

ಶಿರಸಿ ತಾಲೂಕಿನ ಜಾನ್ಮನೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಎಲ್ಲೋಗಿ ಇಂದು ಎ.ಸಿ.ಬಿ. ಬಲೆಗೆ ಬಿದ್ದಿದ್ದಾರೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲಸ, ಕಾರ್ಯಗಳಿಗೆ ಲಂಚ ಪಡೆಯುತ್ತಾರೆ ಎನ್ನುವ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಇಂದು ಕಾರ್ಯಾ ಚರಣೆ ನಡೆಸಿದ ಬೃಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕೃಷ್ಣಪ್ಪರನ್ನು ಬಂಧಿಸಿದರು.
ಚಂದ್ರಶೇಖರ್ ಅಪ್ಪಿನಬೈಲ್ ನಿಧನ- ಸಿದ್ಧಾಪುರ ನಗರದ ಹೊಸೂರಿನ ನಿವೃತ್ತ ನೌ ಕರ ಚಂದ್ರಶೇಖರ್ ಅಪ್ಪಿನಬೈಲ್ ಇಂದು ಹೃದಯಾಘಾತದಿಂದ ನಿಧನರಾದರು. ಕಂದಾಯ ಇಲಾಖೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದ ಅವರು ಕಳೆದ ವರ್ಷ ನಿವೃತ್ತರಾಗಿದ್ದರು.
ಟಿ.ಎಂ.ಎಸ್. ರಂಪಾಟ- ತಾಲೂಕಿನ ವ್ಯವಸಾಯ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಇಂದು ಟಿ.ಎಂ.ಎಸ್. ಸಭಾಭವನದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆಯಲ್ಲಿ ನಡೆದ ಈ ಸಾಮಾನ್ಯ ಸಭೆಯಲ್ಲಿ ಸುಬ್ರಾಯ ಭಟ್ ಗಡಿಹಿತ್ಲು ಮತ್ತು ಮಹಾಬಲೇಶ್ವರ ನಾಯ್ಕ ಕರಮನೆ ಸಂಘದ ವ್ಯವಹಾರ ಪಾರದರ್ಶಕತೆಯ ಬಗ್ಗೆ ತಕರಾರು ಎತ್ತಿದರು. ಈ ಚರ್ಚೆ, ಸಂವಾದದ ಬಿಸಿ ತಣಿಸಲು ಪ್ರಯತ್ನಿಸಿದ ಟಿ.ಎಂ.ಎಸ್. ಕಾನೂನು ಸಲಹೆಗಾರ ರವಿ ಹೆಗಡೆ ಹೂವಿನಮನೆ ಉಭಯತರನ್ನು ಸಮಾಧಾನಿಸಿ ಸಭೆ ಮುಂದುವರಿಸಲು ಅನುಕೂಲ ಮಾಡಿದರು. ಗರಿಷ್ಠ ಸಾಧನೆ ಮಾಡಿದ ಕಾನಸೂರು, ದೊಡ್ಮನೆ,ನಾಣಿಕಟ್ಟಾ ಸೇವಾ ಸಹಕಾರಿ ಸಂಘಗಳನ್ನು ಅಭಿನಂದಿಸಿ,ಪ್ರೋತ್ಸಾಹಧನ ನೀಡಲಾಯಿತು.
ಮತದಾನ ಬಹಿಷ್ಕಾರ ಇಲ್ಲ-
ಸಿದ್ದಾಪುರ
ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಅತ್ತೀಮುರುಡು ಗ್ರಾಮದ ಮತದಾರರು ಗ್ರಾಪಂ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಮನವಿ ನೀಡಿದ್ದರಿಂದ ತಹಸೀಲ್ದಾರ್ ಮಂಜುಳಾ ಎಸ್. .ಭಜಂತ್ರಿ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಮತದಾರೊಂದಿಗೆ ಚರ್ಚೆ ನಡೆಸಿ ಮತದಾನ ಮಾಡುವುದಕ್ಕೆ ಮನವೊಲಿಸಿ ಯಶಸ್ವಿಯಾಗಿದ್ದಾರೆ.
ಗ್ರಾಮದ ವಿಶ್ವೇಶ್ವರ ಹೆಗಡೆ ಅತ್ತೀಮುರಡು, ನರೇಂದ್ರ ಹೆಗಡೆ,ಸಂತೋಷ ಹೆಗಡೆ, ಗಣೇಶ ಹೆಗಡೆ, ಶ್ರೀಪಾದ ಹೆಗಡೆ ಮತ್ತಿತರ ಗ್ರಾಮಸ್ಥರ ಜತೆ ಚರ್ಚೆ ನಡೆಸಿ ಗ್ರಾಪಂನಿಂದ ಆಗಬಹುದಾದ ಕಾಮಗಾರಿ ನಡೆಸುವುದಕ್ಕೆ ಸೂಚಿಸಲಾಗವುದು. ಮುಖ್ಯವಾಗಿ ಬಾಂದಾರ, ಕಾಲು ಸಂಕ, ಸರ್ವಋತು ರಸ್ತೆಯ ಕುರಿತು ಸಂಬಂಧ ಪಟ್ಟ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಮತದಾನ ಬಹಿಷ್ಕರಿಸುವುದು ಸಮಂಜಸವಲ್ಲ ಎಂದು ಮನವರಿಕೆ ಮಾಡಿಕೊಟ್ಟಾಗ ಗ್ರಾಮಸ್ಥರು ಮತದಾನ ಮಾಡುವುದಕ್ಕೆ ಸಮ್ಮತಿ ನೀಡಿದ್ದಾರೆ ಎಂದು ತಹಸೀಲ್ದಾರ್ ಮಂಜುಳಾ ಎಸ್.ಭಜಂತ್ರಿ ತಿಳಿಸಿದ್ದಾರೆ.
ತಾಪಂ ಯೋಜನಾಧಿಕಾರಿ ಎನ್.ಆರ್.ಹೆಗಡೆಕರ್,ಗ್ರಾಪಂ ಪಿಡಿಒ ಸುಬ್ರಹ್ಮಣ್ಯ ಹೆಗಡೆ, ಕಂದಾಯ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.
ಸಾಂಬಾರು ಬೆಳೆಗಳ ಕಂಪನಿಯ ವಾರ್ಷಿಕ ಮಹಾಸಭೆ-
ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ಅಘನಾಶಿನಿ ಸಾಂಬಾರು ಬೆಳೆಗಳ ಕಂಪನಿಯ ವಾರ್ಷಿಕ ಮಹಾಸಭೆ ಮಂಗಳವಾರ ಹಾರ್ಸಿಕಟ್ಟಾದಲ್ಲಿ ನಡೆಯಿತು.
ಅಧ್ಯಕ್ಷತೆವಹಿಸಿದ್ದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಹೆಗಡೆ ಕುಂಬಾರಕುಳಿ ಎಲ್ಲ ಶೇರುದಾರ ಸದಸ್ಯರಿಗೆ ಒಂದು ಸಾವಿರ ರೂಗಳ ಹೆಚ್ಚುವರಿ ಶೇರು ಪತ್ರ ವಿತರಿಸಿ ತೋಟಗಾರಿಕಾ ಇಲಾಖೆಯಿಂದ ಗ್ರಾಮೀಣ ಮಾರುಕಟ್ಟೆ ಮೂಲಸೌಕರ್ಯ ಯೋಜನೆಯಲ್ಲಿ ಗೋದಾಮು ವ್ಯವಸ್ಥೆ, ಕೃಷಿ ಇಲಾಖೆಯ ಸಹಾಯದನದಿಂದ ಕೃಷಿಯಂತ್ರೋಪಕರಣ ಖರೀಧಿ, ಒಂದು ಜಿಲ್ಲೆ ಒಂದು ಬೆಳೆ ಅಡಿಯಲ್ಲಿ ಸ್ಪೈಸ್ ಕ್ಲಸ್ಟರ್ ನಿರ್ಮಾಣಕ್ಕೆ ಕಂಪನಿ ಆಯ್ಕೆ ಆಗಿರುವ ಕುರಿತು ಮಾಹಿತಿ ನೀಡಿದರು.
ಇದೇ ವೇಳೆಯಲ್ಲಿ ಸಾಂಬಾರು ಬೆಳೆಗಳ ಮೌಲ್ಯವರ್ಧನೆ ಕುರಿತು ಸಾತ್ವಿಕ ಹೆಗಡೆ ಶಿರಸಿ ಅವರು ಪ್ರಾತ್ಯಕ್ಷಿಕೆ ನೀಡಿ ಸದಸ್ಯರೊಂದಿಗೆ ಚರ್ಚೆ ನಡೆಸಿದರು.ಕಂಪನಿ ನಿರ್ದೇಶಕರು ಉಪಸ್ಥಿತರಿದ್ದರು.
ನಿರ್ದೇಶಕ ಜಿ.ಎಂ.ಹೆಗಡೆ ಬಾಳೇಸರ ಸ್ವಾಗತಿಸಿದರು.ಸಿಇಓ ದರ್ಶನ ಹೆಗಡೆ ವಾರ್ಷಿಕ ವರದಿ ವಾಚಿಸಿದರು.ನಾಗಪತಿ ಹೆಗಡೆ ಹರ್ತೆಬೈಲ್ ವಂದಿಸಿದರು. ಲೋಕೇಶ ಹೆಗಡೆ ನಿರ್ವಹಿಸಿದರು. ಸಿಬ್ಬಂದಿಗಳಾದ ಪ್ರಮೋದ ಕೊಡಿಯಾ, ಕೆ.ಎಸ್.ಭಟ್ಟ ಸಹಕರಿಸಿದರು.



