ಸ್ಯಾಂಡಲ್ ವುಡ್ ನಟ ನಟಿಯರು ಫಿಟ್ ನೆಸ್ ಗಾಗಿ ಜಿಮ್ ಗಳೀಗೆ ಹೋಗಿ ಗಂಟೆ ಗಟ್ಟಲೆ ಬೆವರಿಳಿಸುವುದನ್ನು ಕಂಡಿದ್ದೇವೆ. ಆದರೆ ನಟ ದಿಗಂತ್ ಮಾತ್ರ ಹೊಸ ಸಾಹಸವೊಂದನ್ನು ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಟ ನಟಿಯರು ಫಿಟ್ ನೆಸ್ ಗಾಗಿ ಜಿಮ್ ಗಳಿಗೆ ಹೋಗಿ ಗಂಟೆ ಗಟ್ಟಲೆ ಬೆವರಿಳಿಸುವುದನ್ನು ಕಂಡಿದ್ದೇವೆ. ಆದರೆ ನಟ ದಿಗಂತ್ ಮಾತ್ರ ಹೊಸ ಸಾಹಸವೊಂದನ್ನು ಮಾಡಿದ್ದಾರೆ.
ದಿಗಂತ್ ನಿನ್ನೆ ಬರೋಬ್ಬರಿ 192 ಕಿ.ಮೀ. ದೂರವನ್ನು ಸೈಕಲ್ ಮೂಲಕ ಕ್ರಮಿಸಿದ್ದಾರೆ.
ಬೆಂಗಳೂರಿನಿಂದ ಹಾಸನಕ್ಕೆ ಸೈಕಲ್ ನಲ್ಲಿ ಆಗಮಿಸಿದ್ದಾರೆ. ಈ ಮೂಲಕ ಕಾರಿನಲ್ಲಿ ಹೋದರೆ 3.30 ಗಂಟೆಗಳ ಹಾದಿಯನ್ನು ಸೈಕಲ್ ತುಳಿದು 8 ಗಂಟೆ 23 ನಿಮಿಷಗಳಲ್ಲಿ ತಲುಪಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿರುವ ನಟ “ನರಕದ ಸವಾರಿ!! ಈ ಪಯಣ ಸಾಧನೆಯಲ್ಲ ಆದರೆ ಸಹಿಷ್ಣುತೆಯ ನಿಜವಾದ ಪರೀಕ್ಷೆ … 192 ಕಿ.ಮೀ.” ಎಂದು ಬರೆದುಕೊಂಡಿದ್ದಾರೆ. (kpc)