

ಶಿರಸಿ ಉಪವಿಭಾಗದಲ್ಲಿ ಗಾಂಜಾ ವ್ಯವಹಾರದ ಬಗ್ಗೆ ತೀವ್ರ ನಿಗಾ ಇಟ್ಟಿದ್ದೇವೆ. ಇತ್ತೀಚೆಗೆ ಯಲ್ಲಾಪುರದಲ್ಲಿ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬ ಪಾನಿಪುರಿ ಮಾರುತ್ತಾ ಆಗಂತುಕನಂತೆ ಕಾಡು ನುಗ್ಗಿ ರಹಸ್ಯವಾಗಿ ಗಾಂಜಾ ಬಿತ್ತಿ ಯಾರಿಗೂ ಅನುಮಾನ ಬಾರದಂತೆ ಮಾರುತಿದ್ದ ಅವನನ್ನು ಬಂಧಿಸಿದ್ದೇವೆ. ದುರ್ಗಮ ಕಾಡಿನಲ್ಲಿ ಅರಣ್ಯ ಇಲಾಖೆಯವರಿಗೂ ತಿಳಿಯದಂತೆ ಗಾಂಜಾ ಬೆಳೆದು ಮಾರಾಟ ಮಾಡುವವರ ನಿಯಂತ್ರಣಕ್ಕೆ ಅರಣ್ಯ ಇಲಾಖೆಯಸಹಕಾರವನ್ನೂ ಕೇಳುತ್ತೇವೆ -ರವಿ ನಾಯ್ಕ
ಶಿರಸಿ ಉಪವಿಭಾಗದಲ್ಲಿ ಅಕ್ರಮ ಮದ್ಯ ಮತ್ತು ಗಾಂಜಾ ವ್ಯವಹಾರಗಳ ಬಗ್ಗೆ ದೂರುಗಳಿದ್ದು ಅವುಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಜರುಗಿಸುವುದಾಗಿ ಶಿರಸಿ ಪೊಲೀಸ್ ಉಪ ವರಿಷ್ಠಾಧಿಕಾರಿ ರವಿ ನಾಯ್ಕ ಹೇಳಿದ್ದಾರೆ. ಸಿದ್ಧಾಪುರದಲ್ಲಿ ಸಮಾಜಮುಖಿ.ನೆಟ್ ನೊಂದಿಗೆ ಮಾತನಾಡಿದ ಅವರು ಶಿರಸಿ ಉಪವಿಭಾಗ ಸೇರಿದಂತೆ ಕೆಲವೆಡೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ವ್ಯಾಪಾರ ಹೆಚ್ಚಿರುವುದರಿಂದ ಆಯಾ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ವ್ಯವಹಾರಕ್ಕೆ ತಡೆಒಡ್ಡಲು ಸಂಬಂಧಿಸಿದವರಿಗೆ ತಿಳಿಸಿದ್ದೇನಿ ಎಂದರು.
ಶಿರಸಿ ಸೇರಿದಂತೆ ಕೆಲವೆಡೆ ವಾಹನ ಸಂಚಾರ ವ್ಯವಸ್ಥೆ ತೊಂದರೆ ಇದ್ದು ಅದರ ಬಗ್ಗೆ ಪ್ರಮುಖರೊಂದಿಗೆ ಚರ್ಚಿಸಿದ್ದೇನಿ. ಮೊದಲು ಶಿರಸಿ ನಗರದಲ್ಲಿ ವಿನೂತನ ಯೋಜನೆಯೊಂದನ್ನು ಪ್ರಯೋಗ ಮಾಡಿ ನಂತರ ಇತರ ನಗರಗಳಿಗೂ ಅದನ್ನು ವಿಸ್ತರಿಸುವ ಯೋಚನೆಯಿದೆ. ಈ ಯೋಜನೆಯಂತೆ ಕ್ಯಾಮರಾ ಪ್ರತಿವಾಹನವನ್ನು ಅನುಕರಿಸಲಿದೆ. ತಪ್ಪು ಮಾಡಿದ ವ್ಯಕ್ತಿಯ ವಿಳಾಸಕ್ಕೆ ವಾಹನ ನಿಯಮ ಉಲ್ಲಂಘನೆ ದಂಡದ ಪತ್ರ ತಲುಪುತ್ತದೆ. ಈ ಕ್ರಮದಿಂದ ವಾಹನ ಸಂಚಾರ ವ್ಯವಸ್ಥೆ ಸುವ್ಯವಸ್ಥಿತಗೊಳಿಸಿದ ದೃಷ್ಟಾಂತಗಳಿಂದ ಪ್ರೇರಿತರಾಗಿ ಈ ಯೋಜನೆ ರೂಪಿಸುತಿದ್ದೇವೆ ಎಂದು ವಿವರಿಸಿದರು.
ಶಿರಸಿಯಲ್ಲಿ ಈಗಾಗಲೇ ಗುಡ್ ಮಾರ್ನಿಂಗ್ ಬೀಟ್ ಪ್ರಾರಂಭಿಸಿದ್ದೇವೆ. ಇಂಥ ಅವಶ್ಯ ಕಾರ್ಯಗಳಿಗೆ ಸಾರ್ವಜನಿಕರ ತನು-ಮನ-ಧನ ಸಹಾಯ ಕೂಡಾ ನಿರೀಕ್ಷೆ ಮಾಡುತ್ತೇವೆ ಎಂದರು.
ಸಿದ್ಧಾಪುರದಲ್ಲಿ ರಸ್ತೆಯ ಮೇಲೆ ಸಂತೆ ನಡೆಸುವುದರಿಂದ ತೊಂದರೆಯಾಗುತ್ತಿರುವ ಬಗ್ಗೆ ಕೇಳಿದ್ದೇನೆ. ಸ್ಥಳಿಯ ಆಡಳಿತದೊಂದಿಗೆ ಚರ್ಚಿಸಿ ಈ ತೊಂದರೆ ನಿವಾರಿಸುವುದು ಸ್ಥಳಿಯ ಅಂಗಡಿಕಾರರ ಸಹಕಾರದಿಂದ ಅಪರಾಧ ಪತ್ತೆಗೆ ಅನುಕೂಲವಾಗುವಂತೆ ಸಿ.ಸಿ. ಕ್ಯಾಮರಾಗಳ ಪ್ರಯೋಜನ ಪಡೆಯಲು ಸಂಬಂಧಿಸಿದವರಿಗೆ ಸೂಚಿಸಿದ್ದೇನೆ -ರವಿ ನಾಯ್ಕ

