

ಜಾತ್ಯಾತೀತ ಜನತಾದಳದ ಯುವ ನಾಯಕ ಡಾ.ಶಶಿಭೂಷಣ ಹೆಗಡೆ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಗಾಳಿಸುದ್ದಿಗಳಿರುವಂತೆ ಶಶಿಭೂಷಣ್ ಬಿ.ಜೆ.ಪಿ. ಸೇರುತ್ತಾರೆ ಎನ್ನುವ ಚರ್ಚೆಗಳೂ ಕೂಡಾ ಪ್ರಾರಂಭವಾಗಿವೆ.


ವಾಸ್ತವದಲ್ಲಿ ಶಶಿಭೂಷಣ್ ಹೆಗಡೆ ಮತ್ತವರ ಕುಟುಂಬ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಇದೇ ಕುಟುಂಬದ ಎಐಸಿ.ಸಿ. ಸದಸ್ಯ ಪ್ರಶಾಂತ್ ದೇಶಪಾಂಡೆ ಶಶಿಭೂಷಣ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಡಾ.ಶಶಿಭೂಷಣ್ ಕಾಂಗ್ರೆಸ್ ಸೇರುತ್ತಾರೆ. ಕಾಂಗ್ರೆಸ್ ನಿಂದ ಯಲ್ಲಾಪುರ ಕ್ಷೇತ್ರ ಅಥವಾ ಅವರ ಹಳೆ ಕ್ಷೇತ್ರ ಕುಮಟಾದಿಂದ ವಿಧಾನಸಭೆಯ ಅಭ್ಯರ್ಥಿಯಾಗುತ್ತಾರೆ ಎನ್ನಲಾಗುತ್ತಿದೆ.
ಇದರ ಮಧ್ಯೆ ಈ ಹಿಂದೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರಶಾಂತ್ ದೇಶಪಾಂಡೆ ಶಶಿಭೂಷಣ ಮತ್ತವರ ಜಾತಿ ಬೆಂಬಲದಿಂದ ಕುಮಟಾ, ಹಳಿಯಾಳ, ಯಲ್ಲಾಪುರಗಳಲ್ಲಿ ವಿಧಾನಸಭಾ ಅಭ್ಯರ್ಥಿಯಾಗುವ ಯೋಚನೆಯಲ್ಲಿದ್ದಾರೆ ಹಾಗಾಗಿ ಡಾ. ಶಶಿಭೂಷಣ್ ರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದರೆ ವಿಧಾನಸಭೆ ಅಥವಾ ಲೋಕಸಭೆಗೆ ಅವರನ್ನೂ ಕಳಿಸಬಹುದು ಅಥವಾ ಅವರ ನೆರವಿನಿಂದ ತಾನೂ ಕೂಡಾ ವಿಧಾನಸಭೆ ಅಥವಾ ಲೋಕಸಭೆಗೆ ಪಾದಾರ್ಪಣೆ ಮಾಡಬಹುದು ಎಂದು ಯೋಚಿಸಿದ್ದಾರೆ ಎನ್ನುವ ಲೆಕ್ಕಾಚಾರದ ಸುತ್ತ ಈ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
ಈ ಲೆಕ್ಕಾಚಾರ, ಸಾಧ್ಯತೆಗಳು ಒಂದೆಡೆಯಾದರೆ ಮಾನಸಿಕವಾಗಿ ಬಿ.ಜೆ.ಪಿ. ಕಡೆ ಇರುವ ಡಾ.ಶಶಿಭೂಷಣ ಹೆಗಡೆ ಯಲ್ಲಾಪುರ, ಶಿರಸಿ,ಕುಮಟಾಗಳಿಂದ ಬಿ.ಜೆ.ಪಿ. ವಿಧಾನಸಭಾ ಅಭ್ಯರ್ಥಿಯಾಗುವ ಯೋಚನೆಯಿಂದ ಬಸವರಾಜ್ ಬೊಮ್ಮಾಯಿ ಮೂಲಕ ಶಶಿ ಕಮಲ ಮುಡಿಯುತ್ತಾರೆ ಎನ್ನುವ ಚರ್ಚೆ ಕೂಡಾ ನಡೆದಿದೆ. ಹೀಗೆ ಅನೇಕ ಲೆಕ್ಕಾಚಾರ, ಶಿಷ್ಟಾಚಾರಗಳು, ಅನಿವಾರ್ಯತೆಗಳ ನಡುವೆ ಶಶಿಭೂಷಣ ಜೆ.ಡಿ.ಎಸ್. ತೊರೆದು ಕಾಂಗ್ರೆಸ್ ಅಥವಾ ಬಿ.ಜೆ.ಪಿ. ಸೇರುತ್ತಾರೆ ಎನ್ನುವ ಚರ್ಚೆಗಳಂತೂ ಚಾಲ್ತಿಯಲ್ಲಿವೆ. ಈ ಹೊಸ ಬೆಳವಣಿಗೆಗಳ ಸುತ್ತ, ಶಶಿಭೂಷಣ್ ರ ತೆರೆಮರೆಯ ಮೌನ! ಗಳ ಹಿನ್ನೆಲೆಯಲ್ಲಿ samaajamukhi.net ಹಾಗೂ smaajamukhi ಯೂ ಟ್ಯೂಬ್ ಚಾನೆಲ್ ಮಾತಿಗೆಳೆದಾಗ ಡಾ. ಶಶಿಭೂಷಣ ಹೊರಗೆಡವಿದ ಸತ್ಯ,ಯೋಚನೆ, ಯೋಜನೆ ಗಳೇ ಬೇರೆ. ಈ ಸಂದರ್ಶನ ನೋಡಿ, samaajamukhi ಯುಟ್ಯೂಬ್ ಚಾನೆಲ್ ಗೆ subscribe ಆಗುವುದನ್ನು ಮರೆಯದಿರಿ.


