

ವ್ಯಾಪಕ ಟೀಕೆ ಬೆನ್ನಲ್ಲೇ ನೈಟ್ ಕರ್ಫ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ!
ರಾಜ್ಯದಲ್ಲಿ ಇಂದಿನಿಂದ ಜಾರಿಯಾಗಬೇಕಿದ್ದ ನೈಟ್ ಕರ್ಫ್ಯೂವನ್ನು ಹಿಂಪಡೆಯಲಾಗಿದೆ. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ನೈಟ್ ಕರ್ಫ್ಯೂ ಜಾರಿಗೆ ಮುನ್ನವೇ ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಸಿದ್ಧಾಪುರ ತಾಲೂಕಿನ ಇಟಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಕನಳ್ಳಿಯ ಅಂಗನವಾಡಿ ಕಾರ್ಯಕರ್ತೆ ಇಂದಿರಾ ಜಿ.ನಾಯ್ಕ ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತಿದ್ದ 51 ವಯಸ್ಸಿನ ಇಂದಿರಾ ನಾಯ್ಕ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಬ್ಬರು ಮಕ್ಕಳ ಈ ತಾಯಿಯ ಸಾವಿಗೆ ತಾಲೂಕಿಗೆ ತಾಲೂಕೇ ಮರಗಿದೆ.
ಷಣ್ಮುಖ ಗೌಡರಿಗೆ ಭಾವಪೂರ್ಣ ಶೃದ್ಧಾಂಜಲಿ
ಸಿದ್ದಾಪುರ: ತಾಳಗುಪ್ಪದ ಕೂಡ್ಲಿಮಠದ ಶ್ರೀ.ಮು.ನಿ.ಪ್ರ ಶ್ರೀ ಸಿದ್ದವೀರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹಿರಿಯ ಸಹಕಾರಿ ಧುರಿಣ ಷಣ್ಮುಖ ಗೌಡರ್ ಕಲ್ಲೂರಿಗೆ ಭಾವಪೂರ್ಣ ಶೃದ್ಧಾಂಜಲಿ ಕಾರ್ಯಕ್ರಮವನ್ನು ಕಲ್ಲೂರಿನ ಅವರ ಮನೆಅಂಗಳದಲ್ಲಿ ನಡೆಸಲಾಯಿತು. ಅವರ ಅಂತ್ಯಕ್ರಿಯೆ ಮುನ್ನಾ ಅಂತಿಮ ದರ್ಶನ ಪಡೆದ ಅನೇಕರು ಕಣ್ಣಿರು ಸುರಿಸಿದರು.
ಶೃದ್ದಾಂಜಲಿ ಸಭೆಯಲ್ಲಿ ಶ್ರೀಗಳು ಮಾತನಾಡಿ ನಮ್ಮ ಮಠದ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದರು. ಧಾರ್ಮಿಕ ಹಾಗೂ ಲೌಖಿಕ ಪರಂಪರೆಯನ್ನು ಕಾರ್ಯಕೊಂಡು ಬಂದವರು. ಜನರ ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಸದಾ ಶ್ರಮಿಸಿದ್ದು, ಅವರ ವ್ಯಕ್ತಿತ್ವ ಮಾದರಿಯಾಗಿದೆ. ಅನೇಕ ಆದರ್ಶಗಳನ್ನು ಸೃಷ್ಟಿಸಿ ಹೋದ ಧಿಮಂತ ನಾಯಕ ಎಂದರು.
ಟಿ.ಎಮ್.ಎಸ್ ಅಧ್ಯಕ್ಷರು, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಆರ್.ಎಮ್. ಹೆಗಡೆ ಬಾಳೇಸರ ಮಾತನಾಡಿ ಅನೇಕ ರಚನಾತ್ಮಕ ಕಾರ್ಯಗಳಿಗಾಗಿ ತಮ್ಮ ವ್ಯಕ್ತಿತ್ವವನ್ನು ನಿರೂಪಿಸಿಕೊಂಡು ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ದುಡಿದ ಮಹಾನ್ ವ್ಯಕ್ತಿ ಆಗಿದ್ದರು ಎಂದರು.
ಜಿ.ಪಂ ಮಾಜಿ ಸದಸ್ಯ ಈಶ್ವರ ನಾಯ್ಕ ಮನಮನೆ ಮಾತನಾಡಿ, ಗ್ರಾಮೀಣ ಅಭಿವೃದ್ದಿಯಲ್ಲಿ ಷಣ್ಮುಖ ಗೌಡರ್ ಅವರ ಕೊಡುಗೆ ಅವಿಸ್ಮರಣೀಯ ಎಂದರು. ಟಿ.ಎಮ್.ಎಸ್ ನಿರ್ದೇಶಕ ಸುಬ್ರಹ್ಮಣ್ಯ ಗ. ಭಟ್, ಚಟ್ನಳ್ಳಿ ಮಾತನಾಡಿ ಎಸ್.ಬಿ.ಗೌಡರ್ ರವರು ಸಹಕಾರಿ ಸಂಘಕ್ಕೆ ಕ್ರಿಯಾಶೀಲರಾಗಿ ಸ್ಪಂದಿಸಿದ ಕೆಲಸ ನಿರ್ವಹಿಸಿದ ವ್ಯಕ್ತಿಯಾಗಿದ್ದರು ಎಂದರು.
ಬನವಾಸಿ ಗ್ರಾ.ಪಂ ಮಾಜಿ ಅಧ್ಯಕ್ಷ ಸಣ್ಣಲಿಂಗಯ್ಯ, ಲೋಕೋಪಯೋಗಿ ಇಲಾಖೆಯ ಉಮಾನಾಯಕ, ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷ ಕೆ.ಜಿ.ನಾಗರಾಜ, ತಿಮ್ಮಪ್ಪ ಮಡಿವಾಳ ಹಿತ್ಲಕೊಪ್ಪ, ಜನಾರ್ಧನ ನಾಯ್ಕ ಗೋಳಗೋಡು, ಸಾಗರದ ಹಿರಿಯ ನ್ಯಾಯವಾಧಿ ಎಮ್.ಎಸ್.ಗೌಡರ್ ಹೆಗ್ಗೋಡಮನೆ, ಪ್ರವೀಣ ಗೌಡರ್ ತೆಪ್ಪಾರ, ತಾ.ಪಂ ಅಧ್ಯಕ್ಷ ಸುಧೀರ ಗೌಡರ್, ಹರತಾಳ ನಾಗರಾಜ ಗೌಡರ್, ಟಿ.ಡಿ ಮೇಘರಾಜ ಸಾಗರ, ವೆಂಕಟೇಶ ಹೊಸಬಾಳೆ, ಕೆ.ಡಿ.ಸಿ.ಸಿ ಬ್ಯಾಂಕ್ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಎನ್.ಪಿ. ಗಾಂವಕರ್, ಕೋಲಸಶಿರ್ಸಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಆರ್.ವಿನಾಯಕ, ಹಿತ್ಲಕೊಪ್ಪ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವೆಂಕಟೇಶ ಮಡಿವಾಳ, ತಾಲೂಕಾ ವೀರಶೈವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಪರಮೇಶ್ವರಯ್ಯ ಕಾನಳ್ಳಿಮಠ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಗೌಡರ್ ಹೆಗ್ಗೋಡಮನೆ, ಚಂದ್ರಕಾಂತ ನಾಯ್ಕ ಕಲ್ಲೂರು, ನ್ಯಾಯವಾಧಿ ದಿನೇಶ ನಾಯ್ಕ ಮೆಣಸಿ, ಜಿ.ಜಿ.ಹೆಗಡೆ ಬಾಳಗೋಡ, ಸತೀಶ ಗೌಡರ್ ಹೆಗ್ಗೋಡಮನೆ, ನಾಗರಾಜ ದೋಶೆಟ್ಟಿ, ಪುಟ್ಟಯ್ಯನವರ್ ಆಲಳ್ಳಿಮಠ, ಸಂದೀಪ ಎಸ್.ಬಿ. ಮೊದಲಾದವರು ಮಾತನಾಡಿ ಷಣ್ಮುಖ ಗೌಡರ್ ವ್ಯಕ್ತಿತ್ವವನ್ನು ಸ್ಮರಿಸಿದರು.
ಶ್ರದ್ಧಾಂಜಲಿ
ದಿನಾಂಕ:21-12-2020 ರಂದು ವಿಧಿವಶರಾದ ಸಾಮಾಜಿಕ ಧುರಿಣರಾದ ಶ್ರೀ ಷಣ್ಮುಖ ಗೌಡರ ಕಲ್ಲೂರು ಇವರಿಗೆ ಸಂತಾಪ ಸೂಚಿಸುವ ಸಲುವಾಗಿ ಶಿಕ್ಷಣ ಪ್ರಸಾರಕ ಸಮಿತಿಯ ಆಡಳಿತ ಮಂಡಳಿಯ ಸದಸ್ಯರು ತುರ್ತು ಸಭೆ ಸೇರಿ ಮೌನವನ್ನಾಚರಿಸುವ ಮೂಲಕ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.
ಜಿಲ್ಲಾ ಸಹಕಾರ ಸಂಘಗಳ ಭೀಷ್ಮ ಎಂದೇ ಖ್ಯಾತರಾಗಿದ್ದ ಶ್ರೀ ಷಣ್ಮುಖ ಗೌಡರ ನಿಧನ ಜಿಲ್ಲೆಯ ಸಹಕಾರ ವಲಯಕ್ಕೆ ತುಂಬಿ ಬರಲಾರದ ನಷ್ಟ ಎಂದು ಹಾಗೂ ಶಿಕ್ಷಣ ಪ್ರಸಾರಕ ಸಮಿತಿಯ ಜೊತೆ ಅವರ ವಡನಾಟವನ್ನು ಸ್ಮರಿಸುತ್ತಾ ಸಂಸ್ಥೆಯ ಚೇರಮನ್ ವಿನಾಯಕರಾವ್ ಜಿ ಹೆಗಡೆ ದೊಡ್ಮನೆ ಸಂತಾಪವನ್ನು ಸೂಚಿಸಿದರು.
ಸಭೆಯು ಇತ್ತೀಚಿಗೆ ಅಕಾಲಿಕವಾಗಿ ಅಗಲಿದ ನಿವೃತ್ತ ಕಂದಾಯ ನಿರೀಕ್ಷಕ ಚಂದ್ರಶೇಖರ ಜಿ ಅಪ್ಪಿನ ಬೈಲ್ ರಿಗೂ ಮೌನವನ್ನಾಚರಿಸುವ ಮೂಲಕ ಸಂತಾಪವನ್ನು ಸೂಚಿಸಿತು. ಉಪಾಧ್ಯಕ್ಷರಾದ ಡಾ.ಶಶಿಭೂಷಣ ವಿ ಹೆಗಡೆ ಮಾತನಾಡಿ ಅಪ್ಪಿನ ಬೈಲ್ ಶಾನಭಾಗ ಎಂದೆ ಚಿರಪರಿಚಿತರಾಗಿದ್ದ ಇವರ ಪ್ರಾಮಾಣಿಕ, ನಿಸ್ಪ್ರ ಹ ಸೇವೆಯನ್ನು ಮತ್ತು ಕಂದಾಯ ವಿಭಾಗದಲ್ಲಿ ಹೊಂದಿದ ಅಪಾರ ಅನುಭವ ಹಾಗೂ ಸೇವೆಯಲ್ಲಿದ್ದಾಗ ಜನ ಸ್ನೇಹಿಯಾಗಿ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಿದರು.
ಮೃತರು ಶಿಕ್ಷಣ ಪ್ರಸಾರಕ ಸಮಿತಿಯೊಂದಿಗಿನ ಉತ್ತಮ ಭಾಂದವ್ಯವನ್ನು ಹೊಂದಿದ್ದು, ಸಮಿತಿಗೆ ಕಂದಾಯ ವಿಭಾಗದಲ್ಲಿ ಮಾರ್ಗದರ್ಶನವನ್ನು ನೀಡುತಿದ್ದುದ್ದನ್ನು ಸಭೆಯು ಈ ಸಂದರ್ಭದಲ್ಲಿ ಸ್ಮರಿಸಿತು.




