸ್ಯರು ಸಹಕರಿಸಬೇಕು. ಉತ್ತಮ ಗುಣಮಟ್ಟದ ಹಾಲನ್ನು ನೀಡುವುದರೊಂದಿಗೆ ಸಂಘದಿಂದ ಹಾಗೂ ಒಕ್ಕೂಟದಿಂದ ಸಿಗಬಹುದಾದ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಮಹಾಬಲೇಶ್ವರ ದೇವರು ಭಟ್ಟ ಅಗ್ಗೇರೆ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಸಂಘವು ವರದಿ ಸಾಲಿನಲ್ಲಿ 4ಲಕ್ಷ 78ಸಾವಿರದ 782ರೂಗಳಷ್ಟು ನಿಕ್ಕಿ ಲಾಭ ಹೊಂದಿದ್ದು ಸಂಘದ ಶೇರುದಾರ ಸದಸ್ಯರಿಗೆ ಶೇ.3ರಷ್ಟು ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದ್ದು ಸದಸ್ಯರ ಖಾತೆಗೆ ಜಮಾಮಾಡಲಾಗುತ್ತದೆ ಎಂದು ಸಂಘದ ವಾರ್ಷಿಕ ವರದಿ ಮಂಡಿಸಿದ ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಕೃಷ್ಣ ಹೆಗಡೆ ಚಳ್ಳೆಹದ್ದ ತಿಳಿಸಿದರು.
ಸಂಘವು ಪ್ರಗತಿಯ ಹಂತದಲ್ಲಿ ಸಾಗುತ್ತಿದ್ದು ಸದಸ್ಯರು ತಮ್ಮ ಮಹಸೂಲನ್ನು ಸಂಘದ ಮೂಲಕವೇ ಮಾರಾಟ ಮಾಡಿ ಪತ್ತ ಮತ್ತು ಮಾರಾಟ ವ್ಯವಹಾರವನ್ನು ನಡೆಸಬೇಕು. ಸಂಘದಲ್ಲಿ ಕಿರಾಣಿ, ಕೃಷಿ ಉಪಕರಣ ಮಾರಾಟ, ಪಶು ಆಹಾರ ಮಾರಾಟವನ್ನು ನಡೆಸಲಾಗುತ್ತದೆ ಇದರ ಪ್ರಯೋಜನವನ್ನು ಸದಸ್ಯರು ಪಡೆದುಕೊಳ್ಳಬೇಕು. ಕೋವಿಡ್-19ರ ಸಾಂಕ್ರಮಿಕ ರೋಗದ ಲಾಕ್ ಡೌನ್ ಸಂದರ್ಭದಲ್ಲಿ ಸಂಘದಿಂದ ಸದಸ್ಯರ ಮನೆ ಮನೆಗೆ ಕಿರಾಣಿ, ತರಕಾರಿ ಹಾಗೂ ಪಶು ಆಹಾರವನ್ನು ಪೂರೈಸಲಾಗಿದೆ ಎಂದು ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಮಹಾಬಲೇಶ್ವರ ಭಟ್ಟ ಅಗ್ಗೇರೆ ತಿಳಿಸಿದರು.
ಸಂಘದ ಸದಸ್ಯರಿಗೆ ಬೆಳೆವಿಮೆ ಜಮಾ ಆಗದೇ ಇರುವ ಕುರಿತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಈ ಕುರಿತು ಈಗಾಗಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ ಎಂದು ಮುಖ್ಯ ಕಾರ್ಯನಿವಾಹಕ ದಿನೇಶ ಹೆಗಡೆ ಹೇಳಿದರು.
ನಂತರ ಸಂಘದ ಅಭಿವೃದ್ಧಿ ಕುರಿತು ಸದಸ್ಯರು ಚರ್ಚೆ ನಡೆಸಿದರು.ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಅನಂತ ಹೆಗಡೆ ಹೊಸಗದ್ದೆ, ರಾಘವ ಹೆಗಡೆ ಕಲ್ಮನೆ, ಅನಂತ ಹೆಗಡೆ ಗೊಂಟನಾಳ ಕಾರ್ಯಕ್ರಮ ನಿರ್ವಹಿಸಿದರು.
tms ವಾರ್ಷಿಕ ವರದಿ-
ಸಿದ್ದಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ., ಸಿದ್ದಾಪುರ (ಉ.ಕ)
=00000=
ಸಿದ್ದಾಪುರ ಟಿ.ಎಮ್.ಎಸ್.ಗೆ 1ಕೋಟಿ 57 ಲಕ್ಷ ಲಾಭ
ತಾಲೂಕಿನಅಡಿಕೆ ಬೆಳೆಗಾರರ ಹೆಮ್ಮೆಯ ಸಂಸ್ಥೆಯಾದಸಿದ್ದಾಪುರ ಟಿ.ಎಮ್.ಎಸ್. 2019-20 ನೇ ಸಾಲಿನಲ್ಲಿರೂ.1,57,64,420-26 ನಿಕ್ಕಿ ಲಾಭಗಳಿಸಿದ್ದು, ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಸಂಘದ ನಿಷ್ಠಾವಂತ ಹಾಗೂ ಅಭಿಮಾನಿ ಸದಸ್ಯರ ಸಂರ್ಪೂಣ ಸಹಕಾರದಿಂದ, ಅನುಭವಿ ಆಡಳಿತ ಮಂಡಳಿಯ ಸದಸ್ಯರಮಾರ್ಗದರ್ಶನದಲ್ಲಿ ಹಾಗೂ ಸೇವಾ ಮನೋಭಾವ ಹಾಗೂ ಕರ್ತವ್ಯನಿಷ್ಠೆಯ ಸಿಬ್ಬಂದಿಗಳ ಕಾಯಕದಿಂದ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
2020 ನೇ ವರ್ಷದಆರಂಭದಲ್ಲಿಯೇ ಕಾಣಿಸಿಕೊಂಡ ಕರೊನಾ ಸಾಂಕ್ರಾಮಿಕ ಮಹಾಮಾರಿಇಡೀಜಗತ್ತನ್ನೆಅಲ್ಲೋಲ-ಕಲ್ಲೋಲಗೊಳಿಸಿದ್ದು, ಸಂಪೂರ್ಣ ವ್ಯಾಪಾರ ವ್ಯವಹಾರಗಳು ಅಸ್ತವ್ಯಸ್ತವಾಗಿ ಸ್ತಬ್ಧಗೊಂಡಿದ್ದರಿಂದ ಸಂಘದ ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮವಾಗಿ, ವಸೂಲ ಬರಬೇಕಾದ ಬಾಕಿಗಳು ಸಕಾಲದಲ್ಲಿಜಮಾ ಬಾರದಿದ್ದರಿಂದ, ಲಾಭದ ಗಳಿಕೆಯಲ್ಲಿ ಇಳಿಕೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ವ್ಯವಹಾರ ಚೇತರಿಸಿಕೊಂಡು ಉತ್ತಮ ಹಂತತಲುಪಿದೆ.ಕೋವಿಡ್-19 ರ ಸಂಧಿಗ್ಧಕಾಲದಲ್ಲಿಕೂಡಾ ಸಂಘದ ಸಿಬ್ಬಂದಿಗಳು ಕರ್ತವ್ಯ ಪ್ರಜ್ಞೆಯಿಂದ ಕೆಲಸಕಾರ್ಯ ನಿರ್ವಹಿಸಿ ಸದಸ್ಯರಿಗೆ ಸಾಧ್ಯವಾದಷ್ಟು ಸೇವೆಯನ್ನು ನೀಡಿದ್ದಾರೆ.
ಪ್ರಸ್ತುತ ಸಂಘದಲ್ಲಿ 3577 ಶೇರುದಾರ ಸದಸ್ಯರಿದ್ದು, 3.33 ಕೋಟಿ ಶೇರು ಬಂಡವಾಳ ಹೊಂದಿರುತ್ತದೆ.ಸುಮಾರು 3000 ನಾಮಮಾತ್ರ ಸದಸ್ಯರಿದ್ದು, 2019-20 ನೇ ಸಾಲಿನಲ್ಲಿರೂ 112 ಕೋಟಿ ವಹಿವಾಟು ನಡೆಸಲಾಗಿದೆ.ಸಂಚಿತ ನಿಧಿಗಳ ಮೊತ್ತರೂ. 30.99 ಕೋಟಿಯಷ್ಟಿದೆ. ರೂ. 72.18 ಕೋಟಿ ಠೇವುಗಳನ್ನು ಸಂಗ್ರಹಿದ್ದು, ದುಡಿಯುವ ಬಂಡವಾಳವು ರೂ 133.38 ಕೋಟಿತಲುಪಿರುತ್ತದೆ.ವರದಿಯ ವರ್ಷದಲ್ಲಿಕೇಂದ್ರಕಚೇರಿಯಲ್ಲಿ ರೂ.1.14 ಕೋಟಿ, ಕಾನಸೂರ ಶಾಖೆಯಲ್ಲಿ 47.73 ಲಕ್ಷ, ಮಾರಾಟ ಮಳಿಗೆ ಶಿರಸಿಯಲ್ಲಿ ರೂ.96 ಸಾವಿರ, ಕೃಷಿ ವಿಭಾಗದಲ್ಲಿರೂ.7.32 ಲಕ್ಷ, ದವಸಧಾನ್ಯ ವಿಭಾಗದಲ್ಲಿರೂ.11.58 ಲಕ್ಷ, ಔಷಧಿ ವಿಭಾಗದಲ್ಲಿರೂ.1.83 ಲಕ್ಷ ಲಾಭಗಳಿಸಿದ್ದು, ಅಡಿಕೆಖರೀದಿ ವಿಭಾಗದಲ್ಲಿರೂ.16.88 ಲಕ್ಷ, ನಿಯಂತ್ರಣ ವಿಭಾಗದಲ್ಲಿರೂ.6.84 ಲಕ್ಷ ಹಾಗೂ ಅಕ್ಕಿ ಗಿರಣಿ ವಿಭಾಗದಲ್ಲಿರೂ.2.08 ಲಕ್ಷ ಹಾನಿ ಅನುಭವಿಸಿದ್ದು, ವಟ್ಟಾರೆರೂ. 1.57 ಕೋಟಿ ನಿಕ್ಕಿ ಲಾಭಗಳಿಸಿರುತ್ತದೆ.
ಸಂಘಕ್ಕೆ ಅವಶ್ಯವಿರುವ ವ್ಯಾಪಾರಾಂಗಣ, ಉಗ್ರಾಣಗಳು ಹಾಗೂ ಕಟ್ಟಡಗಳ ನವೀಕರಣಗೊಳಿಸಲಾಗಿದೆ.ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಉಗ್ರಾಣಗಳನ್ನು ಹಾಗೂ ಕಟ್ಟಡಗಳನ್ನು ನಿರ್ಮಿಸುವಉದ್ದೇಶ ಹೊಂದಲಾಗಿದೆ.ಸಂಘವು 75ರ ಹೊಸ್ತಿಲಲ್ಲಿ ಇರುವುದರಿಂದ ದಿನಾಂಕ 11-01-2020 ಹಾಗೂ 12-01-2020 ರಂದು75ರ ಸವಿ ನೆನಪಿಗಾಗಿ ಅಮೃತ ಮಹೋತ್ಸವವನ್ನು ವಿಜ್ರಂಬಣೆಯಿಂದಆಚರಿಸಲಾಗಿದ್ದು, ಮೊದಲ ದಿನ ಧಾರ್ಮಿಕ ಪೂಜಾಕಾರ್ಯಕ್ರಮ ಮತ್ತುಸಹಕಾರಿವಿಚಾರಗೋಷ್ಠಿ ಎರಡನೆ ದಿನ ನವೀಕೃತಗೊಂಡ ಸಂಘದ ಆಡಳಿತ ಕಟ್ಟದಡಉದ್ಘಾಟನೆ ಸಮಾರಂಭವನ್ನು ವಿಶ್ವೇಶ್ವರ ಹೆಗಡೆಕಾಗೇರಿ, ಶ್ರೀ ಶಿವರಾಮ ಹೆಬ್ಬಾರ, ಶ್ರೀ ಬಸವರಾಜ ಬೊಮ್ಮಾಯಿ, ಶ್ರೀ ಆರ್.ವಿ.ದೇಶಪಾಂಡೆ ಹಾಗೂ ಶ್ರೀ ಎಚ್.ಹೆ.ಪಾಟೀಲ್ ಮುಂತಾದಗಣ್ಯರನ್ನುಕರೆತಂದುಚಂದಗಾಣಿಸಲಾಯಿತು.ಆ ಸಂದರ್ಭದಲ್ಲಿ ಈ ವರೆಗೆ ಸಂಘದಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರು, ವ್ಯವಸ್ಥಾಪಕರು, ನಿವೃತ್ತ ಸಿಬ್ಬಂದಿಗಳನ್ನು ಮತ್ತುಹಿರಿಯ ಸದಸ್ಯರನ್ನು ಸನ್ಮಾನಿಸಿ, ಅಭಿನಂದಿಸಿ ಸತ್ಕರಿಸಲಾಗಿದೆ. ಅಮೃತ ಮಹೋತ್ಸವಕಾರ್ಯಕ್ರಮವನ್ನುಅದ್ದೂರಿಯಾಗಿಆಚರಿಸಲಾಯಿತು.ಸಂಘದಅಭಿವೃದ್ಧಿಯ ಪ್ರಗತಿಯನ್ನು ಸನ್ಮಾನ್ಯರು ಮುಕ್ತಕಂಠದಿಂದ ಹೊಗಳಿದ್ದು, ರಾಜ್ಯಕ್ಕೆ ಮಾದರಿಯಾಗಿದ ಸಂಸ್ಥೆ ಎಂಬ ಅಭಿಪ್ರಾಯ ಪಟ್ಟಿರುತ್ತಾರೆ.ಇದು ಸಂಘದಎಲ್ಲಾ ಸದಸ್ಯರ ಹೆಮ್ಮೆಯ ವಿಷಯವಾಗಿದೆ.
ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ ಹಸಿ ಅಡಿಕೆ ವ್ಯವಹಾರವನ್ನು ಆರಂಭಿಸಿದ್ದು, ಅಗತ್ಯಬಿದ್ದಲ್ಲಿಸಿಪ್ಪೆ ಚಾಲಿ ವ್ಯವಹಾರವನ್ನು ಪ್ರಾಂರಭಿಸಿಸುವ ಆಲೋಚನೆ ಇರುತ್ತದೆ.ಸದಸ್ಯರಿಗೆಅವಶ್ಯವಿರುವಎಲ್ಲಾ ಅಗತ್ಯತೆಗಳನ್ನು ಪೂರೈಸುವಯೋಜನೆಯೋಚನೆಯಲ್ಲಿದೆ.ಮುಂದಿನ 5 ವರ್ಷದಅವಧಿಗೆ ಆಡಳಿತ ಮಂಡಳಿಯ ಚುನಾವಣೆಅವಿರೋಧವಾಗಿ ನಡೆದುಸದಸ್ಯರುಸಂಘದಒಗ್ಗಟ್ಟನ್ನು ಪ್ರರ್ದಶಿಸುತ್ತಾರೆ.ಆ ಎಲ್ಲಾ ಸದಸ್ಯರಅಭಿಮಾನ ಹಾಗೂ ವಿಶ್ವಾಸಗಳಿಗೆ ದಕ್ಕೆಬಾರದಂತೆ ಆಡಳಿತವನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ ಆಡಳಿತ ಮಂಡಳಿಯ ಮೇಲಿದೆ.ಸದಸ್ಯರ ಸಹಕಾರವನ್ನು ಮತ್ತೊಮ್ಮೆಕೋರಿ, ಸಂಘದ ಏಳ್ಗಿಯಲ್ಲಿ ಭಾಗಿಯಾಗುವಂತೆ ವಿನಂತಿಸಿಕೊಳ್ಳುವುದರೊಂದಿಗೆ ದಿನಾಂಕ 19-12-2020 ರ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿ ಪಾಲ್ಗೋಳುವಂತೆ ಕೋರುತ್ತೇನೆ.
“ ಜೈ ಸಹಕಾರ, ಸಹಕಾರಂ ಗೆಲ್ಗೆ “
ಆಡಳಿತ ಮಂಡಳಿಯ ಪರವಾಗಿ
ಆರ್.ಎಮ್.ಹೆಗಡೆ, ಬಾಳೇಸರ.
ಅಧ್ಯಕ್ಷ.
ನವದೆಹಲಿ: ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಎಸ್.ಎಸ್.ನಕುಲ್ ಅವರನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಎರಡು ವರ್ಷಗಳಿಂದ ಬಳ್ಳಾರಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿಯಾಗಿರುವ ನಕುಲ್ ಪಂಚಾಯತ್ ಚುನಾವಣೆಯ ನಂತರ ಸೇವೆಗೆ ನಿಯೋಜಿತರಾಗಲಿದ್ದಾರೆ.
ಕರ್ನಾಟಕದಿಂದ ಆಯ್ಕೆಯಾಗಿರುವ ರಾಜ್ಯಸಭೆ ಸದಸ್ಯೆಯಾದ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದ ಐಎಎಸ್ ಅಧಿಕಾರಿಯೊಬ್ಬರು ಖಾಸಗಿ ಕಾರ್ಯದರ್ಶಿ ಆಗುತ್ತಿರುವುದು ರಾಜ್ಯದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. (kpc)