Condolance-ಅಗಲಿದ ಗೌರವಾನ್ವಿತರಿಗೆ ಗಣ್ಯರ ನಮನ

ಇಂದು ನಿಧನರಾದ ಸಹಕಾರಿ ಧುರೀಣ ಷಣ್ಮುಖ ಗೌಡರ್ ಮತ್ತು ರವಿವಾರ ಕೊನೆ ಉಸಿರೆಳೆದ ಮುದ್ರಕ ರಾಮಚಂಧ್ರ ಹೆಗಡೆಯವರಿಗೆ
ಜಿಲ್ಲೆಯ ಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ. ರವಿವಾರ ಹೃದಯಾಘಾತದಿಂದ ನಿಧನರಾದ ರಾಘವೆಂದ್ರಮುದ್ರ ಣಾಲಯದ
ಮಾಲಿಕ ರಾಮಚಂದ್ರ ಹೆಗಡೆವರಿಗೆ ಟಿ.ಎಂ.ಎಸ್. ಅಧ್ಯಕ್ಷ ಮತ್ತು ನಿವೃತ್ತ ಶಿಕ್ಷಕ ಜಿ.ಜಿ. ಹೆಗಡೆ ಅಂತಿಮ ನಮನ
ಸಲ್ಲಿಸಿದ್ದರೆ, ಇಂದು ಅಲ್ಫಕಾಲಿಕ ಅನಾರೋಗ್ಯದಿಂದ ನಿಧನರಾದ ಕಾಂಗ್ರೆಸ್ ಮುಖಂಡ ಷಣ್ಮುಖ ಗೌಡರಿಗೆ ಅನೇಕ ಪ್ರಮುಖರು ಅಂತಿಮ ನಮನ ಸಲ್ಲಿಸಿದ್ದಾರೆ.


https://www.youtube.com/watch?v=2-9LXILPatQ&t=77s

ಮರೆಯಾದ ಒಳ್ಳೆಯ ಮನುಷ್ಯ- ಉತ್ತರ ಕನ್ನಡ ಸಹಕಾರಿ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ರಾಜ್ಯ ಅಫೆಕ್ಸ್ ಬ್ಯಾಂಕ್ ನಲ್ಲಿ ಕಳೆದ ಹತ್ತು ವರ್ಷ ಗಳಿಂದ ಸೇವಾ ಮನೋಭಾವದಿಂದ ದುಡಿದ ಅಜಾತಶತ್ರು ಷಣ್ಮುಖ ಗೌಡರ್ ನನ್ನ ಸ್ನೇಹಿತರಾಗಿದ್ದ ಅವರು ಜಿಲ್ಲೆಯ ಸಾಮಾಜಿಕ,ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದವರು. ಅವರ ಸಾವಿನಿಂದ ನಾವೆಲ್ಲಾ ಒಬ್ಬ ಅಪ್ಪಟಮನುಷ್ಯನನ್ನು ಕಳೆದುಕೊಂಡ ನೋವಿನಲ್ಲಿದ್ದೇವೆ. ಜಿಲ್ಲೆ, ಸಮಾಜ ಕಳೆದುಕೊಂಡ ಒಳ್ಳೆಯ ಮನುಷ್ಯನ ಅಗಲಿಕೆಯ ಶೂನ್ಯ,ಅವರ ಕುಟುಂಬದ ನೋವು ಕಡಿಮೆಯಾಗಿ ಅವರಿಗೂ ಸದ್ಘತಿ ದೊರೆಯಲಿ. -ಶಿವರಾಮ್ ಹೆಬ್ಬಾರ್, ಜಿಲ್ಲಾ ಉಸ್ತುವಾರಿ ಸಚಿವರು,ಕೆ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು.

ಸಹಕಾರಿ ರತ್ನ ಕಣ್ಮರೆ-

ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಘಗಳು, ಜಿಲ್ಲಾ ಮಧ್ಯವರ್ತಿ ಬ್ಯಾಂಕ್, ರಾಜ್ಯ ಅಫೆಕ್ಸ್ ಬ್ಯಾಂಕ್ ಜೊತೆಗೆ ಜಿಲ್ಲೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳ ಜೊತೆಗೆ ಅನೇಕರನ್ನು ಬೆಳೆಸಿ ಹಲವು ಸಂಘ-ಸಂಸ್ಥೆಗಳ ಅಭಿವೃದ್ಧಿಗೆ ದುಡಿದಿದ್ದ ಷಣ್ಮುಖ ಗೌಡರ್ ನಿರಂತರ ಸೇವೆಯ ಸಮಾಜಮುಖಿಯಾಗಿದ್ದರು.ಅವರ ಕುಟುಂಬಕ್ಕೆ ಅವರ ವಿದಾಯದ ನೋವನ್ನು ನೀಗಿ ದುಖ: ಕಳೆಯುವ ಶಕ್ತಿ ಅವರ ಹಿತೈಶಿಗಳು,ಆಪ್ತರಿಂದ ಸಾಧ್ಯವಾಗಲಿ,ಅವರ ಸಜ್ಜನಿಕೆಗೆ ನಮ್ಮ ಅಂತಿಮ ನಮನ – ಭೀಮಣ್ಣ ನಾಯ್ಕ,ಉದ್ಯಮಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು (ಉ.ಕ.)

ಆದರ್ಶ ಬದುಕು ಮಾದರಿ- ಷಣ್ಮುಖ ಗೌಡರ್ ಕಳೆದ 4 ದಶಕಗಳಿಂದ ಸಾಮಾಜಿಕ ಬದುಕಿನಲ್ಲಿದ್ದವರು. ಕಳೆದ 25 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡವರು. ಗ್ರಾಮೀಣ ಪ್ರದೇಶದ ಗ್ರಾ.ಪಂ. ಮಟ್ಟದಿಂದ ರಾಜ್ಯಮಟ್ಟದವರೆಗೆ ಎಲ್ಲ ಸಮಾಜದವರೊಂದಿಗೆ, ಎಲ್ಲರೊಂದಿಗೆ ಅನ್ಯೋನ್ಯವಾಗಿರುತಿದ್ದ ಗೌಡರ್ ಸರಳತೆ, ಆದರ್ಶ ಬದುಕು ಹೊಸಪೀಳಿಗೆಗೆ ಮಾದರಿ. ಅವರು ಇನ್ನಷ್ಟು ವರ್ಷ ಬದುಕಿ ಬಾಳಿದ್ದರೆ ಸಮಾಜಕ್ಕೆ ಒಳ್ಳೆಯದಾಗುತಿತ್ತು. ಅವರ ಅನುಪಸ್ಥಿತಿ ಸಮಾಜಕ್ಕೆ ಕೊರತೆ.

– ಆರ್.ಎಂ.ಹೆಗಡೆ ಬಾಳೇಸರ, ಅಧ್ಯಕ್ಷರು ಟಿ.ಎಂ.ಎಸ್.

ಮಹಮದ್ ರಿಂದ ಕಂಬನಿ- ಸಿದ್ದಾಪುರ:21
ಹಿರಿಯ ರಾಜಕಾರಣಿ,ಸಹಕಾರಿ ಜನಾನುರಾಗಿಯಾಗಿದ್ದ ಎಸ್.ಬಿ.ಗೌಡರ್ ಕಲ್ಲೂರ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಆಘಾತವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಜಿಲ್ಲಾ ಕಾಂಗ್ರೆಸ್ ಮೈನಾರಿಟಿ ಸೆಲ್‍ನ ಮಾಜೀ ಅಧ್ಯಕ್ಷರಾದ ಮೆಹಬೂಬಅಲಿ ಅಹಮ್ಮದ್ ಬಾಬಾಜಾನ್ ಹಾಗೂ ಯುವ ಕಾಂಗ್ರೆಸ್ ಮುಖಂಡ ಮಹಮ್ಮದ್ ರಿಯಾಜ್ ಹೊಸೂರು ಕಂಬನಿ ಮಿಡಿದಿದ್ದಾರೆ.

ಮೇರು ವ್ಯಕ್ತಿತ್ವದ ಗೌಡರ್ ಮಾದರಿ ವ್ಯಕ್ತಿ-

ಸಿದ್ಧಾಪುರ ತಾಲೂಕಿನ ಮಣ್ಣಿನ ಮಗನಾಗಿ ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರದ ಮೇರು ವ್ಯಕ್ತಿತ್ವದವರಾಗಿದ್ದ ಷಣ್ಮುಖ ಗೌಡರ್ ಹಣ-ಅಧಿಕಾರದ ಆಸೆಗೆ ಬಿದ್ದವರಲ್ಲ, ಇವನಮ್ಮವ.. ಇವನಮ್ಮವ ಎನ್ನುವ ಶರಣರ ಉಕ್ತಿಯಂತೆ ಎಲ್ಲಾ ಜಾತಿ-ಜನವರ್ಗ ಪ್ರೀತಿಸುತಿದ್ದ ಅವರು ಇಡೀ ಸಮಾಜವನ್ನೇ ಕುಟುಂಬ ಎಂದು ಭಾವಿಸಿದ್ದರು. ತಾಲೂಕು-ಜಿಲ್ಲೆಯ ಸಮಗ್ರ ಚಿತ್ರಣ ಅರಿತಿದ್ದ ಗೌಡರ್ ತಾಲೂಕಿನ ಸಾಮಾಜಿಕ-ಸಹಕಾರಿ ಕ್ಷೇತ್ರದ ಪ್ರಗತಿಗಾಗಿ ಶ್ರಮಿಸಿದ್ದರು. ಅವರ ನಿಧನದಿಂದಾದ ಹಾನಿ ಅವರ ಕುಟುಂಬಕ್ಕಾದ ನೋವು ಶಮನಮಾಡುವ ಶಕ್ತಿಯನ್ನು ಭಗವಂತ ಎಲ್ಲರಿಗೂ ನೀಡಲಿ.- ಪರಮೇಶ್ವರ ಕಾನಳ್ಳಿಮಠ, ಅಧ್ಯಕ್ಷರು ವೀರಶೈವ ಕ್ಷೇಮಾಭಿವೃದ್ಧಿ ಸಂಸ್ಥೆ,ಸಿದ್ಧಾಪುರ.

ರಾಮಚಂದ್ರ ಹೆಗಡೆ ಸಾವಿಗೆ ಶೋಕ-

ಸಿದ್ದಾಪುರ 21: ಮುದ್ರಣ ಕಾರ್ಯದಲ್ಲಿ ತನ್ನ ಕೌಶಲ್ಯವನ್ನು ಹೊಂದಿದ ರಾಘವೇಂದ್ರ ಮುದ್ರಣಾಲಯದ ಮಾಲಿಕ ರಾಮಚಂದ್ರ ವಿ ಹೆಗಡೆಯವರು ನಿನ್ನೆ ನಿಧನರಾಗಿದ್ದು ಅವರ ಪ್ರಯುಕ್ತ ಸಿದ್ದಾಪುರ ಟಿ. ಎಂ. ಎಸ್. ಅಧ್ಯಕ್ಷ ಆರ್. ಎಂ.ಹೆಗಡೆ ಬಾಳೆಸರ ಹಾಗೂ ಲಯನ್ಸ್ ಜಿಲ್ಲಾ ಚೇರ್ಮನ್ ಜಿ. ಜಿ.ಹೆಗಡೆ ಬಾಳಗೋಡ ಅವರು ತಮ್ಮ ತೀವ್ರ ಶೋಕವನ್ನು ವ್ಯಕ್ತ ಪಡಿಸಿದ್ದಾರೆ.
ಅವರು ತನ್ನ ಸ್ವ ಸಾಮರ್ಥ್ಯದಿಂದ ಜೀವನವನ್ನು ರೂಪಿಸಿಕೊಂಡು ಅನೇಕರಿಗೆ ಉದ್ಯೋಗಾವಕಾಶ ವನ್ನು ಕಲ್ಪಿಸಿದ ಉದ್ಯಮಿಯಾಗಿ ದ್ದರು.ಅವರ ಸಜ್ಜನಿಕೆ ,ಸ್ನೇಹಪರ ವ್ಯಕ್ತಿತ್ವ ಅನುಕರಣೀಯ ಎಂದು ಬಣ್ಣಿಸಿದ್ದಾರೆ.

       

.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *